ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡಾಯದ ಬಿಸಿ ತಪ್ಪಿಸಲು ಟಿಕೆಟ್ ಆಕಾಂಕ್ಷಿಗಳಿಗೆ ಯಡಿಯೂರಪ್ಪ ಉಡುಗೊರೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 9: ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳ ಬಂಡಾಯ ಶಮನಕ್ಕೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಪ್ಲ್ಯಾನ್ ಮಾಡಿದ್ದಾರೆ.

ಹಾಗಾಗಿ ಬಿಜೆಪಿಯಲ್ಲಿದ್ದ ಟಿಕೆಟ್ ಆಕಾಂಕ್ಷಿಗಳಿಗೆ ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕೊಟ್ಟು ಸುಮ್ಮನಿರಿಸಿದ್ದಾರೆ. ಇದೀಗ ಉಪ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷೆಯಿಟ್ಟುಕೊಂಡಿದ್ದ ಬಿಜೆಪಿ ಮುಖಂಡರು ಇದೀಗ ನಿಗಮ ಮಂಡಳಿ ಹುದ್ದೆಗಳಿಗೆ ಸಂತೋಷ ಪಡುವಂತಾಗಿದೆ.

ಅನರ್ಹ ಶಾಸಕರಿಗಿದ್ದ ತಲೆಬಿಸಿ ಶಮನವಾಗಿದ್ದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಹುದ್ದೆ ನೀಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಅನರ್ಹ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿಕೊಟ್ಟಿದ್ದಾರ. ಒಟ್ಟು ಎಂಟು ನಿಗಮ ಮಂಡಳಿಗಳಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇಮಕವಾಗಿದೆ.

ಎಂಟು ಅನರ್ಹ ಶಾಸಕರ ಕ್ಷೇತ್ರಗಳಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿನ ಪರಾಜಿತ ಅಭ್ಯರ್ಥಿಗಳಿಗೆ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ. ಉಪಚುನಾವಣಾ ಟಿಕೆಟ್ ವಿಚಾರದಲ್ಲಿ ಅನರ್ಹ ಶಾಸಕರಿಗಿದ್ದ ಆತಂಕವನ್ನು ಸರ್ಕಾರ ಕಡಿಮೆ ಮಾಡಿದೆ.

ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ವಿರುದ್ದ ಸೋತಿದ್ದ ಶರತ್ ಬಚ್ಚೇಗೌಡ ಸೋತಿದ್ದರು.
ಕೆ.ಆರ್. ಪುರಂ ಕ್ಷೇತ್ರದಲ್ಲಿ ಬೈರತಿ ಬಸವರಾಜು ವಿರುದ್ಧ ಸೋತಿದ್ದ ನಂದೀಶ್ ರೆಡ್ಡಿ ಸೋತಿದ್ದರು.
ವಿಜಯನಗರ ಕ್ಷೇತ್ರದಲ್ಲಿ ಆನಂದ್ ಸಿಂಗ್ ವಿರುದ್ಧ ಗವಿಯಪ್ಪ ಸೋಲು ಅನುಭವಿಸಿದ್ದರು.
ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ ಗೌಡ ಪಾಟೀಲ್ ವಿರುದ್ಧ ಬಸನಗೌಡ ತುರವಿಹಾಳ ಸೋತಿದ್ದರು.
ಕಾಗವಾಡ ಕ್ಷೇತ್ರದಲ್ಲಿ ಶ್ರೀಮಂತ ಪಾಟೀಲ್ ವಿರುದ್ಧ ಸೋತಿದ್ದ ರಾಜು ಕಾಗೆ
ಗೋಕಾಕ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಸೋತಿದ್ದ ಅಶೋಕ್ ಪೂಜಾರಿ
ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ. ಪಾಟೀಲ್ ವಿರುದ್ಧ ಸೋತಿದ್ದ ಯು.ಬಿ. ಬಣಕಾರ್
ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ್ ವಿರುದ್ದ ಸೋತಿದ್ದ ವಿ.ಎಸ್. ಪಾಟೀಲ್

ಯಾರಿಗೆ ಯಾವ ಹುದ್ದೆ

ಯಾರಿಗೆ ಯಾವ ಹುದ್ದೆ

-ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿ ಶರತ್ ಬಚ್ಚೇಗೌಡ

-ಬಿಎಂಟಿಸಿ ಉಪಾಧ್ಯಕ್ಷರಾಗಿ ನಂದೀಶ್ ರೆಡ್ಡಿ

-ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎಚ್. ಆರ್. ಗವಿಯಪ್ಪ

-ಕಾಡಾ(ತುಂಗಭದ್ರಾ ಯೋಜನೆ) ಅಧ್ಯಕ್ಷರಾಗಿ ಬಸನಗೌಡ ತುರವಿಹಾಳ

-ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ವಿ.ಎಸ್. ಪಾಟೀಲ್

-ಕಾಡಾ( ಮಲಪ್ರಭಾ- ಘಟಪ್ರಭಾ ಯೋಜನೆ) ಅಧ್ಯಕ್ಷರಾಗಿ ಭರಮಗೌಡ ಕಾಗೆ

-ಕೃಷಿ ಉತ್ಪನ್ನ ಮತ್ತು ಸಂಸ್ಕರಣ ನಿಗಮದ ಅಧ್ಯಕ್ಷರಾಗಿ ಯು.ಬಿ. ಬಣಕಾರ್

-ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಶೋಕ ಪೂಜಾರಿ

ಡಿಸೆಂಬರ್‌ನಲ್ಲಿ ಉಪ ಚುನಾವಣೆ

ಡಿಸೆಂಬರ್‌ನಲ್ಲಿ ಉಪ ಚುನಾವಣೆ

ಅಕ್ಟೋಬರ್ 21ಕ್ಕೆ ನಡೆಯಬೇಕಿದ್ದ ಉಪ ಚುನಾವಣೆಯು ಡಿಸೆಂಬರ್‌ನಲ್ಲಿ ನಡೆಯಲಿದೆ. ಸುಪ್ರೀಂಕೋರ್ಟ್ ಚುನಾವಣೆಯ ದಿನಾಂಕವನ್ನು ಮುಂದೂಡಿದೆ. ರಾಜರಾಜೇಶ್ವರಿ ನಗರ ಹಾಗೂ ಮಸ್ಕಿ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 15 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿತ್ತು‌. ಹೀಗಾಗಿ ಬಿಜೆಪಿ ಸಿಕ್ಕ ಮೊದಲ ಜಯವೆಂದು ಭಾವಿಸಲಾಗಿತ್ತು.

ಅನರ್ಹ ಶಾಸಕರ ದಾರಿ ಸುಲಭ

ಅನರ್ಹ ಶಾಸಕರ ದಾರಿ ಸುಲಭ

ಉಪ ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ಸಿಕ್ಕರೆ ಮೂಲ ಬಿಜೆಪಿಗರಿಗೆ ನಿರಾಸೆಯಾಗುತ್ತಿತ್ತು. ಒಂದೊಮ್ಮೆ ಅನರ್ಹ ಶಾಸಕರನ್ನು ಬಿಟ್ಟು ಬಿಜೆಪಿಯವರಿಗೇ ಟಿಕೆಟ್ ನೀಡಿದರೆ, ಸರ್ಕಾರ ರಚನೆ ಮಾಡಲು ಅಹಕರಿಸಿದ್ದು ಅನರ್ಹ ಶಾಸಕರು ಆಗಿರುವುದರಿಂದ ಇಬ್ಬರನ್ನೂ ಬಿಟ್ಟುಕೊಡುವ ಸ್ಥಿತಿಯಲ್ಲಿ ಸಿಎಂ ಯಡಿಯೂರಪ್ಪ ಇರಲಿಲ್ಲ. ಹೀಗಾಗಿ ಇಬ್ಬರನ್ನೂ ಸಮಾಧಾನಗೊಳಿಸಲು ಯತ್ನ ನಡೆಸಿದ್ದಾರೆ. ಇದೀಗ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನೇಮಕವಾಗಿರುವುದರಿಂದ ಅನರ್ಹ ಶಾಸಕರಿಗೆ ದಾರಿ ಸುಗಮವಾಗಿದೆ.

ವಿಧಾನಸಭೆಯಲ್ಲಿ ಪರಾಜಿತ ಅಭ್ಯರ್ಥಿಗಳಿಗೆ ಪರ್ಯಾಯ ವ್ಯವಸ್ಥೆ

ವಿಧಾನಸಭೆಯಲ್ಲಿ ಪರಾಜಿತ ಅಭ್ಯರ್ಥಿಗಳಿಗೆ ಪರ್ಯಾಯ ವ್ಯವಸ್ಥೆ

ಎಂಟು ಅನರ್ಹ ಶಾಸಕರ ಕ್ಷೇತ್ರಗಳಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿನ ಪರಾಜಿತ ಅಭ್ಯರ್ಥಿಗಳಿಗೆ ಸರ್ಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ. ಉಪಚುನಾವಣಾ ಟಿಕೆಟ್ ವಿಚಾರದಲ್ಲಿ ಅನರ್ಹ ಶಾಸಕರಿಗಿದ್ದ ಆತಂಕವನ್ನು ಸರ್ಕಾರ ಕಡಿಮೆ ಮಾಡಿದೆ.

ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ವಿರುದ್ದ ಸೋತಿದ್ದ ಶರತ್ ಬಚ್ಚೇಗೌಡ ಸೋತಿದ್ದರು.

ಕೆ.ಆರ್. ಪುರಂ ಕ್ಷೇತ್ರದಲ್ಲಿ ಬೈರತಿ ಬಸವರಾಜು ವಿರುದ್ಧ ಸೋತಿದ್ದ ನಂದೀಶ್ ರೆಡ್ಡಿ ಸೋತಿದ್ದರು.

ವಿಜಯನಗರ ಕ್ಷೇತ್ರದಲ್ಲಿ ಆನಂದ್ ಸಿಂಗ್ ವಿರುದ್ಧ ಗವಿಯಪ್ಪ ಸೋಲು ಅನುಭವಿಸಿದ್ದರು.

ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ ಗೌಡ ಪಾಟೀಲ್ ವಿರುದ್ಧ ಬಸನಗೌಡ ತುರವಿಹಾಳ ಸೋತಿದ್ದರು.

ಕಾಗವಾಡ ಕ್ಷೇತ್ರದಲ್ಲಿ ಶ್ರೀಮಂತ ಪಾಟೀಲ್ ವಿರುದ್ಧ ಸೋತಿದ್ದ ರಾಜು ಕಾಗೆ

ಗೋಕಾಕ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಸೋತಿದ್ದ ಅಶೋಕ್ ಪೂಜಾರಿ

ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ. ಪಾಟೀಲ್ ವಿರುದ್ಧ ಸೋತಿದ್ದ ಯು.ಬಿ. ಬಣಕಾರ್

ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ್ ವಿರುದ್ದ ಸೋತಿದ್ದ ವಿ.ಎಸ್. ಪಾಟೀಲ್

English summary
Chief Minister BS Yediyurappa has planned a referendum on BJP ticket aspirants in view of the by-election.Appointed Vice President Of The Board and Corporation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X