ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾಕೂಬ್ ಕಥೆ ಮುಗಿಯಿತು, ಮಿಕ್ಕವರ ಕಥೆ ಏನು? : ಟ್ವೀಟ್ಸ್

By Mahesh
|
Google Oneindia Kannada News

ಬೆಂಗಳೂರು, ಜುಲೈ 30: 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್‌ ಗೆ ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಬೆಳಗ್ಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ.ಮೆಮನ್ ಗೆ ಗಲ್ಲುಶಿಕ್ಷೆ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗಲ್ಲುಶಿಕ್ಷೆ ತಪ್ಪಿಸಿಕೊಳ್ಳಲು ಕೊನೆ ಹಂತದಲ್ಲಿ ಯಾಕೂಬ್ ನಡೆಸಿದ ಕಾನೂನು ಹೋರಾಟ ಫಲ ನೀಡಲಿಲ್ಲ. ಮಹಾರಾಷ್ಟ್ರದ ರಾಜ್ಯಪಾಲ ಹಾಗೂ ರಾಷ್ಟ್ರಪತಿಗಳು ಕೂಡಾ ಕ್ಷಮಾದಾನ ನೀಡಲಿಲ್ಲ. [ಯಾಕೂಬ್ ಮೆಮನ್ ಗೆ ಶಾಪವಾದ '2' ಸಂಖ್ಯೆ]

Yakub Memon

ಇದಕ್ಕೂ ಮುನ್ನ ಸುಪ್ರೀಂಕೋರ್ಟಿನ ತ್ರಿಸದಸ್ಯ ವಿಸ್ತೃತ ನ್ಯಾಯಪೀಠ ಯಾಕೂಬ್ ಅರ್ಜಿಯನ್ನು ಬುಧವಾರ ಮಧ್ಯಾಹ್ನ ತಳ್ಳಿ ಹಾಕಿತ್ತು. ಹೀಗಾಗಿ ಪೂರ್ವ ನಿಗದಿಯಂತೆ ಜುಲೈ 30ರಂದೇ ನಾಗ್ಪುರ ಜೈಲಿನಲ್ಲಿ ಮೆಮನ್ ನನ್ನು ನೇಣಿಗೇರಿಸಲಾಯಿತು.

ಗುರುವಾರ ಬೆಳಗ್ಗೆ 6.30 ನೇಣಿಗೇರಿದ ಯಾಕೂಬ್, 7.01 ಕ್ಕೆ ಮೃತಪಟ್ಟಿದ್ದನ್ನು ವೈದ್ಯರು ದೃಢಪಡಿಸಿದರು. ಮರಣೋತ್ತರ ಪರೀಕ್ಷೆ ನಂತರ ಯಾಕೂಬ್ ಪಾರ್ಥೀವ ಶರೀರವನ್ನು ಆತನ ಕುಟುಂಬ ವರ್ಗಕ್ಕೆ ನೀಡಲಾಗಿದೆ. ಈ ನಡುವೆ ಯಾಕೂಬ್ ಗೆ ಗಲ್ಲುಶಿಕ್ಷೆ ನೀಡಿದ ದಿನದಿಂದಲೂ ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಚರ್ಚೆ ಮುಂದುವರೆದಿದೆ. [ಮೆಮನ್ ಬೆಂಬಲಿಸುವವರು ದೇಶ ದ್ರೋಹಿಗಳು: ಟ್ವೀಟ್ಸ್]

ಭಾರತದಲ್ಲಿ ಗಲ್ಲುಶಿಕ್ಷೆ ನಿಷೇಧದಿಂದ ಹಿಡಿದು, ಯಾಕೂಬ್ ಕಥೆ ಮುಗಿಯಿತು ಇನ್ಮುಂದೆ ಮಿಕ್ಕ ಎಲ್ಲಾ ಅಪರಾಧಿಗಳಿಗೂ ಗಲ್ಲುಶಿಕ್ಷೆ ಜಾರಿಗೊಳಿಸಿ, ಮಧ್ಯರಾತ್ರಿ ನ್ಯಾಯಾಲಯದಿಂದ ತೀರ್ಪು ಬಂದಿದ್ದರ ಬಗ್ಗೆ ಕೂಡಾ ಚರ್ಚಿಸಲಾಗಿದೆ. ಒಟ್ಟಾರೆ, ಮೆಮನ್ ಗೆ ಗಲ್ಲುಶಿಕ್ಷೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. [1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು-timeline]

ತೀರ್ಪಿನ ನಂತರವೂ ಮುಂದುವರೆದ ಡ್ರಾಮಾ

ತೀರ್ಪಿನ ನಂತರವೂ ಮುಂದುವರೆದ ಡ್ರಾಮಾ

ಯಾಕೂಬ್ ಮೆಮನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಗಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್ ಎಲ್ ದತ್ತು ಅವರು ಹೊಸ ತ್ರಿಸದಸ್ಯ ಪೀಠ ರಚಿಸಿದ್ದರು. ಜಸ್ಟೀಸ್ಸ್ ದೀಪಕ್ ಮಿಶ್ರಾ, ಪ್ರಫುಲ್ಲಾ ಸಿ ಪಂತ್ ಹಾಗೂ ಅಮಿತಾವ್ ರಾಯ್ ಅವರು ಮೆಮನ್ ಜೀವನ್ಮರಣ ಪ್ರಶ್ನೆಗೆ ಉತ್ತರ ನೀಡಿದ್ದರು. [ಬುಧವಾರ ರಾತ್ರಿಯ ಹೈಡ್ರಾಮ]

ದಾರಾಸಿಂಗ್ ,ಆಸೀಮಾನಂದ್, ಪುರೋಹಿತ್?

ದಾರಾಸಿಂಗ್ ,ಆಸೀಮಾನಂದ್, ಪುರೋಹಿತ್, ಪ್ರಜ್ಞಾ ಠಾಕೂರ್ ಅವರಿಗೆ ಯಾವಾಗ ಗಲ್ಲುಶಿಕ್ಷೆ ನೀಡುತ್ತೀರಿ?

ಟ್ರ್ರೆಂಡಿಂಗ್ ನಲ್ಲಿ #YakubHanged

ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿ #YakubHanged. ಸಿಎನ್ ಎನ್ ಐಬಿಎನ್ ಪಲ್ಲವಿ ಟ್ವೀಟ್ ಗೆ ಪ್ರತಿಕ್ರಿಯೆಗಳು.

ಗಡಿಯಾಚೆಗಿನ ನೈಜ ಸತ್ಯದ ಬಗ್ಗೆ ಮಾತಾಡಿ

ಯಾಕೂಬ್ ಗಲ್ಲುಶಿಕ್ಷೆ ಸಂಭ್ರಮ ಹಾಗಿರಲಿ ಗಡಿಯಾಚೆಗಿನ ನೈಜ ಸತ್ಯದ ಬಗ್ಗೆ ಮಾತಾಡಿ.

ಯಾಕೂಬ್ ಸಮಾಧಿ ಸ್ಥಳ ಎಲ್ಲಿ?

ಯಾಕೂಬ್ ಸಮಾಧಿ ಸ್ಥಳ ಎಲ್ಲಿ? ಎಂಬ ವಿವರ ಇಲ್ಲಿದೆ. ಅದರೆ, ಯಾವುದೇ ಮಾಧ್ಯಮಗಳಿಗೆ ಚಿತ್ರೀಕರಣಕ್ಕೆ ಅವಕಾಶ ನೀಡಿಲ್ಲ.

ಪ್ರಶಾಂತ್ ಭೂಷಣ್ ವಿರುದ್ಧ ಟ್ವೀಟ್

ಯಾಕೂಬ್ ಪರ ವಕಾಲತ್ತು ವಹಿಸಿಕೊಂಡ ನ್ಯಾಯವಾದಿ ಪ್ರಶಾಂತ್ ಭೂಷಣ್ ವಿರುದ್ಧ ಟ್ವೀಟ್.

ಯಾಕೂಬ್ ಗೆ ಗಲ್ಲು ಶಿಕ್ಷೆ ಮಿಕ್ಕವರಿಗೆ ಸಿಕ್ಕಿಲ್ಲ ಏಕೆ?

ಯಾಕೂಬ್ ಗೆ ಗಲ್ಲು ಶಿಕ್ಷೆ ಮಿಕ್ಕವರಿಗೆ ಸಿಕ್ಕಿಲ್ಲ ಏಕೆ? ಎಂಬುದಕ್ಕೆ ಉತ್ತರ ರೂಪವಾಗಿ ಕಾರ್ಟೂನ್.

ನಟ ಶತ್ರುಘ್ನ ಸಿನ್ಹಾ ಹೇಳಿಕೆ

ಕಲಾವಿದನಾಗಿ, ಮಾನವನಾಗಿ ನಾನು ಗಲ್ಲುಶಿಕ್ಷೆ ಖಂಡಿಸುತ್ತೇನೆ ಎಂದ ನಟ ಶತ್ರುಘ್ನ ಸಿನ್ಹಾ.

English summary
1993 Bombay blasts convict Yakub Memon has been hanged at Nagpur Central Jail on Thursday, July 30.After Yakub's execution, micro-blogging site Twitter has been flooded with comments and it seems that Indian are divided over the capital punishment given to Yakub.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X