ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವದ ಅತಿದೊಡ್ಡ ಚಿತ್ರಕಲಾ ಪ್ರದರ್ಶನ ಬೆಂಗಳೂರಲ್ಲಿ, ಬನ್ನಿ ಪಾಲ್ಗೊಳ್ಳಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಇದು ಬಣ್ಣಗಳ ಲೋಕ, ಮನಸ್ಸಿನಲ್ಲಿರುವ ಕಲ್ಪನೆಯನ್ನು ಕೆಲವರು ಬರವಣಿಗೆ ಮೂಲಕ ಪ್ರದರ್ಶಿಸಿದರೆ ಇನ್ನು ಕೆಲವರು ಪೇಟಿಂಗ್ ಮೂಲಕ ಸಮಾಜದ ಮುಂದಿಡುತ್ತಾರೆ.

ಫೆಬ್ರವರಿ 23 ಹಾಗೂ 24ರಂದು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ವೆಗಾ ಸಿಟಿ ಮಾಲ್‌ನಲ್ಲಿ ಚಿತ್ರಗಳ ಪ್ರದರ್ಶನ ನಡೆಯಲಿದೆ.

ಈ ಕಾರ್ಯಕ್ರಮವನ್ನು ಬೆಂಗಳೂರು ಆರ್ಚ್ ಬಿಷಪ್ ರೆವರೆಂಡ್ ಪೀಟರ್ ಮಚಾಡೊ ಉದ್ಘಾಟಿಸಲಿದ್ದಾರೆ. ಮೇಯರ್ ಗಂಗಾಬಿಕಾ ಮಲ್ಲಿಕಾರ್ಜುನ್ ಅವರೊಂದಿಗೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಪಾಲ್ಗೊಳ್ಳಲಿದ್ದಾರೆ.

world’s largest open-air painting display exhibition for a case

ಹವ್ಯಾಸಿಗಳು ಮತ್ತು ವೃತ್ತಿಪರರು 5 ವರ್ಷದಿಂದ 90 ವರ್ಷದ ಹಿರಿಯರವರೆಗೆ ಪುರುಷರು, ಮಹಿಳೆಯರು ಮತ್ತು ಮಕ್ಕಳಿಂದ ರಚಿಸಿದ 10,000 ಪೇಂಟಿಂಗ್‍ಗಳು ಫ್ರೀಹ್ಯಾಂಡ್ ಮತ್ತು ಆಯಿಲ್ ಕ್ಯಾನ್ವಾಸ್‍ಗಳು ಪ್ರದರ್ಶನದಲ್ಲಿರುತ್ತವೆ ಮತ್ತು ಅವುಗಳಲ್ಲಿ ಸಾಮಾಜಿಕ ಒಳಿತಿನ ಸಂದೇಶಗಳನ್ನು ಒಳಗೊಂಡಿರುತ್ತವೆ ಪ್ರಶಸ್ತಿ ಪುರಸ್ಕೃತ ಪೇಂಟಿಂಗ್‍ಗಳೂ ಅವುಗಳಲ್ಲಿರುತ್ತವೆ.

ಬನ್ನೇರುಘಟ್ಟ ಮುಖ್ಯರಸ್ತೆಯ ವೆಗಾ ಸಿಟಿ ಮಾಲ್‍ನಲ್ಲಿ ಪ್ರದರ್ಶನದಲ್ಲಿದ್ದ 10,000 ಪೇಂಟಿಂಗ್‍ಗಳಲ್ಲಿ ಕೆಲ ವಾರಗಳ ಹಿಂದೆ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ ನಡೆದ ಕಲರೋಥಾನ್-11 ಕಾರ್ಯಕ್ರಮದಲ್ಲಿ ಸ್ಥಳದಲ್ಲಿಯೇ ರಚಿಸಿದ ಚಿತ್ರಗಳು ಹಾಗೂ ಹಿಂದಿನ ಆವೃತ್ತಿಯ ಚಿತ್ರಗಳೂ ಇರುತ್ತವೆ.

world’s largest open-air painting display exhibition for a case

ವೆಗಾ ಸಿಟಿ ಮಾಲ್‍ನಲ್ಲಿ ನಡೆಯಲಿರುವ ಈ ಪ್ರದರ್ಶನದಲ್ಲಿ ಭಾಗವಹಿಸುವ ಹಲವು ಪ್ರಪ್ರಥಮ ಬಾರಿಗೆ ಚಿತ್ರ ರಚಿಸಿದವರೂ ಇದ್ದಾರೆ, ಅವರ ಚಿತ್ರಗಳನ್ನೂ ಕೂಡಾ ಅತ್ಯಂತ ಸಾಮಾನ್ಯ 100ರೂ.ದರದಲ್ಲಿ ಸಾರ್ವಜನಿಕವಾಗಿ ಹರಾಜು ಹಾಕಲಾಗುತ್ತದೆ ಮತ್ತು ಮಾರಾಟದ ಗಳಿಕೆ ವೃದ್ಧಾಶ್ರಮ ಓಂ ಆಶ್ರಮ ಟ್ರಸ್ಟ್‌ಗೆ ಸೇರುತ್ತದೆ. ಇದು ಬಣ್ಣಗಳಲ್ಲಿ ಮುಳುಗಿ ಹೋಗುವ ಮತ್ತು ದುರ್ಬಲ ವರ್ಗದವರ ಜೀವನಗಳಿಗೆ ಕೊಂಚ ಬಣ್ಣ ಸೇರ್ಪಡೆ ಮಾಡುವ ಸಮಯ.

English summary
Exhibition is spread over two days on 23rd and 24th February 2019, Saturday and Sunday From 10 am to 6pm at Vega City Mall, Bannerghatta Main Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X