ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಸ್ವೈ ವಿಲೀನಕ್ಕೆ ಸ್ಪೀಕರ್ ಕಾಗೋಡು ಏನನ್ತಾರೆ?

By Srinath
|
Google Oneindia Kannada News

BS Yeddyurappa hands over BJP-KJP merger letter to Speaker Kagodu Thimmappa
ಬೆಂಗಳೂರು, ಜ.3: ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಸೇರಿದಂತೆ ಆ ಪಕ್ಷದ ಇತರೆ ಮೂವರು ಶಾಸಕರು ಇಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿಯಾಗಿ ತಮ್ಮನ್ನು ಬಿಜೆಪಿ ಸದಸ್ಯರೆಂದು ಪರಿಗಣಿಸುವಂತೆ ಪತ್ರ ನೀಡಿದ್ದಾರೆ.

ಎರಡೂ ಪಕ್ಷಗಳ ನಾಯಕರ ನಿರ್ಧಾರದಂತೆ ವಿಲೀನಕ್ಕೆ ಒಪ್ಪಿಗೆ ಸೂಚಿಸಿ ಪತ್ರ ಕೊಟ್ಟಿದ್ದೇವೆ. ಬಿಜೆಪಿಯನ್ನು ಬಲಪಡಿಸುವುದು, ಮೋದಿಯನ್ನು ಪ್ರಧಾನಿಯನ್ನಾಗಿ ಮಾಡುವುದೇ ನನ್ನ ಮುಂದಿರುವ ಗುರಿಯಾಗಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ, ಸಿಎಂ ಉದಾಸಿ, ರೇಣುಕಾಚಾರ್ಯ, ಎಂಡಿ ಲಕ್ಷ್ಮಿನಾರಾಯಣ, ಎಸ್ಆರ್ ವಿಶ್ವನಾಥ್, ಸಿಟಿ ರವಿ ಮೊದಲಾದವರು ಹಾಜರಿದ್ದರು.

ಈ ಮಧ್ಯೆ, ಗದಗದಲ್ಲಿ ಮಾತನಾಡಿರುವ ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷವು ಶೀಘ್ರವೇ ಬಿಜೆಪಿ ಜತೆ ವಿಲೀನವಾಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸ್ಪೀಕರ್ ಕಾಗೋಡು ತಿಮ್ಮಪ್ಪ ಏನನ್ತಾರೆ?
ಬಿಜೆಪಿಯಿಂದ ಅಭಿಪ್ರಾಯ ಬಂದ ನಂತರ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ತಲಾ 40 ಸದಸ್ಯರನ್ನು ಹೊಂದಿವೆ. ಮತ ಗಳಿಕೆ ಆಧಾರದಲ್ಲಿ ಜೆಡಿಎಸ್ ಮುಂದೆ ಇದ್ದ ಕಾರಣ ಅದಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ನೀಡಲಾಗಿತ್ತು. ಈಗ ಯಡಿಯೂರಪ್ಪ ಮತ್ತು ಇತರೆ ಶಾಸಕರಾದ ಯುಬಿ ಬಣಕಾರ್, ಗುರುಪಾದಪ್ಪ ನಾಗಮಾರಪಲ್ಲಿ, ವಿಶ್ವನಾಥ್ ಪಾಟೀಲ್ ಅವರು ತಮ್ಮನ್ನು ಬಿಜೆಪಿ ಸದಸ್ಯ ಎಂದು ಮಾನ್ಯತೆ ಮಾಡುವಂತೆ ಮನವಿ ಕೊಟ್ಟಿದ್ದಾರೆ. ಆದರೆ ಈ ಬಗ್ಗೆ ಬಿಜೆಪಿ ಅಭಿಪ್ರಾಯ ಕೂಡ ಮುಖ್ಯವಾಗಿದೆ. ಅವರು ಸೇರಿಸಿಕೊಂಡಿದ್ದಾರೆಯೇ ಇಲ್ಲವೇ ಎಂಬುದು ಗೊತ್ತಿಲ್ಲ. ಈ ವಿಚಾರದಲ್ಲಿ ಬಿಜೆಪಿ ಪತ್ರ ಕೊಟ್ಟ ನಂತರ ನಾನು ನನ್ನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷಾಂತರ ನಿಷೇಧ ಕಾಯ್ದೆ?
ಇನ್ನು, ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು 'ಅದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಚುನಾವಣಾ ಆಯೋಗ ನಿರ್ಧಾರ ಮಾಡುತ್ತದೆ'ಎಂದು ಕ್ಲುಪ್ತವಾಗಿ ತಿಳಿಸಿದರು.

ಆಯೋಗದ ಲೆಕ್ಕಾಚಾರವೇನು?
ಎಲ್ಲಾ ಶಾಸಕರು ಸ್ವಯಂಪ್ರೇರಿತರಾಗಿ ಬಿಜೆಪಿಯಲ್ಲಿ ವಿಲೀನಗೊಳಿಸುತ್ತಿರುವ ಪತ್ರವನ್ನು ಚುನಾವಣಾ ಆಯೋಗಕ್ಕೆ ಪ್ರತ್ಯೇಕವಾಗಿ ನೀಡಬೇಕು. ಈ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಮೂರ್‍ನಾಲ್ಕು ದಿನ ಹಿಡಿಯಲಿದೆ. ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಮೂರನೇ ಒಂದರಷ್ಟು ಶಾಸಕರು ತಮಗೆ ಇಷ್ಟವಾದ ಪಕ್ಷಕ್ಕೆ ವಲಸೆ ಹೋಗಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಬಿಜೆಪಿ-ಕೆಜೆಪಿ ವಿಲೀನಕ್ಕೆ ಯಾವ ಅಡ್ಡಿಗಳೂ ಎದುರಾಗುವುದಿಲ್ಲ ಎನ್ನಲಾಗಿದೆ.

English summary
As BS Yeddyurappa officially returns to BJP, today he met the Speaker Kagodu Thimmappa and handed over the letter to this effect. In return the Speaker said that he will wait for BJP to let me know their stand on the issue. Only after he will decide about the status to be accorded to KJP MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X