ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಾವಳಿ ಪಟಾಕಿ ಹಾವಳಿಯಿಂದ ಬೆಂಗಳೂರಿನಲ್ಲಾದ ಮಾಲಿನ್ಯ ಅಷ್ಟಿಷ್ಟಲ್ಲ!

|
Google Oneindia Kannada News

ಬೆಂಗಳೂರು, ನವೆಂಬರ್ 8: ನಿಯಮಗಳನ್ನು ಜಾರಿಗೆ ತಂದಮೇಲೆ ನಿಯಮಗಳನ್ನು ಪಾಲಿಸಬೇಕೇ ಹೊರತು ನಿಯಮ ಮೀರಿದರೆ ಅದಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಕಳೆದ ವರ್ಷ ದೀಪಾವಳಿಗೆ ಹೋಲಿಸಿದರೆ ಈ ಬಾರಿ ಪಟಾಕಿಯಿಂದ ಮಾಲಿನ್ಯ ಹೆಚ್ಚಾಗಿದೆ.

ದೀಪಾವಳಿ ವಿಶೇಷ ಪುರವಣಿ

ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿದ್ದರೂ ಅದೆಲ್ಲವನ್ನು ಮೀರಿ ಪಟಾಕಿ ಸಿಡಿಸಿದ್ದಾರೆ. ಸಂಜೆ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಸಿಡಸಬೇಕು ಎಂದು ಸೂಚನೆ ಇದ್ದರೂ ಕೂಡ ಕಿವಿಗೊಡದ ಸಾರ್ವಜನಿಕರು ಸಂಜೆ 6 ಗಂಟೆಯಿಂದಲೇ ಆರಂಭಿಸಿ ರಾತ್ರಿ ಸುಮಾರು 1 ಗಂಟೆಯವರೆಗೂ ಪಟಾಕಿ ಸಿಡಿಸಿ ಮಾಲಿನ್ಯವನ್ನು ಹೆಚ್ಚು ಮಾಡಿದ್ದಾರೆ.

ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ, ಸುಪ್ರೀಂ ವಿಧಿಸಿದ ಷರತ್ತುಗಳೇನು? ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ, ಸುಪ್ರೀಂ ವಿಧಿಸಿದ ಷರತ್ತುಗಳೇನು?

ನಿಯಮಗಳೆಲ್ಲವನ್ನು ಗಾಳಿಗೆ ತೂರುವುದಾದರೆ ನಿಯಮವನ್ನು ರೂಪಿಸಿ ಪ್ರಯೋಜನವೇನು ಎನ್ನುವುದು ನಮ್ಮ ಅಭಿಪ್ರಾಯ, ಬೆಂಗಳೂರಲ್ಲಿ ಈಗಾಗಲೇ ಮರಗಳ ಸಂಖ್ಯೆ ಕಡಿಮೆಯಾಗಿದೆ ಕಳೆದ ಐದಾರು ವರ್ಷಕ್ಕೆ ಹೋಲಿಸಿದರೆ ಪಟಾಕಿ ಸಿಡಿಸುವುದರ ಸಂಖ್ಯೆ ಕಳೆದ ವರ್ಷ ಸಾಕಷ್ಟು ಕಡಿಮೆಯಾಗಿತ್ತು. ಇದೀಗ ಹಳೇ ಬೆಂಗಳೂರನ್ನು ಮತ್ತೆ ನೆನಪು ಮಾಡಿಕೊಳ್ಳುವಂತೆ ಮಾಡಿದೆ.

ನಗರದ 7 ಕಡೆಗಳಲ್ಲಿ ವಾಯು ಪರಿವೇಷ್ಟಕ ಅಳವಡಿಕೆ

ನಗರದ 7 ಕಡೆಗಳಲ್ಲಿ ವಾಯು ಪರಿವೇಷ್ಟಕ ಅಳವಡಿಕೆ

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಗರದ 7 ಭಾಗಗಳಲ್ಲಿ ನಿರಂತರ ವಾಯು ಪರಿವೇಷ್ಟಕಗಳ ಮೂಲಕ ತಪಾಸಣೆ ನಡೆಸಲಾಗಿದ್ದು, ಮಂಗಳವಾರ ಎಲ್ಲ 7 ಕೇಂದ್ರಗಳಲ್ಲಿ ಹೆಚ್ಚು ಮಾಲಿನ್ಯ ದಾಖಲಾಗಿದೆ. ನಗರ ರೈಲು ನಿಲ್ದಾಣದ ಸುತ್ತಮುತ್ತ ಭಾಗಗಳಲ್ಲಿ ಹೆಚ್ಚಿನ ಮಾಲಿನ್ಯ ಉಂಟಾಗಿದೆ.

ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ, ಆದರೆ ಷರತ್ತುಗಳು ಅನ್ವಯ: ಸುಪ್ರೀಂ ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ, ಆದರೆ ಷರತ್ತುಗಳು ಅನ್ವಯ: ಸುಪ್ರೀಂ

ರಾತ್ರಿ 8ರಿಂದ 10ವರೆಗೆ ಮಾತ್ರ ಪಟಾಕಿ ಸಿಡಿಸಿಬೇಕು

ರಾತ್ರಿ 8ರಿಂದ 10ವರೆಗೆ ಮಾತ್ರ ಪಟಾಕಿ ಸಿಡಿಸಿಬೇಕು

ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಸಿಡಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ. ಹೀಗಿದ್ದರೂ ನಗರದಲ್ಲಿ ಮಾಲಿನ್ಯ ಪ್ರಮಾಣ ಮಾತ್ರ ಕಡಿಮೆಯಾಗುತ್ತಿಲ್ಲ.ಮಾಲಿನ್ಯ ನಿಯಂತ್ರಣ ಮಂಡಳಿ ಸೋಮವಾರ ಬೆಳಗ್ಗೆ 6ರಿಂದ ಎಲ್ಲ ಏಳು ಕೇಂದ್ರಗಳಲ್ಲಿ ರಾಷ್ಟ್ರೀಯ ಮಿತಿಗಿಂತಲೂ ಅಧಿಕ ಪ್ರಮಾಣದ ಮಾಲಿನ್ಯ ದಾಖಲಾಗಿದೆ.

ದೀಪಾವಳಿಗೆ ಪಟಾಕಿ ಹೊಡೆಯಬೇಕಿಲ್ಲ, ಸಿಹಿ ಹಂಚಿದರೂ ಸಾಕು: ಸುಪ್ರೀಂಕೋರ್ಟ್ ದೀಪಾವಳಿಗೆ ಪಟಾಕಿ ಹೊಡೆಯಬೇಕಿಲ್ಲ, ಸಿಹಿ ಹಂಚಿದರೂ ಸಾಕು: ಸುಪ್ರೀಂಕೋರ್ಟ್

ಅಕ್ರಮ ಪಟಾಕಿಗಳ ಜಪ್ತಿ

ಅಕ್ರಮ ಪಟಾಕಿಗಳ ಜಪ್ತಿ

ಪರವಾನಗಿ ಪಡೆಯದೆ ಬಿಬಿಎಂಪಿ ಮೈದಾನದಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದ ಹುಕುಂ ಸಿಂಗ್ ಎಂಬಾತನ ವಿರುದ್ಧ ಇಂದಿರಾನಗರ 6ನೇ ಮುಖ್ಯರಸ್ತೆಯಲ್ಲಿ ಡಿಫೆನ್ಸ್ ಕಾಲೊನಿಯಲ್ಲಿ ಬಿಬಿಎಂಪಿ ಮೈದಾನದಲ್ಲಿ ಪಟಾಕಿ ಅಂಗಡಿ ತೆರೆದಿರುವ ಕುರಿತು ಮಾಹಿತಿ ಲಭ್ಯವಾಗಿತ್ತು.

ಮೈಸೂರಿನಲ್ಲಿ ಅಕ್ರಮ ಪಟಾಕಿ ತಯಾರಿಕೆ ವೇಳೆ ಸ್ಫೋಟ: 7 ಜನರಿಗೆ ಗಾಯ ಮೈಸೂರಿನಲ್ಲಿ ಅಕ್ರಮ ಪಟಾಕಿ ತಯಾರಿಕೆ ವೇಳೆ ಸ್ಫೋಟ: 7 ಜನರಿಗೆ ಗಾಯ

20ಕ್ಕೂ ಅಧಿಕ ಮಂದಿಗೆ ಗಾಯ

20ಕ್ಕೂ ಅಧಿಕ ಮಂದಿಗೆ ಗಾಯ

ಬೆಳಕಿನ ಹಬ್ಬ ದೀಪಾವಳಿ 20ಕ್ಕೂ ಅಧಿಕ ಕುಟುಂಬಗಳಲ್ಲಿ ಅಂಧಕಾರ ತಲೆದೋರಿದೆ. ಪಟಾಕಿ ಸಿಡಿಸುವಾಗ ಮುಂಜಾಗ್ರತಾ ಕ್ರಮವಹಿಸದಿರುವುದು ಅವಘಡಗಳಿಗೆ ಕಾರಂವಾಗಿದೆ. ಮಿಂಟೋ ಕಣ್ಣಿನ ಆಸ್ಪತ್ರೆಯೊಂದರಲ್ಲೇ 12ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

ಪಟಾಕಿ ನೋಡಿದ್ದಕ್ಕೆ ಕಣ್ಣಿಗೆ ಹಾನಿ

ಪಟಾಕಿ ನೋಡಿದ್ದಕ್ಕೆ ಕಣ್ಣಿಗೆ ಹಾನಿ

ಬೊಮ್ಮನಹಳ್ಳಿಯ ದಿವ್ಯಾ ಎಂಬ ಬಾಲಕಿ ಮನೆಯ ಮುಂದೆ ಪಟಾಕಿ ಸಿಡಿಯುತ್ತಿರುವುದನ್ನು ನೋಡುತ್ತಿದ್ದಾಗ ಎಡಗಣ್ಣಿಗೆ ರೆಟಿನಾಕ್ಕೆ ಬೆಂಕಿಯ ಕಿಡಿ ತಾಕಿದೆ. ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

English summary
Deepawali crackers may given pleasure to eyes for few seconds, but sound and air pollution was harmed would be more costlier than celebration for mankind. Here is story about Bengaluru pollution level during this Deepavali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X