ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಸರ ದಿನದಂದು 'ಯುನೈಟೆಡ್ ವೇ'ನಿಂದ 10,000 ಸಸಿ ನೆಡುವ ಕಾರ್ಯಕ್ರಮ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 4: ವಿಶ್ವ ಪರಿಸರ ದಿನದ ಅಂಗವಾಗಿ ಬೆಂಗಳೂರಿನ 'ಯುನೈಟೆಡ್ ವೇ' ಸಂಸ್ಥೆ 10 ಸಾವಿರ ಸಸಿಗಳನ್ನು ನೆಡಲು ಮುಂದಾಗಿದೆ. ಜೂನ್ 3ರಿಂದ ಆರಂಭವಾಗಿ ಜೂನ್ 11ರ ವರೆಗೆ ವಾರಪೂರ್ತಿ ಈ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ.

ಒಟ್ಟು ಒಂದು ಸಾವಿರ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಬೆಂಗಳೂರಿನ 8 ಕೆರೆಗಳ ಸುತ್ತಲಿನ ಪರಿಸರದಲ್ಲಿ ಈ ಗಿಡಗಳನ್ನು ನೆಡಲಾಗುತ್ತದೆ.

World Environment Day, ‘United Way’ planting nearly 10,000 saplings in Bengaluru

ಜೂನ್ 3ರಿಂದ ಈ ಕಾರ್ಯಕ್ರಮ ಆರಂಭವಾಗಿದ್ದು ಅಂದು 1,000 ಜನರು ಬೆಂಗಳೂರಿನ ವಿಶ್ವವಿದ್ಯಾಲಯದ ಆವರಣ ಮತ್ತು ನಂದಿ ಬೆಟ್ಟದ ಸುತ್ತ ಮತ್ತ 1 ಲಕ್ಷ ಸೀಡ್ ಬಾಲ್ ಗಳನ್ನು ಎಸೆದಿದ್ದಾರೆ. ಇವುಗಳು ಮಳೆಗೆ ತನ್ನಷ್ಟಕ್ಕೆ ಚಿಗುರಿ ಗಿಡವಾಗಲಿವೆ.

ಇದಲ್ಲದೆ 'ನಮ್ಮ ಊರು ನಮ್ಮ ಕೆರೆ' ಕಲ್ಪನೆಯಲ್ಲಿ ಇದೀಗ ಬೆಂಗಳೂರಿನ ಉತ್ತರ ಹಳ್ಳಿ ಕೆರೆ, ಕೂಡ್ಲು ದೊಡ್ಡ ಕೆರೆ, ಮುನ್ನೆಕೊಳಲು, ಸಿಂಗಸಂದ್ರ, ಸೀಗೆಹಳ್ಳಿ, ಕೌಡೆನಹಳ್ಳಿ ಕೆರೆಗಳ ಸುತ್ತ 10,000 ಗಿಡಗಳನ್ನು ನೆಡಲಾಗುತ್ತದೆ.

ಪುನ್ನಗ, ಸೀತಾ, ಅಶೋಕ, ಹೊಂಗೆ, ಪುನರ್ಪುಳಿ, ಗುಲುಮಾವು, ಜುಮ್ಮ, ಮಾವು, ಹಿಪ್ಪು ನೇರಳೆ, ನೇರಳೆ, ಅರ್ಜುನ, ಅರಳಿ, ನೆಲ್ಲಿ, ಕದಂಬ, ಸಂಪಿಗೆ ಜಾತಿಯ ಗಿಡಗಳನ್ನು ಯುನೈಟೆಡ್ ವೇ ಸಂಸ್ಥೆ ನೆಡಲಿದೆ.

English summary
On the occasion of World Environment Day, United Way Bengaluru will organize a weeklong celebration from June 3rd to June 11th by planting nearly 10,000 saplings across eight lakes in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X