• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿಸಿಎಸ್ ವಿಶ್ವ 10ಕೆ ಬೆಂಗಳೂರಿನಿಂದ ಧನಸಹಾಯ 5.29 ಕೋಟಿಗೆ ಏರಿಕೆ

By Nayana
|

ಬೆಂಗಳೂರು, ಜು.7: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ವಿಶ್ವ 10ಕೆ, ವಿಶ್ವ ಪ್ರೀಮಿಯರ್ 10ಕೆ, ಲೋಕೊಪಾಕಾರ ಪಾಲುದಾರ ಇಂಡಿಯಾ ಕೇರ್ಸ್ ಫೌಂಡೇಷನ್ ಜತೆ 2018ರ ಆವೃತ್ತಿಯಲ್ಲಿ 5.29 ಕೋಟಿ ರೂ. ಧನಸಾಹಯ ಸಂಗ್ರಹಿಸುವ ಮೂಲಕ ಭಾರತದಲ್ಲೇ ದತ್ತಿ ನಿಧಿ ಸಂಗ್ರಹಿಸುವ ಅತಿದೊಡ್ಡ ಕೂಟವಾಗಿ ಮುಂದುವರಿದಿದೆ.

ಟಿಸಿಎಸ್ 10ಕೆ ನೋಂದಣಿಗೆ ಚಾಲನೆ, ಮೇ 21ಕ್ಕೆ ಓಟ

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕೂಟದಲ್ಲಿ ಸುಮಾರು 24,000 ಜನರು ಪಾಲ್ಗೊಂಡಿದ್ದರು. ಉತ್ಸಾಹಿ ರನ್ನರ್‌ಗಳಿಂದ ಸಂಗ್ರಹಿಸಲಾದ ನಿಧಿಯನ್ನು 82 ನಾಗರಿಕ ಸಮಾಜ ಸಂಸ್ಥೆಗಳು(ಸಿಎಸ್‌ಒ) ಫಲಾನುಭವ ಪಡೆಯಲಿವೆ. ಮಕ್ಕಳ ಶಿಕ್ಷಣ, ಮಹಿಳಾ ಸಬಲೀಕರಣ, ವಿಶೇಷ ಚೇತನರಿಗೆ ನೆರವು, ಅರಣ್ಯನಾಶ ತಡೆಗಟ್ಟುವಿಕೆ, ನೀರಿನ ಸಂರಕ್ಷಣೆ ಮತ್ತು ಹಿರಿಯರಿಗೆ ಹಾಗೂ ಇತರ ಕಾರಣಗಳಿಗೆ ಈ ನಿಧಿ ಬಳಕೆಯಾಗಲಿದೆ.

ದೇಶದಲ್ಲಿರುವ ಸಿಎಸ್‌ಒಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ದತ್ತಿ ನಿಧಿ ಸಂಗ್ರಹದ ಹೆಚ್ಚಳ ಪರಿಣಾಮ ಬೀರಲಿದೆ. ಆಸಕ್ತಿದಾಯಕ ವಿಷಯ ಎಂದರೆ 2018ರ ಆವೃತ್ತಿಯಲ್ಲಿ ಎರಡು ಅಗ್ರಮಾನ್ಯ ಸಿಎಸ್‌ಒಗಳು ಕೊಯಮತ್ತೂರು ಮತ್ತು ಮೈಸೂರು ಮೂಲದವಾರಾಗಿದ್ದು, ಬೆಂಗಳೂರು ಓಟದ ನಗರದಿಂದ ಆಚೆಗೆ ಬಂಡವಾಳ ಸಂಗ್ರಹ ಕೇಂದ್ರವನ್ನು ವಿಸ್ತರಿಸಿವೆ.

ಈ ವರ್ಷದ ಪ್ರಮುಖ ಅಂಶಗಳು

* 16 ಸಂಸ್ಥೆಗಳ ಧನಸಾಹಯ 10 ಲಕ್ಷ ರೂ.ಗಿಂತಲೂ ಅಧಿಕ ಏರಿಕೆ.

* ಕೇರ್ ಕಂಪೆನಿ ವಿಭಾಗದಲ್ಲಿ 4 ಮಂದಿಗಳ ಕಳಿಸು ಫೌಂಡೇಷನ್‌ಗೆ 45.16 ಲಕ್ಷ ರೂ. ಏರಿಕೆ. ಇವರು ಮೈಸೂರು ಮತ್ತು ಬೆಂಗಳೂರಿನ ಸರ್ಕಾರಿ ಶಾಲೆಗಳೊಂದಿಗೆ ನೆರವು, ಪ್ರಶಕ್ತ ಶೈಕ್ಷಣಿಕ ವರ್ಷದಲ್ಲಿ 6,500 ಮಕ್ಕಳಿಗೆ ಸಹಾಯ.

* ಅತಿ ಹೆಚ್ಚು ಕೊಡುಗೆ ಸಾಲಿನಲ್ಲಿ ಫಸ್ಟ್ ಅಮೆರಿಕನ್ ಮತ್ತು ಇನ್‌ಫಾರ್ಮೇಟಿಕಾ, ಕಾರ್ಪೊರೇಟ್ ಕೇರ್ಸ್ ವಿಭಾಗದಲ್ಲಿ 33 ಲಕ್ಷ ಕೊಡುಗೆ, ಒಟ್ಟು 11,165,690 ರೂ. ಏರಿಕೆ.

* ಯೂತ್ ಕೇರ್ಸ್ ವಿಭಾಗದಲ್ಲಿ ಚೆರ್ ಯಶ್ ಟ್ರಸ್ಟ್ ಪ್ರತಿನಿಧಿಸಿದ್ದ ಎಥಾನ್ ಮಾರ್ಟಿನ್, ಅಖಿಲಾ ಗೈನೆಡಿ ಮತ್ತು ದರ್ಶನ ಮಡಿವಾಳ ಮೆಟ್ರಿ ಅವರಿಂದ 182,501 ರೂ. ಏರಿಕೆ.

English summary
TCS sponsored world 10K premiere endowment fund increased to Rs.5.29 crores and its become India's biggest endowment fund. This fund will be utilized to empower girl child education and poor students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more