ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ರಂಗ ಭೂಮಿ ದಿನ: ರಂಗಶಂಕರದಲ್ಲಿ ಬೀದಿಯೊಳಗೊಂದು ಮನೆಯ ಮಾಡಿ

|
Google Oneindia Kannada News

ಮಾರ್ಚ್ 27, ವಿಶ್ವ ರಂಗ ಭೂಮಿ ದಿನದಂದು ರಂಗ ಶಂಕರದ ನಾಟಕ 'ಬೀದಿಯೊಳಗೊಂದು ಮನೆಯ ಮಾಡಿ' ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.

ವಿಕೃತಗೊಳ್ಳುತ್ತಿರುವ, ಭಕ್ತಿಯನ್ನು ಕಳಚಿ ಢಾಂಬಿಕತೆಯ ಮೆರುಗು ಪಡೆಯುತ್ತಿರುವ ಧಾರ್ಮಿಕ ಉತ್ಸವಗಳನ್ನು ವ್ಯಂಗ್ಯ ಮತ್ತು ತಮಾಷೆಯಿಂದ ನೋಡುತ್ತಾ, ಜೊತೆಯಲ್ಲೇ ಸಾಂಪ್ರಾದಾಯಿಕ ಆಚರಣೆಗಳನ್ನು ವಿಡಂಬಿಸುವ ನಾಟಕ 'ಬೀದಿಯೊಳಗೊಂದು ಮನೆಯ ಮಾಡಿ...'

ಬಸವೇಶ್ವರನಗರದಲ್ಲಿ ಮಾದರಿ ಮಾದಯ್ಯನ ಕಾಣಿರಿ, ಉಘೇ ಎನ್ನಿ!ಬಸವೇಶ್ವರನಗರದಲ್ಲಿ ಮಾದರಿ ಮಾದಯ್ಯನ ಕಾಣಿರಿ, ಉಘೇ ಎನ್ನಿ!

ಗಣೇಶ ವಿಸರ್ಜನೆಯ ದಿನ ಪುಣೆಯ ನಟ್ಟನಡುವಿನ ಬೀದಿಯೊಂದರಲ್ಲಿ ಮಧ್ಯಮವರ್ಗದ ಮಹಾರಾಷ್ಟ್ರದ ಬ್ರಾಹ್ಮಣ ಸಂಸಾರಗಳ ನಡುವೆ ಮನೆ ಮಾಡಿರುವ ಒಂದು ಪುಟ್ಟ ಸಂಸಾರದ ಕತೆಯಿದು.

World Theatre Day: Beediyolagondu Maneya Maadi Play Ranga Shankara

ಮನೆಯೊಡೆಯ ಶ್ರೀಪಾದ ಮತ್ತು ಅವನ ಹೆಂಡತಿ ಸುಕನ್ಯ ಒಂದು ಒಪ್ಪಂದಕ್ಕೆ ಬಂದಿದ್ದಾರೆ - ಎರಡು ವರ್ಷಕ್ಕೊಂದು ಸಲವಾದರೂ ತಮ್ಮ ಮನೆಯ ಸ್ವಾಸ್ಥ್ಯ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು, ಕೆಳಗಿನ ಬೀದಿಯ ಮೆರವಣಿಗೆಯ ಬೆಳಕಿರಲಿ, ಒಂದಿನಿತು ಸದ್ದೂ ಮನೆ ಹೊಕ್ಕದಂತೆ ಕಿಟಿಕಿ-ಬಾಗಿಲು ಹಾಕಿ ರಾತ್ರಿಯನ್ನು ಕಳೆಯಲು, ಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದಾರೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ದಾವಣಗೆರೆಯಿಂದ ಶ್ರೀಪಾದನ ದೊಡ್ಡಮ್ಮ ಬರುವವರೆಗೂ, ಸುಕನ್ಯಳ ಸಣ್ಣಪುಟ್ಟ ತಗಾದೆಗಳ ನಡುವೆಯೂ ಒಂದಷ್ಟು ಹೊತ್ತು ಎಲಾ ಅಂದುಕೊಂಡಂತೇ ನಡೆಯುತ್ತದೆ. ಇದ್ದಕ್ಕಿದ್ದಂತೇ ಬಂದಿಳಿಯುವ ದೊಡ್ಡಮ್ಮನ ಒಂದೇ ಆಸೆ, ಈ ಮನೆಯ ಬಾಲ್ಕನಿಯಿಂದ ಗಣಪತಿ ವಿಸರ್ಜನೆಯ ಮೆರವಣಿಗೆಯನ್ನು ನೋಡುವುದು.

ಟಿಸಿಎಸ್ ಟೆಕ್ಕಿಗಳ ಅಭಿನಯದ ಅವತಾರ್ಸ್ ನಾಟಕಗಳ ಸಂಗಮಟಿಸಿಎಸ್ ಟೆಕ್ಕಿಗಳ ಅಭಿನಯದ ಅವತಾರ್ಸ್ ನಾಟಕಗಳ ಸಂಗಮ

ದೊಡ್ಡಮ್ಮನ ಆಸೆ ಮತ್ತು ಶ್ರೀಪಾದನ ಹಟ ನಾಟಕದ ಅನೇಕ ಹಾಸ್ಯ ಘಟನೆಗಳಿಗೆ, ಗಂಭೀರ ಚರ್ಚೆಗಳಿಗೆ ಕಾರಣವಾಗುತ್ತದೆ. ದೊಡ್ಡಮ್ಮನ ಎಲ್ಲಾ ಸಂಚುಗಳು ವಿಫಲವಾಗುತ್ತಾ ಹೋದಂತೆ ನಾಟಕ ಗಾಢವಾಗುತ್ತಾ ಹೋಗುತ್ತದೆ. ಧರ್ಮ, ವಿಚಾರಗಳ ಸಂಘರ್ಷ ಹೆಚ್ಚುತ್ತಾ ಹೋದಂತೆ, ಮಧ್ಯಮವರ್ಗದ ಸಾಂಸಾರಿಕ ರಾಜಕೀಯವನ್ನೂ ನಾಟಕ ಬಿಡಿಸುತ್ತಾ ಹೋಗುತ್ತದೆ.

ಮರಾಠಿ ಮೂಲ ಢೋಲ್ ತಾಷೆ : ರಚನೆ : ಚಂ ಪ್ರ ದೇಶಪಾಂಡೆ
ಕನ್ನಡಕ್ಕೆ : ಶ್ರೀಪತಿ ಮಂಜನಬೈಲ್, ಸುರೇಂದ್ರನಾಥ್
ನಿರ್ದೇಶನ : ಮೋಹಿತ್ ಟಾಕಲ್ಕರ್
ಕನ್ನಡ | 150/- | 90 ನಿ.
27, ಮಾರ್ಚ್ ; ಸಂಜೆ 7:30
ರಂಗ ಶಂಕರ | ಟಿಕೆಟ್ ದರ 150/- ,
ಟಿಕೆಟ್‍ಗಳು ರಂಗ ಶಂಕರದಲ್ಲಿ ದೊರೆಯುತ್ತವೆ.

English summary
'Beediyolagondu Maneya Maadi’ in a satirical and a humorous vein comments on the degenerating nature of religious festivals and disproves traditional dogma in a realistic setting. Play will be staged at Ranga Shankara March 27, 2019 on the eve of World Theatre Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X