ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾತುಕತೆಗೆ ಕರೆದಿಲ್ಲ : ಸಿದ್ದು ವಿರುದ್ಧ ಬಿಎಸ್ವೈ ಆರೋಪ

|
Google Oneindia Kannada News

ಬೆಂಗಳೂರು,ನ. 18 : ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕೆಜೆಪಿ ಅಧ್ಯಕ್ಷ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರಕ್ಕೆ ಅಂಟಿಕೊಂಡು ಕುಳಿತಿರುವ ಸಿದ್ದರಾಮಯ್ಯ, ತಾವು ಧರಣಿ ನಡೆಸುತ್ತಿದ್ದರೂ ಮಾತುಕತೆ ನಡೆಸುವ ಸೌಜನ್ಯವನ್ನು ತೋರಿಲ್ಲ ಎಂದು ಆರೋಪಿಸಿದ್ದಾರೆ.

ಆನಂದ್ ರಾವ್ ವೃತ್ತದ ಧರಣಿ ಸ್ಥಳದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಬಿ.ಎಸ್.ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದ್ದಾರೆ. ಪ್ರತಿಪಕ್ಷಗಳ ಮಾತಿಗೆ ಅವರು ಮನ್ನಣೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಧರಣಿ ನಿತರ ಸಮಸ್ಯೆ ಆಲಿಸುವಷ್ಟು ಸಮಯ ಅವರ ಬಳಿ ಇಲ್ಲ, ಇದು ಪ್ರತಿಪಕ್ಷಗಳನ್ನು ಅವರು ಕಡೆಗಣಿಸುತ್ತಿರುವುದಕ್ಕೆ ಸಾಕ್ಷಿ ಎಂದರು.

Yeddyurappa protest

ಅ.31 ರಿಂದ ಶಾದಿಭಾಗ್ಯ ಯೋಜನೆ ವಿಸ್ತರಣೆ ಹಾಗೂ ಎಪಿಎಲ್‌ ಕಾರ್ಡ್‌ದಾರರಿಗೂ ಪಡಿತರ ವಿತರಣೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದೇನೆ. ಆದರೆ, ಸಿಎಂ ಸಿದ್ದರಾಮಯ್ಯ ಸೌಜನ್ಯಕ್ಕೂ ಕರೆದು ನಮ್ಮೊಂದಿಗೆ ಮಾತುಕತೆ ನಡೆಸಿಲ್ಲ ಎಂದು ಆರೋಪಿಸಿದರು. ನ.24ರ ವರೆಗೆ ಧರಣಿ ಮುಂದುವರೆಸಿ, ನಂತರ ನ.25 ರಿಂದ ಬೆಳಗಾವಿ ಅಧಿವೇಶನದಲ್ಲಿಯೂ ಧರಣಿ ಮುಂದುವರೆಸುತ್ತೇನೆ ಎಂದು ಯಡಿಯೂರಪ್ಪ ಘೋಷಿಸಿದರು. (ನ.24ರವರೆಗೆ ಧರಣಿ ವಿಸ್ತರಣೆ)

ಅವರ ಧರಣಿ ಪ್ರಚಾರಕ್ಕಾಗಿ : ಯಡಿಯೂರಪ್ಪ ಧರಣಿ ಬಗ್ಗೆ ನವದೆಹಲಿಯಲ್ಲಿರುವ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಶಾದಿ ಭಾಗ್ಯ ಯೋಜನೆಯನ್ನು ಸಮಾಜದ ಎಲ್ಲ ಬಡವರಿಗೂ ವಿಸ್ತರಿಸುವಂತೆ ಒತ್ತಾಯಿಸಿ ಅವರು ನಡೆಸುತ್ತಿರುವ ಧರಣಿ ಕೇವಲ ಪ್ರಚಾರ ತಂತ್ರ ಎಂದು ಆರೋಪಿಸಿದರು.

ಸರ್ಕಾರ ಬಜೆಟ್ ಮಂಡಿಸುವಾಗಲೇ ಶಾದಿ ಭಾಗ್ಯ ಯೋಜನೆ ಬಗ್ಗೆ ಉಲ್ಲೇಖಿಸಲಾಗಿತ್ತು. ಆಗ ವಿಧಾನಸೌಧದಲ್ಲಿ ಯಡಿಯೂರಪ್ಪ ಉಪಸ್ಥಿತರಿದ್ದರು. ಆಗ ಅವರು ಯೋಜನೆ ಕುರಿತು ಏಕೆ ಪ್ರಸ್ತಾಪಿಸಿಲ್ಲ ಎಂದು ಸಿಎಂ ಪ್ರಶ್ನಿಸಿದರು. ಸದ್ಯ ಅಧಿಕಾರ ಕಳೆದುಕೊಂಡಿದ್ದರಿಂದ ಯಡಿಯೂರಪ್ಪ ಅವರಿಗೆ ಬಡವರ ನೆನಪಾಗುತ್ತಿದೆ. ಆದ್ದರಿಂದ ಅವರೊಂದಿಗೆ ಮಾತುಕತೆ ನಡೆಸಿಲ್ಲ ಎಂದು ಸಮರ್ಥನೆ ನೀಡಿದರು.

ಶಾದಿ ಭಾಗ್ಯ, ಮೂಡನಂಬಿಕೆ ನಿಷೇಧ ವಿಧೇಯಕ ಸೇರಿದಂತೆ ಪ್ರತಿಕ್ಷಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೂ ನ.25ರಿಂದ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಉತ್ತರ ನೀಡಲಿದೆ. ಅದನ್ನು ಶಾಂತಿಯಿಂದ ಕುಳಿತು ಕೇಳಿಸಿಕೊಳ್ಳುವ ತಾಳ್ಮೆ ಅವರಿಗೆ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.

English summary
Refusing to call off his day and night sit-in dharna, which entered the 18th day on Monday, November 18 former chief minister B.S.Yeddyurappa urged the government to issue an order extending the Bidai scheme to all poor brides. Yeddyurappa said, CM Siddaramaiah not respecting for opposition party suggestions regarding issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X