ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಯ್ಯರು ಯಕ್ಷಗಾನ ಆಟ ಇಟ್ಕಂಡಿದ್ರು,ಬತ್ತಿದ್ರಿ ಅಲ್ದಾ

By ರಾಘವೇಂದ್ರ ಅಡಿಗ, ತೀರ್ಥಹಳ್ಳಿ
|
Google Oneindia Kannada News

ಹ್ವಾಯ್, ಊರಂಗೆ ಮಳಿ ಶುರು ಅಪ್ಪತ್ತಿಲಿ ಎಲ್ಲ ಮ್ಯಾಳ್ದವ್ರು ಬೇರೆ ಬೇರೆ ಕಡೆ ತಿರ್ಗಾಟಕ್ಕೆ ಹೋತ್ರಲ್ದಾ .. ಅದೇ ನಮುನಿ ಸಾಲಿಗ್ರಾಮ ಮ್ಯಾಳದವ್ರು ಎರಡು ತಿಂಗ್ಳು ಮುಂಚಿಯೇ ಬೆಂಗ್ಳೂರಿಗೆ ಬಂದೀರು, ಸುಮಾರ್ ಆಟ ಆಡೀರು.

ಮುಂಚಿಂದನೂ ನಂಗೆ ಸಾಲಿಗ್ರಾಮ ಮ್ಯಾಳದ್ ಆಟ ಕಾಂಬುಕೆ ಭಾರಿ ಇಷ್ಟ ಮರ್ರೆ. ನಾಡ್ದು ಆಗೂಸ್ತು 23, ಶನಿವಾರ ರಾತ್ರಿ 10 ಗಂಟಿಗೆ ಕಲಾಕ್ಷೇತ್ರದಂಗೆ ಒಂದು ಆಟ ಇತ್ತೆ. ಎಂತೆಲ್ಲಾ ಪ್ರಸಂಗ ಇತ್ತ್ ಗೊತ್ತಿತ್ತ

- ರಾಜಾ ರುದ್ರಕೋಪ, ಗದಾಯುದ್ಧ, ಆಮೇಲೆ ಶ್ರೀ ಕೃಷ್ಣ ಪರಂಧಾಮ. ಕೊಳ್ಗಿ ಹೆಗ್ದೇರು, ಹಾಲಾಡಿ ಮಯ್ಯರು, ಹಿಲ್ಲೂರು ಹೆಗ್ಡೇರ ಭಾಗ್ವತ್ಗಿ, ಕೊಂಡದಕುಳಿ, ಯಲಗುಪ್ಪ, ಜಲವಳ್ಳಿ, ಪ್ರಸನ್ನ ಶೆಟ್ಟಿಗಾರ್, ಶಶಿಕಾಂತ್ ಶೆಟ್ರು, ಸಿದ್ಧಕಟ್ಟೆ, ಚಂದ್ರಹಾಸ, ಬಳ್ಕೂರು...ಇವ್ರ ರಂಗಸ್ಥಳ ಹೊಡಿ ಎಬ್ಸೋ ಕೊಣಿತ-ಮಾತು, ರಮೇಶ್ ಭಂಡಾರಿ-ಚಪ್ರಮನಿಯವ್ರದ್ ಹಾಸ್ಯಗಾರ್ಕಿ ಗಮ್ಮತ್ತು, ಕರ್ಕಿ-ಹಿರೇಬೈಲು-ಕ್ವಾಟ ಶಿವಾನಂದ್ರದ್ದು ಚಂಡಿ-ಮದ್ಲಿ, ಹ್ಯಾಂಗ್ ಇರುತ್ತ್ ನಿಮ್ಗೇ ಗೊತ್ತಲ್ದ..

ಅದೂ ಅಲ್ದೆ, ಶನಿವಾರ ರಾತ್ರಿಗೆ ಈ ಆಟ ಇಪ್ಪುಕೋಯಿ, ಆಟ ಕಂಡ್ಕಂಡ್ ಆದಿತ್ಯವಾರ ನಿದ್ರಿ ತೆಗುಕೆ ಏನೂ ಅಡ್ಡಿಲ್ಲ ಮರ್ರೆ. ಇನ್ನೊಂದ್ ವಿಷ್ಯ, ನಮ್ಮ ಮಣೂರು ಮಯ್ಯರು 'ಮಯ್ಯ ಯಕ್ಷ ಕಲ್ಯಾಣ ನಿಧಿ'ಗಾಗಿ ಈ ಆಟ ಇಟ್ಕಂಡಿದ್ರು, ನೀವೆಲ್ಲ ಬತ್ತಿದ್ರಿ ಅಲ್ದಾ.... ಹಂಗಾರೆ ಆಟದ್ ಗರದಂಗೆ ಸಿಕ್ಕುವ ಅಕ್ಕಾ ......

Yakshagana event Mayya Yaksha Kalyana Nidhi to support Artists

*ಪೌರಾಣಿಕ ಯಕ್ಷ ಸಂಭ್ರಮ *
* ಉದ್ದೇಶ : ಮಯ್ಯ ಯಕ್ಷ ಕಲ್ಯಾಣ ನಿಧಿ (ಯಕ್ಷಗಾನ ಕಲಾವಿದರ ಆರ್ಥಿಕ ಸಹಾಯ ನಿಧಿ)
* ಸಂಯೋಜನೆ ಮತ್ತು ಅರ್ಪಣೆ : ಶ್ರೀ ಮಣೂರು ವಾಸುದೇವ ಮಯ್ಯ (ಸಿ ಇ ಓ - ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತ, ಬಸವನಗುಡಿ, ಬೆಂಗಳೂರು)
* ಮೇಳ - ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮತ್ತು ಅತಿಥಿ ಕಲಾವಿದರು
* ದಿನಾಂಕ : 23.08.2014ರ ಶನಿವಾರ ರಾತ್ರಿ 10ರಿಂದ
* ವೇದಿಕೆ : ರವೀಂದ್ರ ಕಲಾಕ್ಷೇತ್ರ, ಜಯಚಾಮರಾಜೇಂದ್ರ ರಸ್ತೆ, ಬೆಂಗಳೂರು
* ಪ್ರಸಂಗ : ರಾಜಾ ರುದ್ರಕೋಪ, ಗದಾಯುದ್ಧ ಮತ್ತು ಶ್ರೀ ಕೃಷ್ಣ ಪರಂಧಾಮ

**ರಾಜಾ ರುದ್ರಕೋಪ: ಕೊಳಗಿ ಕೇಶವ ಹೆಗಡೆಯವರ ಗಾನರಸಧಾರೆ, ರುದ್ರಕೋಪದ ಅತಿರುದ್ರನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಚಿತ್ರಾಕ್ಷಿಯಾಗಿ ಯಲಗುಪ್ಪ ಸುಬ್ರಮಣ್ಯ ಹೆಗಡೆ, ರಕ್ತಜಂಘಾಸುರನಾಗಿ ತುಂಬ್ರಿ

**ಗದಾಯುದ್ಧ: ರಾಘವೇಂದ್ರ ಮಯ್ಯ ಹಾಲಾಡಿಯವರಿಂದ ಗಾನರಸಾಯನ, ಪೌರುಷದ ಕೌರವನಾಗಿ ವಿದ್ಯಾಧರ ಜಲವಳ್ಳಿ, ಕೌರವನಿಗೆ ಬಲಭೀಮನಾಗಿ ಚಂದ್ರಹಾಸ ಹುಡುಗೋಡು, ಸಂಜಯನಾಗಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಸೂತ್ರಧಾರಿ ಕೃಷ್ಣನಾಗಿ ಪ್ರಸನ್ನ ಶೆಟ್ಟಿಗಾರ್, ಮನ ಹಗುರಾಗಿಸುವ ಹಾಸ್ಯದ ಪ್ರಸ್ತುತಿ ಶ್ರೀಧರ ಹೆಗಡೆ ಚಪ್ಪರಮನೆ

Kondadakuli Ramakrishna Hegade

** ಶ್ರೀ ಕೃಷ್ಣ ಪರಂಧಾಮ: ರಾಮಕೃಷ್ಣ ಹೆಗಡೆ ಹಿಲ್ಲೂರುರವರ ಗಾನಗಂಗೆ, ಮಹಾಬಲರಾಮನಾಗಿ ಬಳ್ಕೂರು ಕೃಷ್ಣ ಯಾಜಿ, ಯಾವ ಪಾತ್ರಕ್ಕೂ ಸೈ ಎನ್ನುವ, ಸ್ತ್ರೀ ಪಾತ್ರದಿಂದಲೇ ಪ್ರಖ್ಯಾತಿ ಹೊಂದಿರುವ ಶಶಿಕಾಂತ್ ಶೆಟ್ಟಿ ಕಾರ್ಕಳ ರವರಿಂದ ಕೃಷ್ಣನ ಪರಕಾಯ ಪ್ರವೇಶ, ಸಿಹಿ ಹಾಸ್ಯ - ರಮೇಶ್ ಭಂಡಾರಿ

* ಚಂಡೆ-ಮದ್ದಳೆ : ಪರಮೇಶ್ವರ ಭಂಡಾರಿ ಕರ್ಕಿ, ನಾಗರಾಜ ಭಂಡಾರಿ ಹಿರೇಬೈಲು, ರಾಮ ಭಂಡಾರಿ ಕರ್ಕಿ ಮತ್ತು ಕೋಟ ಶಿವಾನಂದ. ಇನ್ನುಳಿದ ಕಲಾವಿದರ ಪಾತ್ರಗಳನ್ನು ರಂಗಸ್ಥಳದಲ್ಲಿ ನಿರೀಕ್ಷಿಸಿರಿ.

* ಟಿಕೆಟ್ ಸ್ಥಳದಲ್ಲಿ ದೊರೆಯುತ್ತದೆ. ಗೌರವ ಪ್ರವೇಶ ಪ್ರತ್ಯೇಕ : ಪ್ರಥಮ ದರ್ಜೆ - ರೂ. 250, ಬಾಲ್ಕನಿ - ರೂ. 150

* ಒಂದು ಒಳ್ಳೆಯ ಉದ್ದೇಶಕ್ಕಾಗಿ ನಡೆಸುವ ಈ ಯಕ್ಷಗಾನಕ್ಕೆ ತಮ್ಮೆಲ್ಲರ ಸಹಕಾರ ಬಯಸುವ - ಶ್ರೀಮತಿ ಪುಷ್ಪಾ ವಿ ಮಯ್ಯ ಮತ್ತು ಶ್ರೀ ಮಣೂರು ವಾಸುದೇವ ಮಯ್ಯ, ಸಂಸ್ಥಾಪಕರು - ಮಯ್ಯ ಯಕ್ಷ ಕಲ್ಯಾಣ ನಿಧಿ, ಬಸವನಗುಡಿ, ಬೆಂಗಳೂರು, 98451 52933

ಸಂಪೂರ್ಣ ಸಹಕಾರ : ರಮೇಶ್ ಬೇಗಾರ್ ಶೃಂಗೇರಿ - 94481 01708,
* ಮನೋಜ್ ಭಟ್ : 98806 04186,
* ಜಗನ್ನಾಥ ಹೆಗಡೆ : 99008 08109,
*ಸುರೇಶ ಹೆಗಡೆ ಕಡತೋಕ :99865 09511.

ನೋಡಲು ಮರೆಯದಿರಿ : ಮರೆತು ನಿರಾಶರಾಗದಿರಿ

English summary
Yakshagana Cultural Event 'Raja Rudrakopa', 'Gadayuddha' & 'Sree Krishna Parandhama' will be held at Raveendra Kalakshetra, J C Road, Bangalore on 23.08.2014, Saturday from 10pm onwards, organised by Manuru Vasudeva Mayya for 'Mayya Yaksha Kalyana Nidhi' to support needy Yakshagana Artists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X