ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಿಲ್ಮ್ ಸಿಟಿ ಆಗ್ತಿರೋದು ಖುಷಿ, ಆದ್ರೆ ಮೈಸೂರಿನಲ್ಲಿ ಆಗಬೇಕಿತ್ತು-ಯಶ್

|
Google Oneindia Kannada News

ಬೆಂಗಳೂರು, ಮಾರ್ಚ್ 5: ಫಿಲ್ಮ್ ಸಿಟಿ ನಿರ್ಮಾಣಕ್ಕೆ ಯಡಿಯೂರಪ್ಪ ಸರ್ಕಾರ ಅನುದಾನ ನೀಡಿದ್ದು, ನಟ ಯಶ್ ಸಂತಸಗೊಂಡಿದ್ದಾರೆ. ತಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಇತ್ತೀಚಿಗಷ್ಟೆ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಯಶ್ ಫಿಲ್ಮ್ಸ್ ಸಿಟಿ ನೀಡಬೇಕು ಎಂದು ಯಡಿಯೂರಪ್ಪ ಬಳಿ ಮನವಿ ಮಾಡಿದ್ದರು. ವರ್ಷಗಳಿಂದ ಇದ್ದ ಈ ಬೇಡಿಕೆಯನ್ನು ಸಿಎಂ ಇಂದು ಈಡೇರಿಸಿದ್ದಾರೆ.

ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ

ತಮ್ಮ ಬಜೆಟ್ ನಲ್ಲಿ 500 ಕೋಟಿ ರೂಪಾಯಿಯನ್ನು ಫಿಲ್ಮ್ಸ್ ಸಿಟಿ ನಿರ್ಮಾಣಕ್ಕೆ ಯಡಿಯೂರಪ್ಪ ನೀಡಿದ್ದಾರೆ. ಬೆಂಗಳೂರಿನಲ್ಲಿ ಫಿಲ್ಮ್ಸ್ ಸಿಟಿ ಆಗಲಿದ್ದು, ಯಾವ ಸ್ಥಳ ಎನ್ನುವುದು ಇನ್ನೂ ಅಂತಿಮ ಆಗಬೇಕಿದೆ.

Yash Thanked Yeddyurappa For Film City Announcement

''ನಮ್ಮ ಉದ್ಯಮಕ್ಕೆ ಫಿಲ್ಮ್ ಸಿಟಿ ಅಗತ್ಯ ಇದೆ. ಚಿತ್ರರಂಗಕ್ಕೆ ಕ್ರಿಯಾಶೀಲ ಹಾಗೂ ಬರಹಗಾರರ ಅಗತ್ಯ ಇದೆ. ಈ ಯೋಜನೆ ಬೇಗ ಕಾರ್ಯರೂಪಕ್ಕೆ ಬರಲಿ. ಆದರೆ, ಫಿಲ್ಮ್ ಸಿಟಿ ಮೈಸೂರಿನಲ್ಲಿ ಆಗಿದ್ದರೆ ತುಂಬ ಚೆನ್ನಾಗಿ ಇತ್ತು. ಅಲ್ಲಿ ಟ್ರಾಫಿಕ್ಸ್ ಹಾಗೂ ಜನ ಸಂಖ್ಯೆ ಕಡಿಮೆ ಇತ್ತು. ಸಿನಿಮಾಗೆ ಪೂರಕವಾದ ವಾತಾವರಣ ಇತ್ತು. ಪರವಾಗಿಲ್ಲ ಎಲ್ಲಿ ಮಾಡಿದರೂ ಓಕೆ.'' ಎಂದು ಯಶ್ ಹೇಳಿದ್ದಾರೆ.

ಹೆಚ್ಚು ಬಾರಿ ಬಜೆಟ್ ಮಂಡನೆ ದಾಖಲೆ ಯಾರ ಹೆಸರಿನಲ್ಲಿದೆ?ಹೆಚ್ಚು ಬಾರಿ ಬಜೆಟ್ ಮಂಡನೆ ದಾಖಲೆ ಯಾರ ಹೆಸರಿನಲ್ಲಿದೆ?

'ಓಬೆರಾಯಯನ ಕಥೆ' ಸಿನಿಮಾದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮಕ್ಕೆ ಯಶ್ ಅತಿಥಿಯಾಗಿ ಬಂದಿದ್ದರು. ಈ ವೇಳೆ ಫಿಲ್ಮ್ ಸಿಟಿ ಬಗ್ಗೆ ಪ್ರತಿಕ್ರಿಯೆ ನೀಡಿದರು.

English summary
Kannada actor Yash thanked CM Yeddyurappa for film city announcement in Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X