• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

10,100 ಹಾಸಿಗೆಯ ಕೊವಿಡ್ ಕೇಂದ್ರದಲ್ಲಿ ಎಷ್ಟು ವೈದ್ಯರು, ಆಹಾರ ಪದ್ಧತಿ ಏನು?

|

ಬೆಂಗಳೂರು, ಜುಲೈ 10: ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭಿಸಲಾಗಿರುವ ವಿಶ್ವದ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ಈ ವಾರದಲ್ಲಿ ಕಾರ್ಯಾರಂಭ ಮಾಡುತ್ತಿದೆ ಎಂದು ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದಾರೆ.

   Negative ಇದ್ರು Positive ಇದೆ ಬನ್ನಿ ಅಂತಾರೆ ಹುಷಾರ್ | Victoria Hospital | Oneindia Kannada

   ಪೊಲೀಸ್ ಹುದ್ದೆಗಳು ಬಿಕರಿಯಾದ ನಂತರ 'ಊರಿಗೆ ಬಿದ್ದ ಬೆಂಕಿ'ಯ ಕುರಿತು...!

   ಇದಕ್ಕೂ ಮುಂಚೆ ದೆಹಲಿಯ ಕಂಟೋನ್ಮೆಂಟ್ ಪ್ರದೇಶ ಹರ್ಯಾಣ ಗಡಿಭಾಗದ ಚಟ್ಟರ್ ಪುರ್ ಸಮೀಪ ನಿರ್ಮಿಸಲಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಕೊವಿಡ್ ಕೇರ್ ಆಸ್ಪತ್ರೆ ವಿಶ್ವದ ಅತಿದೊಡ್ಡ ಕೊವಿಡ್ 19 ಚಿಕಿತ್ಸಾ ಕೇಂದ್ರ ಎನಿಸಿಕೊಂಡಿತ್ತು. ಆ ಕೇಂದ್ರಕ್ಕಿಂತ ಹೆಚ್ಚು ಹಾಸಿಗೆ ಹೊಂದಿರುವ ಸೆಂಟರ್‌ ಈಗ ಬೆಂಗಳೂರಿನಲ್ಲಿ ನಿರ್ಮಾಣವಾಗಿದೆ.

   ವಿಶ್ವದ ಅತಿದೊಡ್ಡ ಕೊವಿಡ್ 19 ಚಿಕಿತ್ಸಾ ಕೇಂದ್ರ ಉದ್ಘಾಟನೆ

   ವಿಶ್ವದ ಅತಿ ದೊಡ್ಡ ಕೋವಿಡ್ ಕೇಂದ್ರ ಅಂದರೆ ಅದರಲ್ಲಿ ಏನೆಲ್ಲಾ ವಿಶೇಷ ಇರಲಿದೆ ಮತ್ತು ಯಾವ ರೀತಿ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಮುಂದೆ ಓದಿ...

   ಸದ್ಯಕ್ಕೆ 6100 ಹಾಸಿಗೆ ಮಾತ್ರ ಸಿದ್ಧವಿದೆ

   ಸದ್ಯಕ್ಕೆ 6100 ಹಾಸಿಗೆ ಮಾತ್ರ ಸಿದ್ಧವಿದೆ

   ವಿಶ್ವದ ಅತಿ ದೊಡ್ಡ ಕೊವಿಡ್ ಆರೈಕೆ ಕೇಂದ್ರದಲ್ಲಿ ಒಟ್ಟು ಹಾಸಿಗೆಗಳ ಸಾಮರ್ಥ್ಯ 10100. ಆದರೆ, ಸದ್ಯಕ್ಕೆ 6100 ಹಾಸಿಗೆ ಮಾತ್ರ ಸಿದ್ಧವಿದೆ. ಇನ್ನು 4000 ಹಾಸಿಗೆ ಸಜ್ಜಾಗುತ್ತಿದೆ. ಈ ಕೇಂದ್ರದಲ್ಲಿ ಒಟ್ಟು ಐದು ಹಾಲ್‌ಗಳಿವೆ. ಮೊದಲನೇ ಹಾಲ್‌ನಲ್ಲಿ 920 ಬೆಡ್, ಎರಡನೇ ಹಾಲ್‌ನಲ್ಲಿ 872 ಬೆಡ್, ಮೂರನೇ ಹಾಲ್‌ನಲ್ಲಿ 1180 ಬೆಡ್, ನಾಲ್ಕನೇ ಹಾಲ್‌ನಲ್ಲಿ 1512 ಬೆಡ್, ಐದನೇ ಹಾಲ್‌ನಲ್ಲಿ 1616 ಬೆಡ್ ವ್ಯವಸ್ಥೆ ಮಾಡಲಾಗಿದೆ.

   ಸಿಬ್ಬಂದಿಯ ವಿವರ ಇಂತಿವೆ

   ಸಿಬ್ಬಂದಿಯ ವಿವರ ಇಂತಿವೆ

   ರಾಜ್ಯದಲ್ಲಿ ವೈದ್ಯರು, ನರ್ಸ್‌ಗಳು ಮಾನವ ಸಂಪನ್ಮೂಲದ ಕೊರತೆ ಇದೆ ಎಂಬ ಆರೋಪ ಇದೆ. ಆದರೂ ವಿಶ್ವದಾತಿ ದೊಡ್ಡ ಕೊವಿಡ್ ಕೇಂದ್ರದಲ್ಲಿ 2100 ಸಿಬ್ಬಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ವೈದ್ಯರು 300, ನರ್ಸ್‌ಗಳು 500, ಸಹಾಯಕರು 300, ಶುಚಿತ್ವ ಸಿಬ್ಬಂದಿ 400, ಮಾರ್ಷಲ್‌ಗಳು 300 ಹಾಗೂ ಆರಕ್ಷಕ ಸಿಬ್ಬಂದಿ 300 ಜನರು ಕರ್ತವ್ಯ ನಿರ್ವಹಿಸಲಿದ್ದಾರೆ.

   ಸೋಂಕಿತರಿಗೆ ನೀಡುವ ಆಹಾರ

   ಸೋಂಕಿತರಿಗೆ ನೀಡುವ ಆಹಾರ

   - ಬೆಳಗ್ಗೆ 8ಕ್ಕೆ ಉಪಹಾರ: ಇಡ್ಲಿ, ಪೊಂಗಲ್, ದೋಸೆ, ಚೌಚೌ ಬಾತ್

   - ಬೆಳಗ್ಗೆ 10 ಗಂಟೆಗೆ: ಹಣ್ಣು ಮತ್ತು ಸೂಪ್‌ಗಳು

   - ಮಧ್ಯಾಹ್ನ 12ಕ್ಕೆ: ರೊಟ್ಟಿ, ಚಪಾತಿ, ಸಬ್ಜಿ, ಪಲ್ಯ, ಅನ್ನ, ಸಾಂಬಾರ್, ಮೊಸರು

   - ಸಂಜೆ 5ಕ್ಕೆ ಲಘು ಉಪಹಾರ: ಬಾಳೆಹಣ್ಣು, ಬಿಸ್ಕತ್, ಡ್ರೈಫ್ರೂಟ್ಸ್

   - ರಾತ್ರಿ 7 ಗಂಟೆಗೆ: ರೊಟ್ಟಿ, ಚಪಾತಿ, ಸಬ್ಜಿ, ಪಲ್ಯ, ಅನ್ನ, ಸಾಂಬಾರ್, ಮೊಸರು

   - ಮಲಗುವ ಮುಂಚೆ: ಅರಿಶಿಣ ಬೆರೆಸಿದಹಾಲು

   ಮನರಂಜನೆಯೂ ಒಳಗೊಂಡಿದೆ

   ಮನರಂಜನೆಯೂ ಒಳಗೊಂಡಿದೆ

   ಸಮಯ ಕಳೆಯಲು ಸೋಂಕಿತರಿಗೆ ಇತರೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಯೋಗ, ಪ್ರೇರಣ ಭಾಷಣ, ಕೇರಂ, ಚೆಸ್, ಗ್ರಂಥಾಲಯ, ದಿನಪತ್ರಿಕೆ, ಮಾಸಪತ್ರಿಕೆಗಳು, ಇಂಟರ್‌ನೆಟ್‌ ಸೌಲಭ್ಯ, ಆರೋಗ್ಯ ತಜ್ಞರಿಂದ ವಿಶೇಷ ಭಾಷಣವನ್ನು ಒಳಗೊಂಡಿದೆ.

   ಸಿಬ್ಬಂದಿಗೆ ಅಗತ್ಯ ಸುರಕ್ಷತಾ

   ಸಿಬ್ಬಂದಿಗೆ ಅಗತ್ಯ ಸುರಕ್ಷತಾ

   ಸಿಬ್ಬಂದಿಗೆ ಅಗತ್ಯ ಸುರಕ್ಷತಾ ಸಾಮಗ್ರಿ, ತುರ್ತು ಚಿಕಿತ್ಸಾ ಸೌಲಭ್ಯಗಳು, ಐಸಿಯು ಘಟಕ, ಇಸಿಜಿ, ಆಕ್ಸಿಜನ್ ಸಪೋರ್ಟ್, ಪ್ರಥಮ ಚಿಕಿತ್ಸೆ, ಫಾರ್ಮಸಿ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗುವುದು. ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ಸೋಂಕಿತರ ಬೆಡ್ ಶೀಟ್, ಬ್ಲಾಂಕೆಟ್ ತೊಳೆಯಲು ಲಾಂಡ್ರಿ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ಜೊತೆಗೆ ಸಮೀಪದ ಆಸ್ಪತ್ರೆಯೊಂದಿಗೆ ಸಂಯೋಜನೆ ಹಾಗೂ ದಿನದ 24 ಗಂಟೆಯೂ ಇವುಗಳನ್ನು ಮೇಲ್ವಿಚಾರಣೆ ನಡೆಸುವ ನಿಯಂತ್ರಣಾ ಕೊಠಡಿ ಸ್ಥಾಪಿಸಲಾಗುತ್ತಿದೆ.

   English summary
   world largest covid 19 centre (CCC) with 10,100 beds at Bangalore International Exhibition Centre (BIEC) is a significant step in this direction. what is specialty of this?
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more