• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಪಂಚದ ಕೆಲವು ಘಟನಾವಳಿಗಳ ಚಿತ್ರಸುದ್ದಿ

By Vanitha
|

ಬೆಂಗಳೂರು, ಆಗಸ್ಟ್, 22: ನಮ್ಮ ಪ್ರಪಂಚ ಬಹಳ ದೊಡ್ಡದು. ಇಲ್ಲಿ ಹಲವಾರು ಘಟನೆಗಳು ಸಂಭವಿಸುತ್ತಲೇ ಇರುತ್ತದೆ. ಇದರಲ್ಲಿ ನಮಗೆ ಕೆಲವು ಕಾಣುತ್ತವೆ, ಮತ್ತೆ ಕೆಲವು ಕಾಣುವುದೇ ಇಲ್ಲ. ಇನ್ನು ಹಲವು ಘಟನೆಗಳು ನಮಗೆ ಕಂಡರೂ ಕಾಣದಂತೆ ಸುಮ್ಮನಿರುತ್ತೇವೆ.

ಜಗತ್ತಿನಲ್ಲಿ ಸಂಭವಿಸುವ ಎಲ್ಲಾ ಘಟನೆಗಳು ನಾನಾ ಭಾವಲೋಕ ಸೃಷ್ಟಿಸಿರುತ್ತದೆ. ಸಂತಸ, ಆತಂಕ. ಕುತೂಹಲ, ನಿರಾಸೆ, ದುಃಖ ಹೀಗೆ ಒಂದಲ್ಲಾ ಒಂದು ಭಾವಗಳು ಪ್ರಪಂಚದ ವಿವಿಧ ಭಾಗದ ಜನರಲ್ಲಿ ಪುಟಿದೇಳುತ್ತದೆ.[ಬಿಬಿಎಂಪಿಗೆ ಮತದಾನ ಕಡಿಮೆಯಾಗಲು 7 ಕಾರಣಗಳು]

ಲೋಕದಲ್ಲಿ ನಡೆಯುವ ಘಟನೆಗಳು, ಮನದಲ್ಲಿ ಏಕಾಏಕಿ ಗರಿಗೆದರುವ ಭಾವಗಳಿಗೆ ಕಾಲ, ಸ್ಥಳದ ಮಿತಿ ಇರುವುದೇ ಇಲ್ಲಾ. ಹೀಗಿರುವಾಗ ಜಗತ್ತಿನಲ್ಲಿ ನಡೆದ ಕೆಲವು ಘಟನಾವಳಿಗಳು ಚಿತ್ರಲೋಕ ಇಲ್ಲಿವೆ. ಕ್ಲಿಕ್ ಮಾಡಿ ನೋಡಿ..ಪ್ರಪಂಚದಲ್ಲಿ ಏನೇನಾಯಿತು ಓದಿ ತಿಳಿದುಕೊಳ್ಳಿ.

ಹೊಗೆ ಲೋಕ ಕಟ್ಟಿದ ಕೊಟೋಪಾಕ್ಸಿ ಜ್ವಾಲಾಮುಖಿ

ಹೊಗೆ ಲೋಕ ಕಟ್ಟಿದ ಕೊಟೋಪಾಕ್ಸಿ ಜ್ವಾಲಾಮುಖಿ

ಈ ಚಿತ್ರ ನಿಮಗೆ ಇಷ್ಟ ಆಯ್ತಾ, ಎಷ್ಟೊಂದು ಚಂದ ಇದೆ ಅಂತ ಅನಿಸ್ತಿದ್ದೀಯಾ. ಕಪ್ಪು ಬಿಳುಪಿನ ಚಿತ್ತಾರ ಕಂಡು ಖುಷಿ ಆಯ್ತಾ..ಇಷ್ಟೊಂದು ಖುಷಿ ಪಡಬೇಡಿ. ಯಾಕೆಂದರೆ ಇದು ಇಕ್ವಿಡಾರ್ ಬಳಿಯ ಟಿಲಿಕನ್ ಪರ್ವತದ ಬಳಿ ಎದ್ದ ಕೊಟೋಪಾಕ್ಸಿ ಎಂಬ ಬೀಕರ ಜ್ವಾಲಾಮುಖಿಯಿಂದ ಆಕಾಶವೇ ಕಾಣದಷ್ಟು ಹೊಗೆ ಎದ್ದಿದೆ. ಇದರಿಂದ ಪರ್ವತ ಬಳಿ ವಾಸಿಸುತ್ತಿರುವ ಜನರಿಗೆ ಜಾಗ ತೆರವುಗೊಳಿಸುವಂತೆ ಆದೇಶ ಹೊರಡಿಸಲಾಗಿದೆ.

ಸಂತೋಷದಿಂದ ಕೈ ಬೀಸಿದರು

ಸಂತೋಷದಿಂದ ಕೈ ಬೀಸಿದರು

ಅಮೆರಿಕಾ ಡ್ರೀಮ್ ಸಮಿತಿ ಕೊಲಂಬಸ್‌ನಲ್ಲಿ ಏರ್ಪಡಿಸಿದ್ದ Prosperity at the Greater Columbus ಎಂಬ ವಿಷಯದ ಮೇಲೆ ಮಾತನಾಡಲು ಆಗಮಿಸಿದ್ದ ಲೂಸಿಯಾನ(ಅಮೆರಿಕಾ)ದ 55 ನೇ ಗವರ್ನರ್ ಆದ ಪಿಯೂಷ್ ಬಾಬಿ ಜಿಂದಾಲ್ ಹರ್ಷದಿಂದ ನೆರೆದಿದ್ದ ಜನರ ಕಡೆ ಕೈಬೀಸಿದ ಕ್ಷಣ.

ಕನ್ನಡಿಗರ ಆಟಕ್ಕೆ ಹೆದರಿದ ತೆಲುಗು ಆಟಗಾರರು

ಕನ್ನಡಿಗರ ಆಟಕ್ಕೆ ಹೆದರಿದ ತೆಲುಗು ಆಟಗಾರರು

ಮುಂಬೈನಲ್ಲಿ ನಡೆಯುತ್ತಿರುವ ಪ್ರೊ ಕಬ್ಬಡಿ ಟೂರ್ನಿ ಫೈನಲ್ ನಲ್ಲಿ ಎದುರಾಳಿ ತಂಡವಾದ ಬೆಂಗಳೂರು ಬುಲ್ಸ್ ಹಿಡಿತದಿಂದ ತಪ್ಪಿಸಿಕೊಳ್ಳಲು ಜಿಗಿದ ತೆಲುಗು ಟೈಟಾನ್ಸ್ ತಂಡದ ಆಟಗಾರ.

ಹುಡುಕಿಕೊಟ್ಟವರಿಗೆ 10 ಲಕ್ಷ

ಹುಡುಕಿಕೊಟ್ಟವರಿಗೆ 10 ಲಕ್ಷ

ಉಧಮ್ ಪುರ ಧಾಳಿಗೆ ಸಂಬಂಧಿಸಿದಂತೆ ಲಷ್ಕರ್ ಈ ತೈಬಾ ಎಂಬ ಭಯೋತ್ಪಾದಕನನ್ನು ಬಂಧಿಸಿರುವ ರಾಷ್ಟ್ರೀಯ ತನಿಖಾ ತಂಡವು ದಾಳಿ ಸಹಕರಿಸಿದ ಇನ್ನಿಬ್ಬರ ಹುಡುಕಾಟದಲ್ಲಿ ತೊಡಗಿದೆ. ಹುಡುಕಿ ಕೊಟ್ಟವರಿಗೆ ಅಥವಾ ಇವರ ಮಾಹಿತಿ ತಿಳಿಸಿದವರಿಗೆ 10 ಲಕ್ಷ ಬಹುಮಾನ ಘೋಷಿಸಿದೆ.

ಆದಷ್ಟು ಬೇಗ ನೀವಾದರೂ ನ್ಯಾಯ ಕೊಡಿಸಿ

ಆದಷ್ಟು ಬೇಗ ನೀವಾದರೂ ನ್ಯಾಯ ಕೊಡಿಸಿ

ಎರಡು ತಿಂಗಳಿನಿಂದ ನೆನೆಗುದಿಗೆ ಬಿದ್ದಿರುವ ಎಫ್‌ಟಿಐಐ ನಿರ್ದೇಶಕ ಗಜೇಂದ್ರ ಚೌಹಾಣ್ ಅಮಾನತಿನ ಕುರಿತಾಗಿ ಪ್ರತಿಭಟನೆ ಕೈಗೊಳ್ಳುತ್ತಿರುವ ವಿದ್ಯಾರ್ಥಿಗಳು ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿರುವುದು.

ಪದವಿ ಪಡೆದ ಖುಷಿಯಲ್ಲಿ ವಿದ್ಯಾರ್ಥಿಗಳು

ಪದವಿ ಪಡೆದ ಖುಷಿಯಲ್ಲಿ ವಿದ್ಯಾರ್ಥಿಗಳು

ಹೈದರಾಬಾದಿನ ಐಐಐಟಿ ಕಾಲೇಜಿನ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಪದವಿ ಪಡೆದುಕೊಂಡಿದ್ದು, ತಾವು ತೊಟ್ಟ ಗೌನ್ ನ್ನು ಮೇಲಕ್ಕೆ ಎಸೆಯುವುದರ ಮೂಲಕ ಕುಣಿದು ಕುಪ್ಪಳಿಸಿ ಸಂಭ್ರಮಿಸಲು ಮುಂದಾದ ಕ್ಷಣ.

ಹುಷಾರು ತಾಯೇ, ಬಿದ್ದಿಯೇ ಜೋಕೆ.

ಹುಷಾರು ತಾಯೇ, ಬಿದ್ದಿಯೇ ಜೋಕೆ.

ಅಸ್ಸಾಂ ರಾಜ್ಯದ ಜೊರ್ಹಟ್ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಪ್ರವಾಹ ಎದುರಾಗಿದ್ದು, ಮನೆ, ಕಟ್ಟಡ, ರಸ್ತೆಗಳು ಜಲಾವೃತಗೊಂಡಿದೆ. ಇಂತಹದ್ದರಲ್ಲಿ ತಾಯಿ ಒಬ್ಬಳು ತನ್ನ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ತಾನೇ ನಿರ್ಮಿಸಿದ ಬೊಂಬಿನ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತಿರುವ ಕ್ಷಣ ಕಂಡದ್ದು ಹೀಗೆ.

 ಮಗು ಹೇಗಿದ್ದೀಯಾ?

ಮಗು ಹೇಗಿದ್ದೀಯಾ?

ಮಯನ್ಮಾರ್‌ ನ ವಿರುದ್ಧ ಪಕ್ಷ ನಾಯಕಿ ಸೂಕಿ ಚುನಾವಣಾ ಪ್ರಚಾರ ಭಾಷಣ ಮುಗಿಸಿ ವೇದಿಕೆ ಇಳಿದು ಬರುತ್ತಿರುವುದನ್ನು ಕಂಡು ಮನತುಂಬಿ ನಕ್ಕ ಮಗುವಿನೊಂದಿಗೆ ಬಹಳ ಖುಷಿಯಿಂದಲೇ ಮಾತಿಗಿಳಿದರು.

ಯುವಜನತೆಗೆ ಮಾದರಿಯಾದ ವೃದ್ದೆ

ಯುವಜನತೆಗೆ ಮಾದರಿಯಾದ ವೃದ್ದೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಬಿಎಂಪಿ ಚುನಾವಣೆಯಲ್ಲಿ ಮತಚಲಾಯಿಸಿ ಬಂದು ಯುವಜನತೆಯನ್ನು, ಮತಚಲಾಯಿಸದೆ ಸೋಮಾರಿತನ ತೋರಿದವರನ್ನು, ವಿಕ್ ಎಂಡ್ ಟೂರ್ ಹೊಡೆಯುತ್ತಿರುವವರನ್ನು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದ ವೃದ್ದೆ. ಧನ್ಯವಾದ ಅಜ್ಜಿ ನೀವಾದರೂ ಬಯಸಿದ್ದೀರಲ್ಲ, ಸ್ವಚ್ಛ ಬೆಂಗಳೂರನ್ನು.

ಇವರು ನಮ್ಮಂತೆಯೇ..ಅಲ್ಲವೇ?

ಇವರು ನಮ್ಮಂತೆಯೇ..ಅಲ್ಲವೇ?

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜವಾಹರ ಭವನದಲ್ಲಿ ವಿಶೇಷ ವಿಕಲ ಚೇತನ ಮಕ್ಕಳಿಗೆ ಸ್ಕೂಟರ್ ವಿತರಿಸಿ ಅವರು ಸರಾಗವಾಗಿ ಚಲಿಸಿ ಅನುವು ಮಾಡಿಕೊಟ್ಟರು. ಆಗ ರಾಹುಲ್ ಗಾಂಧಿ ಆ ಬಾಲಕನನ್ನು ತಬ್ಬಿಕೊಂಡು ಇವರು ನಮ್ಮಂತೆಯೇ ಎಂಬ ಭಾವ ತೋರಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
News in Picture on Saturday from India and International
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more