ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲಗುಪ್ಪ-25, ಮಣೂರು ಮಯ್ಯ ತಂಡದಿಂದ ಹಗಲು ಯಕ್ಷಗಾನ

ಸ್ತ್ರೀ ಪಾತ್ರಧಾರಿ ಯಲಗುಪ್ಪ ಸುಬ್ರಮಣ್ಯ ಹೆಗಡೆಯವರು ಗೆಜ್ಜೆ ಕಟ್ಟಿ ಇಪ್ಪತ್ತೈದು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ 'ಯಲಗುಪ್ಪ-25' ಎಂಬ ಹೆಸರಿನಲ್ಲಿ ಹಗಲು ಯಕ್ಷಗಾನ ಎಡಿಎ ರಂಗಮಂದಿರದಲ್ಲಿ ಕಾಣಬಹುದು.

By Mahesh
|
Google Oneindia Kannada News

ಬೆಂಗಳೂರು, ಜೂನ್ 09: ಪ್ರತಿಭಾನ್ವಿತ ಸ್ತ್ರೀ ಪಾತ್ರಧಾರಿ ಯಲಗುಪ್ಪ ಸುಬ್ರಮಣ್ಯ ಹೆಗಡೆಯವರು ಗೆಜ್ಜೆ ಕಟ್ಟಿ ಇಪ್ಪತ್ತೈದು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ 'ಯಲಗುಪ್ಪ-25' ಎಂಬ ಹೆಸರಿನಲ್ಲಿ ಹಗಲು ಯಕ್ಷಗಾನವಾಗಿ ಇಡೀ ದಿನ ಸಂಭ್ರಮಿಸಲು 'ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ' ನಿರ್ಧರಿಸಿದೆ.

ಹಿರಿಯ ಹಾಗೂ ಕಿರಿಯ ಸುಪ್ರಸಿದ್ಧ ಅತಿಥಿ ಕಲಾವಿದರಿಂದ ಬೆಂಗಳೂರಿನ ಜೆ ಸಿ ರಸ್ತೆಯಲ್ಲಿರುವ ಎ ಡಿ ಎ ರಂಗಮಂದಿರದಲ್ಲಿ ದಿನಾಂಕ 11.06.2017ರ ಭಾನುವಾರದಂದು ಮಧ್ಯಾಹ್ನ 2.30ರಿಂದ ಕಲಾಧರ ಯಕ್ಷ ಬಳಗ ಜಲವಳ್ಳಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕಲ್ಯಾಣಮಸ್ತು (ಕನಕಾಂಗಿ-ರತಿ) ಎಂಬ ಪ್ರಸಂಗಗಳನ್ನು ಸಂಯೋಜಿಸಿ ಆಯೋಜಿಸಿದೆ.

Yalaguppa Subrmanya Hegde 25 : Manur Mayya Yakshakala trust ADA Ranga Mandira

ಶ್ರೀಮತಿ ಪುಷ್ಪಾ ವಿ ಮಯ್ಯ ಹಾಗೂ ಮಣೂರು ವಾಸುದೇವ ಮಯ್ಯ ರವರ ಸಾರಥ್ಯದ 'ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ'ವು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವತ್ತ ಕಾರ್ಯೋನ್ಮುಖವಾಗಿದ್ದು ಈಗಾಗಲೇ ಹಲವಾರು ಕಲಾವಿದರನ್ನು ಗುರುತಿಸಿ ಗೌರವಿಸಿದೆ.

ರಂಗಸ್ಥಳದಲ್ಲಿ ಒಂದು ಸ್ತ್ರೀ ವೇಷ ಮಾಡಿದಾಗ, ಅದಕ್ಕೆ ತಕ್ಕುದಾದ ರೂಪ, ಸ್ವರಭಾರ, ಅಭಿನಯಗಳು ಒಂದಕ್ಕೊಂದು ಹೊಂದಾಣಿಕೆಯಾಗಿದ್ದರೆ ಒಬ್ಬ ಕಲಾವಿದನ ಸ್ತ್ರೀವೇಷ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಉದಾಹರಣೆ
ಎಂದರೆ ಯಕ್ಷ ಲೋಕದ ಅಗ್ರಶ್ರೇಣಿಯ ಸ್ತ್ರೀವೇಷಧಾರಿಯಾಗಿರುವ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರು.

ಕಳೆದ 25 ವರ್ಷಗಳಿಂದ ಗುಂಡಬಾಳ, ಮಾರಣಕಟ್ಟೆ, ಕಮಲಶಿಲೆ, ಮಂದಾರ್ತಿ, ಪೆರ್ಡೂರು, ಸಾಲಿಗ್ರಾಮ ಮತ್ತು ಹೊಸನಗರ (ಈಗಿನ ಎಡನೀರು) ಮೇಳಗಳಲ್ಲಿ ಪ್ರಧಾನ ಸ್ತ್ರೀವೇಷಧಾರಿಯಾಗಿ ಸೇವೆ ಸಲ್ಲಿಸಿ, ಸದ್ಯ ಅತಿಥಿ ಕಲಾವಿದರಾಗಿ ಯಕ್ಷಸೇವೆ ಮಾಡುತ್ತಿದ್ದಾರೆ. ಹೀಗೆ ಯಕ್ಷಗಾನದ ಎಲ್ಲ ತಿಟ್ಟುಗಳಾದ ಬಡಾ ಬಡಗು, ಬಡಗು, ನಡುತಿಟ್ಟು ಹಾಗೂ ತೆಂಕುತಿಟ್ಟಿನಲ್ಲಿ ಅಪರೂಪದ ಯಶಸ್ವೀ ಹಾಗೂ ವೇಷದ ಸೌಂದರ್ಯ ಮತ್ತು ಮಾತಿನ ಸೊಬಗು ಮೇಳೈಸಿರುವ ಬಹು ಬೇಡಿಕೆಯ ಸ್ತ್ರೀ ವೇಷಧಾರಿ ಶ್ರೀ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ.

Yalaguppa Subrmanya Hegde 25 : Manur Mayya Yakshakala trust ADA Ranga Mandira

ಭಾಗವಹಿಸುವ ಅತಿಥಿ ಕಲಾವಿದರು: ಕೊಳಗಿ ಕೇಶವ ಹೆಗಡೆ, ಪ್ರಸನ್ನ ಭಟ್ ಬಾಳ್ಕಲ್, ರಾಮಕೃಷ್ಣ ಹೆಗಡೆ ಹಿಲ್ಲೂರು, ಶಂಕರ ಭಾಗವತ್ ಯಲ್ಲಾಪುರ, ಎನ್ ಜಿ ಹೆಗಡೆ, ಬಳ್ಕೂರು ಕೃಷ್ಣ ಯಾಜಿ, ಜಲವಳ್ಳಿ ವಿದ್ಯಾಧರ ರಾವ್, ಸುಬ್ರಮಣ್ಯ ಚಿಟ್ಟಾಣಿ, ಹಳ್ಳಾಡಿ ಜಯರಾಮ ಶೆಟ್ಟಿ, ಚಪ್ಪರಮನೆ ಶ್ರೀಧರ ಹೆಗಡೆ, ಕಾರ್ತಿಕ ಚಿಟ್ಟಾಣಿ, ಸುಧೀರ ಉಪ್ಪೂರು, ಯಲಗುಪ್ಪ ಸುಬ್ರಮಣ್ಯ ಹೆಗಡೆ, ಐರಬೈಲು ಆನಂದ ಶೆಟ್ಟಿ, ಅಶೋಕ ಭಟ್ ಸಿದ್ದಾಪುರ ಮತ್ತಿತರರು.....

(ಟಿಕೆಟ್ ದರ ಇರುತ್ತದೆ-ಸಂಪರ್ಕ-ಜಗನ್ನಾಥ ಹೆಗಡೆ-99008 08109, ರಮೇಶ್ ಬೇಗಾರ್ ಶೃಂಗೇರಿ - 94481 01708)

ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿ ಯಕ್ಷರಸಿಕರ ಮನದುಂಬುವಂತೆ ಮಾಡಿದೆ. ಕಲಾವಿದರ ಹಾಗೂ ಪ್ರೇಕ್ಷಕರ ಹಿತಚಿಂತನೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ 'ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ' ರಾಜಧಾನಿಯಲ್ಲಿ ಹಲವಾರು ಸುಪ್ರಸಿದ್ಧ ಕಲಾವಿದರ ಸಮಾಗಮದಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸಿದೆ.

English summary
Manur Mayya Yakshakala trust has organised a day long Yakshagana play dedicated to Yalaguppa Subrmanya Hegde. Yalaguppa 25 event is on June 11, 2017 at ADA Ranga Mandira, JC road, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X