• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯತೀಂದ್ರ ಸಿದ್ದರಾಮಯ್ಯ ಬೆಂಬಲಿಗರಿಂದ ಧಮ್ಕಿ?

|

ಬೆಂಗಳೂರು, ಫೆಬ್ರವರಿ 22 : ಕಾಂಗ್ರೆಸ್ ನಾಯಕರ ಗೂಂಡಾಗಿರಿ ಹೆಚ್ಚುತ್ತಿದೆಯೇ?. ಯತೀಂದ್ರ ಸಿದ್ದರಾಮಯ್ಯ ಪಾಲುದಾರಿಕೆ ಹೊಂದಿರುವ ನಿರ್ದೇಶಕ, ಕಾರ್ನರ್ ಬ್ರೋಕರ್ ಗೂಂಡಾಗಿರಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಶಾಂತ ಇಂಡಸ್ಟ್ರೀಸ್ ನಿರ್ದೇಶಕ ರಾಜೇಶ್ ಗೌಡ ಮತ್ತು ಕಾರ್ನರ್ ಬ್ರೋಕರ್ ಸೂರಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗೂಂಡಾಗಿರಿ ಮಾಡಿದ್ದಾರೆ ಎಂಬುದು ಆರೋಪ. ಯತೀಂದ್ರ ಸಿದ್ದರಾಮಯ್ಯ ಶಾಂತ ಇಂಡಸ್ಟ್ರೀಸ್‌ನಲ್ಲಿ ಪಾಲುದಾರರರು.

ವಿದ್ವತ್ ಪ್ರಕರಣ : ರಾಜ್ಯಪಾಲರಿಗೆ ಬಿಜೆಪಿ ದೂರು

ಹೆಬ್ಬಾಳ ಸಮೀಪ ಬಿಡಿಎ ಮಂಜೂರು ಮಾಡಿದ್ದ ನಿವೇಶನದ ಪಕ್ಕದ ಜಮೀನಿನ ಬೇಲಿಯನ್ನು ತೆರವುಗೊಳಿಸಿ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಮಾಲೀಕ ಎಚ್.ಬಿ.ಶಿವರಾಂ ಅವರಿಗೆ ಸಿದ್ದರಾಮಯ್ಯ ಹೆಸರು ಹೇಳಿ ಧಮ್ಕಿ ಹಾಕಿದ್ದಾರೆ.

ಜೆಸಿಬಿಯನ್ನು ಡಿಕ್ಕಿ ಹೊಡೆಸಲು ಪ್ರಯತ್ನ ನಡೆಸಿದ್ದಾರೆ. ಸುಮಾರು 50 ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಿದ್ದಾರೆ ಎಂಬುದು ಆರೋಪವಾಗಿದೆ. ಶಿವರಾಂ ಅವರಿಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಕಾಮಗಾರಿಯನ್ನು ಆರಂಭಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಯುಬಿ ಸಿಟಿಯಿಂದ ಜೈಲು : ನಲಪಾಡ್ ಪ್ರಕರಣದ 10 ಬೆಳವಣಿಗೆ

ಈ ಜಮೀನಿನ ವಿವಾದ ಕೋರ್ಟ್‌ನಲ್ಲಿದೆ. ನ್ಯಾಯಾಲಯ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಹೇಳಿ ರಾಜೇಶ್ ಗೌಡ ಮತ್ತು ಸೂರಿ ಬೆದರಿಸುತ್ತಿದ್ದಾರೆ ಎಂದು ಶಿವರಾಂ ಕುಟುಂಬದವರು ದೂರಿದ್ದಾರೆ.

ಕೆ.ಆರ್‌.ಪುರಂ ಕಾಂಗ್ರೆಸ್‌ ಮುಖಂಡನ ಗೂಂಡಾಗಿರಿ

ಏನಿದು ಭೂ ವಿವಾದ : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಯತೀಂದ್ರ ಸಿದ್ದರಾಮಯ್ಯ ಪಾಲುದಾರಿಕೆಯ ಶಾಂತ ಇಂಡಸ್ಟ್ರೀಸ್‌ಗೆ ಹೆಬ್ಬಾಳ ಫ್ಲೈ ಓವರ್ ಬಳಿ 2.19 ಎಕರೆಯ ಸುಮಾರು 50 ಕೋಟಿ ಮೌಲ್ಯದ ಭೂಮಿಯನ್ನು ಮಂಜೂರು ಮಾಡಿತ್ತು.

ಈ ಜಮೀನಿನ ಪಕ್ಕದಲ್ಲಿಯೇ ಶಿವರಾಂ ಸಹೋದರರು ಸುಮಾರು 19 ಗುಂಟೆ ಜಮೀನನನ್ನು ಹೊಂದಿದ್ದಾರೆ. ಈ ಜಮೀನಿನ ಕುರಿತು ವಿವಾದವಿದ್ದು ಅದು ಕೋರ್ಟ್‌ನಲ್ಲಿದೆ.

ಅಷ್ಟರಲ್ಲೇ ರಾಜೇಶ್ ಗೌಡ ಮತ್ತು ಸೂರಿ ಶಿವರಾಂ ಅವರ ಜಮೀನಿನಲ್ಲಿ ಅಕ್ರಮವಾಗಿ ಕಾಮಗಾರಿ ಆರಂಭಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನು ಪ್ರಶ್ನಿಸಿದ ಶಿವರಾಂ ಅವರಿಗೆ ಬೆದರಿಸುತ್ತಿದ್ದಾರೆ ಎಂಬುದು ಆರೋಪವಾಗಿದೆ.

ಹಿಂದೆಯೂ ಸುದ್ದಿಯಲ್ಲಿದ್ದರು : ಶಾಂತ ಇಂಡಸ್ಟ್ರೀಸ್ ನಿರ್ದೇಶಕ ರಾಜೇಶ್ ಗೌಡ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿಯೂ ಸುದ್ದಿಯಲ್ಲಿದ್ದರು. ಮನೆಯಲ್ಲಿ ಕಂತೆ-ಕಂತೆ ನೋಟುಗಳನ್ನು ಪೂಜೆಗಿಟ್ಟು ಸುದ್ದಿ ಮಾಡಿದ್ದರು.

rajesh

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A person called Shivaram has alleged that Siddaramaiah's son Yathindra's chelas Rajesh Gowda and broker Suri have forcefully tried to encroach land (2 acres 19 gunta worth Rs 50 cr) on Wednesday. He says, with the help of JCB the goons have completely destroyed the grills on the land which was allotted by BDA, adjacent to Hebbal Flyover.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more