• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಪುಷ್ಪ ಸಿಂಧೂರಿ' ಕಾಣಲು ಕಲಾಕ್ಷೇತ್ರದಲ್ಲಿ ಬನ್ನಿ

By Mahesh
|

ಬೆಂಗಳೂರು, ಜುಲೈ 28: ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ ಅರ್ಪಿಸುವ ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರಿಂದ * ಪುಷ್ಪ ಸಿಂಧೂರಿ * ಪ್ರಸಂಗದ ಬಿಡುಗಡೆ ಮತ್ತು ಪ್ರಥಮ ಪ್ರದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ 30ರಂದು ಆಯೋಜನೆಗೊಂಡಿದೆ.

ಕಳೆದ ವರ್ಷ ಇಂದ್ರನಾಗ ಪ್ರಸಂಗದ ಅಪಾರ ಯಶಸ್ಸಿನ ನಂತರ ಮಣೂರು ವಾಸುದೇವ ಮಯ್ಯ ಇವರ ಪರಿಕಲ್ಪನೆ, ರಚನೆ ಮತ್ತು ಸಂಯೋಜನೆ, ಪ್ರಸಾದ್ ಮೊಗೆಬೆಟ್ಟು ಪದ್ಯರಚನೆ, ಅಪ್ರತಿಮ ಕಂಠ ಸಿರಿಯ ಗಾಯಕ, ಮೇಳದ ರಂಗ ನಾಯಕ ಜನ್ಸಾಲೆ ರಾಘು ಆಚಾರ್ ಇವರ ಸಾರಥ್ಯಲ್ಲಿ, ಜೊತೆಗೆ ಬ್ರಹ್ಮೂರರ ಸಾಥ್,ಸುನೀಲ್, ಪ್ರಭು ರವರ ಶ್ರೀಮಂತ ಹಿಮ್ಮೇಳ ಇದಕ್ಕಿದೆ.

Yakshagana ‘Pushpa Sindhuri’ by Sri Perduru Yakshagana Mela

ತನ್ನ ವೃತ್ತಿ ಬದುಕಿಗೆ ಹೊಸ ತಿರುವು ನೀಡಬಲ್ಲ, ಅತೀ ವಿನೂತನ ಪಾತ್ರವೊಂದರಲ್ಲಿ ಥಂಡಿಮನೆ ಶ್ರೀಪಾದ ಭಟ್ರು ನಾಯಕನಲ್ಲ... ಖಳ ನಾಯಕನಾ... ಎನ್ನುವ ಜಬರ್ದಸ್ತ್ ಪಾತ್ರದಲ್ಲಿ ಕಡಬಾಳ ಉದಯ ಹೆಗಡೆ, ನೀಲ್ಕೋಡು ಕಥಾ ನಾಯಕಿಯರಾಗಿ-ಕೆದಿಲರು ಒಂದು ಹೊಸ ಪಾತ್ರದಲ್ಲಿ ನಿಮ್ಮ ಮುಂದೆ

ರವೀಂದ್ರ ದೇವಾಡಿಗ-ನವಶೋಧ ಸತೀಶ್ ಹಾಲಾಡಿ ಹಾಸ್ಯದಲ್ಲಿ, ಅತಿಥಿ ಸೀತಾರಾಮ್ ಕುಮಾರರ ಅಭಿನವ ಉತ್ತರ ಕುಮಾರನಂತಹ ಹಾಸ್ಯಭರಿತ ಹುಂಬ ರಾಜನ ಪಾತ್ರ. ಮೇಳದ ಮಿಂಚಿನ ಗೊಂಚಲುಗಳಂತಿರುವ ಬೀಜಮಕ್ಕಿ-ಕಿರಾಡಿ-ತೊಂಬಟ್ಟು ವಿಶಿಷ್ಟಪಾತ್ರಗಳಲ್ಲಿದ್ದಾರೆ.

ಎಂದು?: 30.07.2016, ಶನಿವಾರ,

ಯಾವಾಗ?: ಸಮಯ: ರಾತ್ರಿ 10,

ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜಯಚಾಮರಾಜೇಂದ್ರ ರಸ್ತೆ, ಬೆಂಗಳೂರು

ಟಿಕೆಟ್ ದರ ಇರುತ್ತದೆ, ಸಂಪರ್ಕ-ಜಗನ್ನಾಥ ಹೆಗಡೆ-99008 08109, ರಮೇಶ್ ಬೇಗಾರ್ ಶೃಂಗೇರಿ - 94481 01708

ಶ್ರೀಮತಿ ಪುಷ್ಪಾ ವಿ ಮಯ್ಯ ಹಾಗೂ ಶ್ರೀ ಮಣೂರು ವಾಸುದೇವ ಮಯ್ಯ ರವರ ಸಾರಥ್ಯದ 'ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ'ವು ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವತ್ತ ಕಾರ್ಯೋನ್ಮುಖವಾಗಿದ್ದು ಈಗಾಗಲೇ ಹಲವಾರು ಕಲಾವಿದರನ್ನು ಗುರುತಿಸಿ ಗೌರವಿಸಿದೆ.

ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿ ಯಕ್ಷರಸಿಕರ ಮನದುಂಬುವಂತೆ ಮಾಡಿದೆ. ಕಲಾವಿದರ ಹಾಗೂ ಪ್ರೇಕ್ಷಕರ ಹಿತಚಿಂತನೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ 'ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನ', ಇದೀಗ 'ಪುಷ್ಪ ಸಿಂಧೂರಿ'ಯ ಬಿಡುಗಡೆ ಹಾಗೂ ಪ್ರಥಮ ಪ್ರದರ್ಶನಕ್ಕೆ ಸಿದ್ಧವಾಗಿದೆ.

English summary
Yakshagana ‘Pushpa Sindhuri’ by Sri Perduru Yakshagana Mela & Guest Artists, Written by Sri Manooru Vasudeva Mayya, Lyrics by Sri Prasad Mogebettu, Organized by 'Manooru Mayya Yakshakala Pratishthana' will be held at Ravindra Kalakshetra, J C Road, Bangalore on 30.07.2016, Saturday from 10pm onwards. Tickets
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more