• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಣ ಪಡೆದಿಲ್ಲ, ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲು ನಾನು ಸಿದ್ಧನಿದ್ದೇನೆ!

|

ಬೆಂಗಳೂರು, ಅ. 31: ಉಪ ಚುನಾವಣೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲು ಇನ್ನೇನು ಒಂದು ದಿನ ಬಾಕಿಯಿದೆ. ಇದೇ ಸಂದರ್ಭದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳು ಮತ್ತಷ್ಟು ತೀವ್ರವಾಗಿವೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರ ಬಗ್ಗೆ ಮಾಜಿ ಶಾಸಕ ಮುನಿರತ್ನ ಅವರು ಆಣೆ-ಪ್ರಮಾಣ ಮಾಡಿದ್ದಾರೆ. ಇವತ್ತು ಆರ್ ಆರ್ ನಗರದ ವಿಧಾನಸಭಾ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡಿದರು. ಅವರ ಎದುರು ಮುನಿರತ್ನ ಮಾತನಾಡಿದ್ದಾರೆ.

ನಾನು ಹಣ ಪಡೆದು ಬಿಜೆಪಿ ಬಂದಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳು ಆರೋಪ ಮಾಡಬೇಡಿ. ನಾನು ಎಲ್ಲಿಯೂ ಹಣ ಪಡೆದಿಲ್ಲ. ಬೇಕಾದರೆ ಈ ಬಗ್ಗೆ ಅಣೆ ಮಾಡುತ್ತೆನೆ ಎಲ್ಲಿ ಬೇಕಾದರೂ ಬಂದು ಅಣೆ ಮಾಡುತ್ತೇನೆ. ಧರ್ಮಸ್ಥಳಕ್ಕೆ ಬಂದು ಅಣೆ ಮಾಡಲು ನಾನು ಸಿದ್ದನಿದ್ದೇನೆ. ದುಡ್ಡು ತಗೆದುಕೊಂಡು ಬಿಜೆಪಿಗೆ ಬಂದಿದ್ದರೆ ನಾನು ಸರ್ವನಾಶವಾಗಲಿ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಸವಾಲು ಹಾಕಿದರು.

ಯಾರ್ರಿ ಅವನು ಮುನಿರತ್ನ? ನಮಗೆ ಗಾಡ್‌ಫಾದರ್‌ ಆಗೋದಕ್ಕೆ!

ಆರ್ ಆರ್ ನಗರದಲ್ಲಿ ಮುನಿರತ್ನ ಅವರ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಚಾರ ಮಾಡಿದರು. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಮುನಿರತ್ನ ಅವರು ಆಣೆ-ಪ್ರಮಾಣದ ಮಾತನ್ನಾಡಿದರು!

ನಾನು ದುಡ್ಡು ತಗೊಂಡಿದ್ರೆ ಸರ್ವನಾಶ ಆಗಲಿ!

ನಾನು ದುಡ್ಡು ತಗೊಂಡಿದ್ರೆ ಸರ್ವನಾಶ ಆಗಲಿ!

ನನ್ನ ಬಗ್ಗೆ ಕೋಟಿ ಕೋಟಿ ಹಣ ಪಡೆದಿರುವ ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡೋರು ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಬರಲಿ. ನಾನೂ ಬರ್ತೀನಿ, ಪ್ರಮಾಣ ಮಾಡ್ತೀನಿ. ನಾನು ದುಡ್ಡು ತಗೊಂಡಿದ್ರೆ ಸರ್ವನಾಶ ಆಗಿಹೋಗಲಿ. ನಾನು ದುಡ್ಡುಗಾಗಿ ಬಿಜೆಪಿಗೆ ಬಂದಿದ್ರೆ ನಂಜೊತೆ ಇನ್ನೂ 16 ಜನ ಯಾಕೆ ಬರ್ತಿದ್ದರು? ಎಂದು ಚುನಾವಣಾ ಪ್ರಚಾರದಲ್ಲಿ ಸಿಎಂ ಯಡಿಯೂರಪ್ಪ ಅವರ ಎದುರು ಮುನಿರತ್ನ ಹೇಳಿಕೆ ನೀಡಿದರು.

ಮಂತ್ರಿ ಮಾಡಲು ಅವಕಾಶ ಮಾಡಿಕೊಡಿ

ಮಂತ್ರಿ ಮಾಡಲು ಅವಕಾಶ ಮಾಡಿಕೊಡಿ

ಇನ್ನು ಮುನಿರತ್ನ ಅವರ ಪರವಾಗಿ ಆರ್ ಆರ್ ನಗರದಲ್ಲಿ ಮೊದಲ ಸಲ ಪ್ರಚಾರ ಮಾಡಿದ ಸಿಎಂ ಯಡಿಯೂರಪ್ಪ ಅವರು, ಮುನಿರತ್ನ ಅವರನ್ನು 50-60 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಯಾವ ಕಾರಣಕ್ಕೂ ಶೇ 70 ಗಿಂತ ಕಡಿಮೆ ಮತದಾನ ಆಗಬಾರದು.

ಜಾತಿ ಕುಲ ಗೋತ್ರ ಯಾವುದು ಗೊತ್ತಿಲ್ಲ. ಹಿಂದೂ-ಮುಸ್ಲಿಂ-ಕ್ರೈಸ್ತರು ಅಂತ ಬೇಧ ಭಾವ ಮಾಡಿಲ್ಲ. ಮುನಿರತ್ನ ಬಗ್ಗೆ ನಾವು ನಿಮಗೆ ಏನೂ ಹೇಳ ಬೇಕಾಗಿಲ್ಲ. ಅವರ ಕೆಲಸ ಏನು ಅಂತ ಎಲ್ಲರಿಗೂ ಗೊತ್ತಿದೆ. ಇಲ್ಲಿ‌ ಮನೆ ಇಲ್ಲದವರಿಗೆ ಮನೆ ಕಟ್ಡಿಕೊಡುವ ಜವಾಬ್ದಾರಿ ನನ್ನ ಹಾಗೂ ಮುನಿರತ್ನ ಅವರ ಮೇಲಿದೆ. ಮುನಿರತ್ನ ಅವರನ್ನು ಮಂತ್ರಿ ಮಾಡಲು ನೀವೆಲ್ಲ ಅವಕಾಶ ಮಾಡಿ ಕೊಡಬೇಕು ಎಂದು ಸಿಎಂ ಯಡಿಯೂರಪ್ಪ ಅವರ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ನಾಯಕರು ಯಾರು?

ಕಾಂಗ್ರೆಸ್ ಪಕ್ಷದಲ್ಲಿ ನಾಯಕರು ಯಾರು?

ಕಾಂಗ್ರೆಸ್ ಪಕ್ಷದಲ್ಲಿ ನಾಯಕರು ಯಾರು? ಎಂದು ಪ್ರಚಾರ ಭಾಷಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಶ್ನೆ ಮಾಡಿದರು. ಇನ್ನೂ 25 ವರ್ಷಗಳ ಕಾಲ ಕಾಂಗ್ರೆಸ್ ಪ್ರತಿಪಕ್ಷದ ಸ್ಥಾನದಲ್ಲಿಯೇ ಇರಬೇಕಾಗುತ್ತದೆ. ಈ ಮಾತನ್ನು ನಾನು ಹೇಳುತ್ತಿಲ್ಲ. ಸ್ವತಃ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ನಾನು ಒಂದು ಮಾತು ಕೇಳುತ್ತೇನೆ. ನಿಮ್ಮಲ್ಲಿ ಯಾರು ನಾಯಕರು? ರಾಹುಲ್ ಗಾಂಧಿ ಅವರಾ? ಸೋನಿಯಾ ಗಾಂಧಿ ಅವರಾ? ಯಾರು.

ನಾಯಕತ್ವವೇ ಇಲ್ಲದ ಪಕ್ಷ ಕಾಂಗ್ರೆಸ್. ನಮ್ಮ ನಾಯಕ ಪ್ರಧಾನಿ ಮೋದಿ. ಅವರನ್ನು ಇಡಿ ಜಗತ್ತು ನಾಯಕ ಎಂದು ಒಪ್ಪಿದೆ ಎಂದು ಸಿಎಂ ಯಡಿಯೂರಪ್ಪ ಅವರು ಭಾಷಣದಲ್ಲಿ ಹೇಳಿದರು.

ಮುನಿರತ್ನ ಬಂದಿದ್ದರಿಂದ ನಾನು ಸಿಎಂ

ಮುನಿರತ್ನ ಬಂದಿದ್ದರಿಂದ ನಾನು ಸಿಎಂ

ಮನಿರತ್ನ ಅವರು ಸೇರುದಂತೆ 17 ಶಾಸಕರು ಬಿಜೆಪಿಗೆ ಬಂದಿದ್ದರಿಂದಲೇ ನಾನು ಮುಖ್ಯಮಂತ್ರಿ ಆದೆ ಎಂದು ಯಡಿಯೂರಪ್ಪ ಹೇಳಿದರು. ಅಭಿವೃದ್ಧಿ ಮಾಡುವುದು ನನ್ನ ಕೆಲಸ. ಮುನಿರತ್ನ ಅವರನ್ನು ಗೆಲ್ಲಿಸೋದು ನಿಮ್ಮ ಕೆಲಸ. ಮುನಿರತ್ನ ಅವರು ಮುಂದೆ ಮಂತ್ರಿ ಆಗ್ತಾರೆ. ಮುನಿರತ್ನ ಸೇರಿ 17 ಶಾಸಕರು ಅಧಿಕಾರದಲ್ಲಿದ್ದ ಪಕ್ಷ ಬಿಟ್ಟು ಬಂದರು.

ಅವರು ಬರದೆ ಇದ್ದಿದ್ರೆ ನಾನು ಮುಖ್ಯಮಂತ್ರಿ ಆಗುತ್ತಲೇ ಇರಲಿಲ್ಲ ಎಂದು ಯಡಿಯೂರಪ್ಪ ಅವರು ಮುನಿರತ್ನ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

English summary
Chief Minister BS Yediyurappa camapainged in RR Nagar behalf of BJP candidate Munirathna in RR Nagar constituency. I have not taken the money to come BJP. I am ready to swear at Dharmasthala Munirthna calrified. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X