ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸದಿಂದ 22 ಕಾಯಿಲೆ, ವಿಶ್ವ ಆರೋಗ್ಯ ಸಂಸ್ಥೆ ವರದಿಗೆ ಎಚ್ಚೆತ್ತ ಸರ್ಕಾರ

By ಬೆಂಗಳೂರು ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಫೆಬ್ರವರಿ 07:ಇತ್ತೀಚಿನ ದಿನಗಳಲ್ಲಿ ಜನರನ್ನು ಕಾಡುತ್ತಿರುವ ಅನೇಕ ಕಾಯಿಲೆಗಳಿಗೆ ಕಸವೇ ಕಾರಣ ಎಂದರೆ ನಂಬುತ್ತೀರಾ? ನಂಬಲೇಬೇಕು. ಯಾಕೆಂದರೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಂಗ್ರಹವಾಗುವ ಕಸದಲ್ಲಿ ಶೇ.70 ತ್ಯಾಜ್ಯ ವಿಲೇವಾರಿಯಾಗದೆ ಪರಿಸರದಲ್ಲಿ ಸೇರ್ಪಡೆಗೊಂಡು 22ಕ್ಕೂ ಹೆಚ್ಚು ಕಾಯಿಲೆಗಳು ಹರಡುತ್ತಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ರಾಜ್ಯಕ್ಕೆ ಬಂದ ಕೇರಳ ತ್ಯಾಜ್ಯ, ಲಾರಿ ತಡೆದ ಕನ್ನಡ ಸಂಘಟನೆಗಳುರಾಜ್ಯಕ್ಕೆ ಬಂದ ಕೇರಳ ತ್ಯಾಜ್ಯ, ಲಾರಿ ತಡೆದ ಕನ್ನಡ ಸಂಘಟನೆಗಳು

ರಾಜ್ಯದಲ್ಲಿ ಪ್ರತಿನಿತ್ಯ 11,186 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದರಲ್ಲಿ ಸಂಸ್ಕರಣೆ ಆಗುತ್ತಿರುವುದು ಶೇ.30ಕ್ಕಿಂತ ಕಡಿಮೆ. ಉಳಿದ ತ್ಯಾಜ್ಯ ಎಲ್ಲೆಂದರಲ್ಲಿ ವಿಲೇವಾರಿ ಆಗುತ್ತಿರುವುದರಿಂದ ಭೂಮಿ, ಗಾಳಿ, ಅಂತರ್ಜಲಕ್ಕೆ ಹಾನಿ ಉಂಟಾಗುವ ಜೊತೆಗೆ ಜನರ ಮೇಲೂ ದುಷ್ಪರಿಣಾಮ ಬೀರುತ್ತಿವೆ.

 ತ್ಯಾಜ್ಯಕ್ಕೆ ಬೆಂಕಿ ಹಚ್ಚಿದರೆ 22 ಕಾಯಿಲೆಗಳು ಬರುವುದು ಗ್ಯಾರಂಟಿ! ತ್ಯಾಜ್ಯಕ್ಕೆ ಬೆಂಕಿ ಹಚ್ಚಿದರೆ 22 ಕಾಯಿಲೆಗಳು ಬರುವುದು ಗ್ಯಾರಂಟಿ!

ಒಟ್ಟಾರೆ 11,186 ಟನ್ ತ್ಯಾಜ್ಯದಲ್ಲಿ 9,706 ಟನ್ ತ್ಯಾಜ್ಯ ಸ್ಥಳೀಯ ನಗರಾಡಳಿತಗಳ ರಸ್ತೆ ಹಾಗೂ ಮನೆಗಳಲ್ಲಿ ಉತ್ಪತ್ತಿಯಾಗಿರುತ್ತವೆ. ಈ ತ್ಯಾಜ್ಯದಲ್ಲಿ 3,475 ಟನ್ ಸಮರ್ಪಕವಾಗಿ ಸಂಸ್ಕರಿಸಿದರೆ ಉಳಿದ ತ್ಯಾಜ್ಯವನ್ನು ಭೂಭರ್ತಿ ಪ್ರದೇಶಕ್ಕೆ ವಿಲೇವಾರಿ ಮಾಡಲಾಗುತ್ತಿದೆ. ಸಂಗ್ರಹಿಸಲು ವಿಫಲವಾದ 1,480 ಟನ್ ತ್ಯಾಜ್ಯದ ಮಾಹಿತಿ ನಗರಾಡಳಿತಗಳಿಗೂ ಗೊತ್ತಿಲ್ಲ.

World Health Organization report about garbage diseases

ಈ ಹಿನ್ನೆಲೆಯಲ್ಲಿ ರಾಜ್ಯ ಪೌರಾಡಳಿತ ನಿರ್ದೇಶನಾಲಯವು ಕರ್ನಾಟಕ ರಾಜ್ಯ ಘನ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತ ಹೊಸ ಕರಡು ಸಿದ್ಧಪಡಿಸಿದೆ. ಅದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಉಲ್ಲೇಖಿಸಿ ಜನರಿಗೆ 22 ಬಗೆಯ ಕಾಯಿಲೆಗಳು ಬರುವ ಬಗ್ಗೆ ವಿವರಿಸಿದೆ.

 6 ತಿಂಗಳಲ್ಲಿ 13 ಲಕ್ಷ ಟನ್ ಕಸ ಸ್ವಚ್ಛಗೊಳಿಸಿದ ಐಎಎಸ್ ಅಧಿಕಾರಿ 6 ತಿಂಗಳಲ್ಲಿ 13 ಲಕ್ಷ ಟನ್ ಕಸ ಸ್ವಚ್ಛಗೊಳಿಸಿದ ಐಎಎಸ್ ಅಧಿಕಾರಿ

2019ರಲ್ಲಿ ಯಾವುದೇ ಕಾರಣಕ್ಕೂ ತ್ಯಾಜ್ಯ ಸುಡುವುದಕ್ಕೆ ಅವಕಾಶ ನೀಡುವಂತಿಲ್ಲ, 2020ರ ವೇಳೆಗೆ ತ್ಯಾಜ್ಯ ಉತ್ಪತ್ತಿ ಪ್ರಮಾಣ ಶೇ. 15 ಕಡಿಮೆ ಮಾಡಬೇಕು, 2021ಕ್ಕೆ ಹಸಿ, ಒಣ, ಸ್ಯಾನಿಟರಿ ತ್ಯಾಜ್ಯವನ್ನು ಶೇ. 80 ವಿಂಗಡಿಸುವಂತಾಗಬೇಕು, ಹಸಿ ತ್ಯಾಜ್ಯ ಶೇ.100 ಸಂಸ್ಕರಿಸಿ, ಮನೆ ತ್ಯಾಜ್ಯ ಸಂಗ್ರಹ ಶೇ. 100 ಅನುಷ್ಠಾನವಾಗಬೇಕು. 1 ಲಕ್ಷಕ್ಕೂ ಅಧಿಕ ಜನರಿರುವ ನಗರಗಳಲ್ಲಿ ತ್ಯಾಜ್ಯ ಸಂಸ್ಕರಣೆ ನಿಯಮ ಕಡ್ಡಾಯ ಜಾರಿಯಾಗಬೇಕು ಎಂದು ಹೊಸ ನೀತಿಯಲ್ಲಿ ವಿವರಿಸಲಾಗಿದೆ.

English summary
In State, reason for spreading over 22 diseases is the garbage.This is mentioned in the World Health Organization report.Here is a detailed description of this article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X