ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದ ಯಡಿಯೂರಪ್ಪ: ಏನೇನು ಚರ್ಚೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 9: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು(ಅ.9)ಸಂಜೆ 6 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ಕರೆದಿದ್ದಾರೆ.

ಮಲ್ಲೇಶ್ವರದ ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಮತ್ತು ಸಚಿವರು ಭಾಗಿಯಾಗಲಿದ್ದಾರೆ.

ಅಕ್ಟೋಬರ್ 10ರಿಂದ ಮೂರು ದಿನಗಳಕಾಲ ನಡೆಯುವ ಅಧಿವೇಶನದ ಬಗ್ಗೆ ಚರ್ಚೆ ನಡೆಯಲಿದೆ. ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮುಖ್ಯ ಸಚೇತಕರು ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.

ವಿಧಾನಸಭೆ ಅಧಿವೇಶನ; ಸರ್ಕಾರಕ್ಕೆ ಸಂಕಷ್ಟ ತರುವ ವಿಷಯಗಳುವಿಧಾನಸಭೆ ಅಧಿವೇಶನ; ಸರ್ಕಾರಕ್ಕೆ ಸಂಕಷ್ಟ ತರುವ ವಿಷಯಗಳು

ಅಧಿವೇಶನದಲ್ಲಿ ಕಟ್ಟುನಿಟ್ಟಾಗಿ ಎಲ್ಲರು ಭಾಗಿಯಾಗುವಂತೆ ಸಿಎಂ ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ. ವಿರೋಧ ಪಕ್ಷಗಳ ತಂತ್ರಕ್ಕೆ ರಣತಂತ್ರ ರಚನೆಯ ಬಗ್ಗೆಯೂ ಇಂದು ಚರ್ಚೆ ನಡೆಯಲಿದೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಯಾರು, ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ವಿರೋಧ ಪಕ್ಷದ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್. ಡಿ. ಕುಮಾರಸ್ವಾಮಿ ಇರಲಿದ್ದು, ಚರ್ಚೆ ಕಾವೇರುವ ನಿರೀಕ್ಷೆ ಇದೆ. ಪ್ರತಿಪಕ್ಷದಲ್ಲಿ ಅನೇಕ ಹಿರಿಯ ನಾಯಕರಿದ್ದು, ಸದನ ನಡೆಸುವುದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೂ ಸವಾಲಾಗಿದೆ. ಹಾಗೆಯೇ ಸಿಎಲ್‌ಪಿ ಸಭೆ ಕೂಡ ಇಂದು ನಡೆಯಲಿದ್ದು ಪ್ರತಿಪಕ್ಷ ನಾಯಕ ಯಾರು ಎಂದು ತೀರ್ಮಾನವಾಗಲಿದೆ.

ಯಡಿಯೂರಪ್ಪ ನಿರ್ಲಕ್ಷಿಸಿದರೆ ಬಿಜೆಪಿ ದಿವಾಳಿ: ಕೆಜೆಪಿ ಅಧ್ಯಕ್ಷ ಎಚ್ಚರಿಕೆಯಡಿಯೂರಪ್ಪ ನಿರ್ಲಕ್ಷಿಸಿದರೆ ಬಿಜೆಪಿ ದಿವಾಳಿ: ಕೆಜೆಪಿ ಅಧ್ಯಕ್ಷ ಎಚ್ಚರಿಕೆ

ಇಂದು ಸಂಜೆ 4 ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಚಿವರ ಸಭೆ ಕರೆದಿರುವ ಯಡಿಯೂರಪ್ಪ ಪ್ರವಾಹ ಪರಿಹಾರ ಕಾರ್ಯಗಳು, ಇಲಾಖಾವಾರು ಪ್ರಗತಿ, ತೆರಿಗೆ ಸಂಗ್ರಹ ಕುರಿತು ಅಂಕಿಅಂಶಗಳನ್ನು ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇನ್ನೂ ಸರ್ಕಾರದ ಬೊಕ್ಕಸ ಖಾಲಿಯಾಗಿರುವ ವಿಚಾರವನ್ನೂ ಮುಂದಿಟ್ಟು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧಪಕ್ಷಗಳು ನಿರ್ಧರಿಸಿವೆ. ಹೀಗಾಗಿ ಬಿಜೆಪಿ ಅಧಿಕಾರ ಅವಧಿಯಲ್ಲಿ ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಆಗಿಲ್ಲ ಎಂದು ಅಂಕಿಅಂಶಗಳ ಸಮೇತ ವಿಧಾನಮಂಡಲ ಅಧಿವೇಶನದಲ್ಲಿ ಉತ್ತರಿಸಲು ಯಡಿಯೂರಪ್ಪ ಸಜ್ಜಾಗಿದ್ದಾರೆ.

 ಅಕ್ಟೋಬರ್ 10ರಿಂದ ಮೂರು ದಿನ ವಿಧಾನಸಭೆ ಅಧಿವೇಶನ

ಅಕ್ಟೋಬರ್ 10ರಿಂದ ಮೂರು ದಿನ ವಿಧಾನಸಭೆ ಅಧಿವೇಶನ

ಅಕ್ಟೋಬರ್ 10ರಿಂದ ಮೂರು ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆಯಲಿದೆ. ಬೆಳಗಾವಿ ಸುವರ್ಣಸೌಧದಲ್ಲಿ ನಡೆಯಬೇಕಿದ್ದ ಅಧಿವೇಶನ ಪ್ರವಾಹದ ಕಾರಣದಿಂದಾಗಿ ಬೆಂಗಳೂರಿನಲ್ಲಿಯೇ ನಡೆಯಲಿದೆ. ಅಕ್ಟೋಬರ್ 10-13ರವರೆಗೆ ಜರುಗಲಿದೆ.

 ಪ್ರತಿಪಕ್ಷ ನಾಯಕರ ಆಯ್ಕೆ ಪಕ್ಷದ ಆಂತರಿಕ ವಿಚಾರ

ಪ್ರತಿಪಕ್ಷ ನಾಯಕರ ಆಯ್ಕೆ ಪಕ್ಷದ ಆಂತರಿಕ ವಿಚಾರ

ಪ್ರತಿಪಕ್ಷ ನಾಯಕನ ಆಯ್ಕೆ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದೆ , ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ, ಜನರೇ ಎಲ್ಲವನ್ನು ಗಮನಿಸುತ್ತಿದ್ದಾರೆ. ಬೇರೆಯವರ ಕಡೆ ಬೆರಳು ತೋರಿಸುತ್ತಿದ್ದರು, ಈಗ ಅವರ ಕಡೆ ಎಷ್ಟು ಬೆರಳು ತೋರುತ್ತಿದೆ ಎಂದು ನೋಡಿಕೊಳ್ಳಲಿ, ಅವರ ಮನೆಗೇ ಬೆಂಕಿ ಹತ್ತಿದೆ ಅದನ್ನು ತಣ್ಣಗೆ ಮಾಡಿಕೊಳ್ಳುವ ಕೆಲಸ ಮಾಡಲಿ ಎಂದಿ ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.

 ಅಂಕಿ-ಅಂಶ ಚೆನ್ನಾಗಿದ್ದರೆ ಎರಡು ದಿನದ ಅಧಿವೇಶನವೂ ಬೇಕಿಲ್ಲ

ಅಂಕಿ-ಅಂಶ ಚೆನ್ನಾಗಿದ್ದರೆ ಎರಡು ದಿನದ ಅಧಿವೇಶನವೂ ಬೇಕಿಲ್ಲ

ಅಂಕಿ ಅಂಶ ಚೆನ್ನಾಗಿದ್ದರೆ ಎರಡು ದಿನವೂ ಬೇಕಿಲ್ಲ ಸುಮ್ಮನೆ ತೌಡು ಕುಟ್ಟಬೇಕು ಅಂದ್ರೆ, ತಿಂಗಳಾದ್ರು ಕುಟ್ಟುತ್ತಾಯಿರ್ತಾರೆ, ಟೆಕ್ನಿಕಲ್ ಆಗಿ ಚರ್ಚೆಯಾಗಬೇಕು.
ಆಗ ಚರ್ಚೆಯ ಪಾಯಿಂಟ್ ಆಫ್ ಫೋಕಸ್ ಗೊತ್ತಾಗುತ್ತೆ, ಪಾಯಿಂಟ್ ಇಟ್ಟುಕೊಂಡು ಮಾತನಾಡಲಿ, ಕೇಳಲು ತಯಾರಿದ್ದೇವೆ.

ಎಲ್ಲರ ಅಭಿಪ್ರಾಯಗಳನ್ನು ಕೇಳುತ್ತೇವೆ , ಜನರ ನೆರವಿಗೆ ನಾವು ಬರಲಿಲ್ಲ ಅಂದ್ರ, ಜನರು ಎಲ್ಲಿಗೆ ಹೋಗಬೇಕು, ನಾವು ತಪ್ಪು ಮಾಡಿದ್ದರೆ ಬಯಲಿಗೆಳೆಯಲಿ ಅದಕ್ಕೆ ನಮ್ಮ ಸ್ವಾಗತ, ಅದನ್ನು ಬಿಟ್ಟು ರಾಜಕೀಯವಾಗಿ ಮಾತನಾಡುವುದು ಬಿಡಬೇಕು ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ.

 ಹಣದ ಸಮಸ್ಯೆ ಇದ್ದರೂ ಜನರಿಗೆ ಕೊಡುವ ಕೆಲಸ ಸರ್ಕಾರ ಮಾಡುತ್ತಿದೆ

ಹಣದ ಸಮಸ್ಯೆ ಇದ್ದರೂ ಜನರಿಗೆ ಕೊಡುವ ಕೆಲಸ ಸರ್ಕಾರ ಮಾಡುತ್ತಿದೆ

ನೆರೆ ಬರದ ವಿಚಾರವನ್ನೇ ಪ್ರತಿಪಕ್ಷಗಳು ಅಸ್ತ್ರವನ್ನಾಗಿಸಿಕೊಳ್ಳುವ ವಿಚಾರ, ಅವರ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಬರ ನಿರ್ವಹಣೆ ಹೇಗೆ ಮಾಡಿದೆ ಲೋಕಕ್ಕೆ ಗೊತ್ತು.

ಕುಮಾರಸ್ವಾಮಿ ಅವರು ರೈತರ ಸಾಲಮನ್ನದ ವಿಚಾರದಲ್ಲಿ ಯಾವ ರೀತಿ ನಡೆಕೊಂಡಿದ್ರು ಗೊತ್ತು, ಅವರ ಅಸಹಾಯಕತೆಯನ್ನು ಎಲ್ಲಾ ಕಡೆ ಹೇಳಿಕೊಳ್ಳುವ ಕೆಲಸ ಮಾಡುತ್ತಿದ್ದರು.

ಹಾಗಂತ ಅವರ ಲೋಪದೋಷಗಳು ನಮಗೆ ಆಧಾರವಲ್ಲ, ಜನರ ಕಷ್ಟ ಸುಖದಲ್ಲಿ ಆಗುವುದು ನಮ್ಮ ಕರ್ತವ್ಯ. ಹಿಂದೆಂದೂ ಕೊಡದಂತ ಪರಿಹಾರವನ್ನ ಕೊಡುವ ಕೆಲಸ ಆಗುತ್ತೆ, ಐದು ಲಕ್ಷ ಹಣವನ್ನ ಮನೆ ನಿರ್ಮಾಣಕ್ಕೆ ಕೊಡುತ್ತಿದ್ದೆವೆ, ನಮ್ಮಲ್ಲಿ ಹಣದ ಸಮಸ್ಯೆ ಇದ್ದರು ಜನರಿಗೆ ಹಣ ಕೊಡುವ ಕೆಲಸ ಸರ್ಕಾರ ಮಾಡುತ್ತಿದೆ.

ರಾಜಕೀಯ ಪ್ರೇರಿತವಾಗಿ ಚರ್ಚೆ ಮಾಡುವುದು ಬಿಟ್ಟು, ಸಮಸ್ಯೆಗಳ ಕುರಿತು ಚರ್ಚೆ ಮಾಡಲಿ, ಏನೇ ಲೋಪದೋಷಗಳಿದ್ದರು ಅದನ್ನು ಸರಿಪಡಿಸಿಕೊಳ್ಳಲು ಸರ್ಕಾರ ರೆಡಿ ಇದೆ ಎಂದರು.

English summary
Chief Minister B.S. Yediyurappa called BJP Legislative Assembly today Meeting Today (Oct. 9) at 6 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X