ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ 'ಆಕ್ಸಿಜನ್ ಮ್ಯಾನ್' ಯತೀಶ್ ಬಗ್ಗೆ ತಿಳಿದಿದೆಯೇ?

|
Google Oneindia Kannada News

ಬೆಂಗಳೂರು, ಮೇ 23; ಕರ್ನಾಟದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣ, ಅತಿ ಹೆಚ್ಚು ಹೊಸ ಕೋವಿಡ್ ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗುತ್ತದೆ. ಕಳೆದ ಕೆಲವು ದಿನಗಳಿಂದ ಆಕ್ಸಿಜನ್ ಬೆಡ್, ಆಕ್ಸಿಜನ್ ಸಿಲಿಂಡರ್‌ಗಳಿಗೆ ನಗರದಲ್ಲಿ ಬೇಡಿಕೆ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಆಕ್ಸಿಜನ್ ಕಾನ್ಸನ್‌ಟ್ರೇಟರ್, ಸಿಲಿಂಡರ್‌ಗಳನ್ನು ಒದಗಿಸುವ ಹಲವಾರು ಜನರಿದ್ದಾರೆ. ಇಂತಹವರಲ್ಲಿಯೇ ಒಬ್ಬರು ಯತೀಶ್. "ಸಿಲಿಂಡರ್ ನಮ್ಮನ್ನು ಶೀಘ್ರವಾಗಿ ತಲುಪಿತು. ನಾವು ನನ್ನ ತಂಗಿಯ ಜೀವವನ್ನು ಉಳಿಸಿದೆವು. ಅವಳು ಈಗ ಚೇತರಿಸಿಕೊಳ್ಳುತ್ತಿದ್ದಾಳೆ" ಇಂತಹ ಸಂದೇಶ ನೋಡಿದಾಗ ಯತೀಶ್ ಮುಖದಲ್ಲಿ ಮಂದಹಾಸ ಮೂಡುತ್ತದೆ.

ರಾಮನಗರ: ಸ್ವಂತ ಹಣದಲ್ಲಿ ಆಕ್ಸಿಜನ್ ಪೈಪ್‌ಲೈನ್ ಅಳವಡಿಸಿದ ಸರ್ಕಾರಿ ವೈದ್ಯರಾಮನಗರ: ಸ್ವಂತ ಹಣದಲ್ಲಿ ಆಕ್ಸಿಜನ್ ಪೈಪ್‌ಲೈನ್ ಅಳವಡಿಸಿದ ಸರ್ಕಾರಿ ವೈದ್ಯ

ಹೌದು, ಯತೀಶ್ ಬೆಂಗಳೂರು ನಗರದ 'ಆಕ್ಸಿಜನ್ ಮ್ಯಾನ್'. ಕಳೆದ 25 ದಿನಗಳಲ್ಲಿ ಬೆಂಗಳೂರು ನಗರದ ಹಲವಾರು ಪ್ರದೇಶಗಳ 100ಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತವಾಗಿ ಯತೀಶ್ ಆಮ್ಲಜನಕದ ಸಿಲಿಂಡರ್‌ ಪೂರೈಸಿದ್ದಾರೆ.

ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಕುವೈತ್ ರಾಷ್ಟ್ರದಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ

Yatish Oxygen Man Of Bengaluru Provides Cylinders To Families

ಯತೀಶ್ ಕಳೆದ ವರ್ಷದ ಲಾಕ್‌ಡೌನ್ ಸಮಯದಲ್ಲಿ ತಮ್ಮ ಸಹೋದರ ಮತ್ತು ಬೈಕರ್ ಸ್ನೇಹಿತರೊಂದಿಗೆ ಸೇರಿ ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯ ಔಷಧಿಗಳನ್ನು ತಲುಪಿಸಿದ್ದರು. ಈ ಬಾರಿ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಿ ಜನರ ಜೀವ ಉಳಿಸುತ್ತಿದ್ದಾರೆ. ಯತೀಶ್ ತಂದೆ ಶ್ವಾಸಕೋಶದ ಸೋಂಕಿನಿಂದಾಗಿ ತೀವ್ರ ಉಸಿರಾಟದ ತೊಂದರೆ ಅನುಭವಿಸಿದರು. ಬಳಿಕ ಅವರು ಚೇತರಿಸಿಕೊಂಡರು. ವೈದ್ಯರು ತಂದೆಗೆ ಅಗತ್ಯವಿದ್ದಲ್ಲಿ ಆಮ್ಲಜನಕ ಸಿಲಿಂಡರ್ ಇಟ್ಟುಕೊಳ್ಳಿ ಎಂದು ಸಹ ಸಲಹೆ ನೀಡಿದ್ದರು.

ಸ್ಕೂಟಿಯಲ್ಲಿ ಆಕ್ಸಿಜನ್ ತಲುಪಿಸಿ ಹೃದಯ ಗೆಲ್ಲುತ್ತಿದ್ದಾಳೆ ಉತ್ತರ ಪ್ರದೇಶದ ಯುವತಿಸ್ಕೂಟಿಯಲ್ಲಿ ಆಕ್ಸಿಜನ್ ತಲುಪಿಸಿ ಹೃದಯ ಗೆಲ್ಲುತ್ತಿದ್ದಾಳೆ ಉತ್ತರ ಪ್ರದೇಶದ ಯುವತಿ

ವೈದ್ಯರ ಸಲಹೆ ಬಳಿಕ ಯತೀಶ್ 3 ಸಿಲಿಂಡರ್‌ ಖರೀದಿಸಿದರು. ಅವರು ಅಗತ್ಯವಿರುವ ಸ್ನೇಹಿತರಿಗೆ ಒಂದನ್ನು ನೀಡಿದರು ಮತ್ತು ತುರ್ತು ಉದ್ದೇಶಗಳಿಗಾಗಿ ಎರಡು ಸಿಲಿಂಡರ್‌ಗಳನ್ನು ಇಟ್ಟುಕೊಂಡರು. ಆಗ ಆಕ್ಸಿಜನ್ ಕೊರತೆ ಇಂದ ಜನರು ಸಾವನ್ನಪ್ಪುತ್ತಿರುವ ವಿಚಾರ ಮಾಧ್ಯಮಗಳಲ್ಲಿ ಬರುತ್ತಿತ್ತು.

ತುರ್ತು ಅಗತ್ಯ ಇಲ್ಲದಿದ್ದರೂ 2 ಸಿಲಿಂಡರ್‌ಗಳನ್ನು ಒಂದು ವಾರದ ತನಕ ಮನೆಯಲ್ಲಿ ಇಟ್ಟುಕೊಂಡಿರುವುದು ತಪ್ಪಿತಸ್ಥ ಭಾವವನ್ನು ಯತೀಶ್‌ರಲ್ಲಿ ಮೂಡಿಸಿತು ಮೊದಲು ಅವರು ಅಗತ್ಯವಿರುವ ಜನರಿಗೆ ಅದನ್ನು ನೀಡಲು ಮುಂದಾದರು.

ನಂತರ ಜಿಗಾನಿಯ ಕಂಪನಿಯೊಂದರಿಂದ ಸಿಲಿಂಡರ್‌ ಸಂಗ್ರಹ ಆರಂಭಿಸಿದರು. ಒಂದು ಜಂಬೊ ಆಕ್ಸಿಜನ್ ಸಿಲಿಂಡರ್ ಬೆಲೆ 19,350 ರೂ. ನಿಯಮಿತವಾಗಿ ಬಳಕೆ ಮಾಡಿದರೂ ಎರಡು ದಿನಗಳ ತನಕ ಈ ಸಿಲಿಂಡರ್ ಬರುತ್ತದೆ. ಹಿಂದೆ ಯತೀಶ್‌ಗೆ ಸಹಾಯ ಮಾಡಿದ್ದ ಸ್ನೇಹಿತರಾದ ವಿಜಯ್, ಪ್ರವೀಣ್ ಮತ್ತು ಬಸವರಾಜ್ ಈ ಬಾರಿಯೂ ಯತೀಶ್ ಜೊತೆ ಸೇರಿಕೊಂಡರು.

ಹಿರಿಯ ನಾಗರಿಕರು, ಆಕ್ಸಿಜನ್ ಸಿಲಿಂಡರ್ ಅಗತ್ಯವಿರುವ ಜನರಿಗೆ ಮೊದಲು ಸಿಲಿಂಡರ್ ನೀಡಲು ಆರಂಭಿಸಿದರು. 3-4 ನೇ ಮಹಡಿ ಮನೆಗಳಿಗೂ ಸಿಲಿಂಡರ್ ಹೊತ್ತುಕೊಂಡು ಹೋಗಿ ಜೀವ ಉಳಿಸಿದ್ದಾರೆ. ಯತೀಶ್.

ಈ ಕಾರ್ಯದಲ್ಲಿ ಸಂತಸ ಕಂಡುಕೊಂಡಿದ್ದಾರೆ. ಯತೀಶ್ ಸ್ನೇಹಿತರ ವಲಯದಲ್ಲಿ ಅಂಬ್ಯುಲೆನ್ಸ್ ಸಹ ಇದೆ. ಅಗತ್ಯವಿದ್ದರೆ ಬಿಬಿಎಂಪಿಯ ವಾರ್ಡ್ ಅಂಬ್ಯುಲೆನ್ಸ್ ಅನ್ನು ಬಳಕೆ ಮಾಡಿಕೊಂಡು ತುರ್ತು ಅಗತ್ಯ ಇರುವವರನ್ನು ಆಸ್ಪತ್ರೆಗೆ ಸೇರಿಸಲು ಸಹ ಯತೀಶ್ ಸಹಾಯ ಮಾಡುತ್ತಾರೆ.

ಪ್ರಸ್ತುತ ಆಕ್ಸಿಜನ್‌ಗೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಸರ್ಕಾರ ಯಾವುದೇ ವ್ಯಕ್ತಿಗೆ ಸಿಲಿಂಡರ್ ರಿಫೀಲ್ ಮಾಡಿಸಲು ಅವಕಾಶವಿಲ್ಲ ಆದೇಶ ಹೊರಡಿಸಿದೆ. ಇದರಿಂದಾಗಿ ಯತೀಶ್ ಮತ್ತು ಇವರಂತೆಯೇ ಕಾರ್ಯ ನಿರ್ವಹಣೆ ಮಾಡುವ ಅನೇಕರಿಗೆ ತೊಂದರೆಯಾಗಿದೆ.

Recommended Video

Delhiಯಲ್ಲಿ ಪ್ರಕರಣ ಕಡಿಮೆಯಾದರೂ lockdown ಮುಂದುವರಿಕೆ | Oneindia Kannada

ಯತೀಶ್ ಒಬ್ಬ ವೈದ್ಯರು, ಒಬ್ಬ ನರ್ಸ್ ಮತ್ತು ಆಕ್ಸಿಜನ್ ಸಿಲಿಂಡರ್ ಹೊಂದಿರುವ ಒಂದು ಅಂಬುಲೆನ್ಸ್ ಇರುವ ಸಣ್ಣ ತಂಡವನ್ನು ಕಟ್ಟಲು ಬಯಸಿದ್ದಾರೆ. ತುರ್ತು ಅಗತ್ಯ ಇರುವವರಿಗೆ ಮತ್ತು ಬಡವರಿಗೆ ವೈದ್ಯಕೀಯ ಸೇವೆ ಒದಗಿಸಲು ಬಯಸಿದ್ದಾರೆ.

English summary
Yatish oxygen man of Bengaluru. In 25 he supplied oxygen cylinders to more than 100 families in city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X