ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾವಯವ ಕೃಷಿಯಿಂದ ಮಾತ್ರ ಆರೋಗ್ಯ ಭಾಗ್ಯ: ಡಾ. ಅಶ್ವಥ್

By Mahesh
|
Google Oneindia Kannada News

ಬೆಂಗಳೂರು, ಜೂನ್ 05: ಆಧುನಿಕ ಕೃಷಿ ಪದ್ಧತಿಗಳು ನಮ್ಮ ಪರಿಸರವನ್ನು ಹಳೆಯ ಸ್ಥಿತಿಗೆ ತರಲಾಗದಷ್ಟು ಹಾಳುಗೆಡವಿವೆ. ಉಳಿದಿರುವ ಪರಿಸರವನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಮಲ್ಲೇಶ್ವರಂ ಶಾಸಕ ಡಾ. ಅಶ್ವಥ್ ನಾರಾಯಣ್ ಹೇಳಿದರು. ನಗರದಲ್ಲಿಂದು 'ದ ಗ್ರೀನ್ ಪಾತ್ ಫೌಂಡೇಶನ್' ಹಸಿರು ತೋಟದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ರಾಶಿಪೂಜೆಯನ್ನು ನೆರವೇರಿಸಿದ ಮಾತನಾಡಿದರು.

ಸಾವಯವ ಕೃಷಿ ನಮ್ಮ ಪ್ರಾಚೀನ ಕೃಷಿ ಪದ್ಧತಿಯಾಗಿದೆ. ಇಳುವರಿ ಹೆಚ್ಚಾಗಲಿ ಎನ್ನುವ ಆಸೆಯಿಂದ ಅಳವಡಿಸಿಕೊಂಡಿರುವ ಆಧುನಿಕ ಕೃಷಿ ಪದ್ಧತಿ ನಮ್ಮ ಆರೋಗ್ಯ ಅಷ್ಟೇ ಅಲ್ಲದೆ ಪರಿಸರವನ್ನೂ ಹಾಳು ಗೆಡವುತ್ತಿದೆ. [ವೃಕ್ಷಮಾತೆ ಸಾಲುಮರದ ತಿಮ್ಮಕ್ಕರೊಂದಿಗೆ ಪರಿಸರ ದಿನಾಚರಣೆ]

ಪರಿಸರವನ್ನು ಎಷ್ಟು ದೌರ್ಜನ್ಯಕ್ಕೆ ಈಡು ಮಾಡಿದ್ದೇವೆ ಎಂದರೆ ಅದನ್ನು ಹಿಂದಿನ ಪರಿಸ್ಥಿತಿಗೆ ಮರಳಿ ತರಲು ಸಾಧ್ಯವಿಲ್ಲ. ಆದರೆ, ಸುಸ್ಥಿತಿಯಲ್ಲಿರುವ ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿರುವುದು ಅತ್ಯಗತ್ಯ ಎಂದು ಡಾ. ಅಶ್ವಥ್ ನಾರಾಯಣ್ ಹೇಳಿದರು.

World environment day celebrations MLA Ashwath Narayan

ಸಾವಯವ ಪದ್ದತಿಯ ಜನಸಾಮಾನ್ಯರಿಗೆ ಕೈಗೆಟುಕದ ರೀತಿಯಲ್ಲಿದೆ. ಇದನ್ನು ಹೆಚ್ಚು ಹೆಚ್ಚು ಅಳವಡಿಸಿಕೊಳ್ಳುವುದರಿಂದ ನಾವು ಜನಸಾಮಾನ್ಯರೂ ಬಳಸುವಂತೆ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

'ದ ಗ್ರೀನ್ ಪಾತ್ ಫೌಂಢೆಶನ್' ನ ಸಂಸ್ಥಾಪಕ ಜಯರಾಂ ಮಾತನಾಡಿ, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಾಗೂ ಜನರಲ್ಲಿ ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಮತ್ತು ಗ್ರೀನ್ ಪಾತ್ ಸಮೂಹದ 9 ನೇ ವಾರ್ಷಿಕೋತ್ಸವದ ಸಮಯದಲ್ಲಿ ಈ ಸಾವಯವ ಸಂತೆ ಮಾವು ಮತ್ತು ಸಿರಿಧಾನ್ಯ ಮೇಳವನ್ನು ಆಯೋಜಿಸಿದ್ದೇವೆ. ದೇಶದ ಎಲ್ಲೆಡೆಯಿಂದ ಬಂದಿರುವ ಸಾವಯವ ಕೃಷಿಕರು ಹಾಗೂ ಉತ್ಪಾದಕರು ನಮ್ಮ ಮೇಳದಲ್ಲಿ ಭಾಗವಹಿಸಿದ್ದಾರೆ. ಸುಮಾರು 50 ಮಳಿಗೆಗಳು ಇದ್ದು ಎಲ್ಲಾ ರೀತಿಯ ಸಾವಯವ ಪದಾರ್ಥಗಳು ಇಲ್ಲಿ ಲಭ್ಯವಿದ್ದವು.

ಪರಿಸರದ ಬಗ್ಗೆ ಕಾಳಜಿ ಹೊಂದುವುದು ಎಲ್ಲರ ಕರ್ತವ್ಯವಾಗಿದೆ. ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಕೂಡಾ ನಮ್ಮ ಮುಂದಿನ ಪೀಳಿಗೆಗೆ ಅತ್ಯುತ್ತಮ ಕೊಡುಗೆಯನ್ನು ನೀಡಲಿದೆ.

ನಮ್ಮ ಮೂಲ ಕೃಷಿ ಪದ್ಧತಿ ಸಾವಯವ ಪದ್ಧತಿ. ಆಧುನಿಕತೆಯ ಪರಿಣಾಮ ಹಾಗೂ ಅಧಿಕ ಇಳುವರಿಯ ಆಸೆಯಿಂದ ಬಳಸಲಾಗುತ್ತಿರುವ ರಾಸಾಯನಿಕ ಗೊಬ್ಬರಗಳು ನಮ್ಮ ದೇಹವನ್ನು ವಿಷದಂತೆ ಸೇರುತ್ತಿದೆ. ಆದ್ದರಿಂದ, ಅವುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಆರೋಗ್ಯಕ್ಕೆ ಪೂರಕವಾದ ಸಾವಯವ ಪದ್ಧತಿಯಿಂದ ಬೆಳೆಯಲಾದ ಪದಾರ್ಥಗಳನ್ನು ಹೆಚ್ಚೆಚ್ಚು ಉಪಯೋಗಿಸುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂತೆಯಲ್ಲಿ ಸಾವಯವ ಆಹಾರ ಪದಾರ್ಥಗಳ ಅಂಗಡಿ, ಮರೆತುಹೋದ ದೇಸೀ ಆಹಾರದ ಭೋಜನ ಗೃಹ, ಸಭಾಭವನ, ಇತ್ಯಾದಿ ಇರುವ ಇದು ದೇಶದ ಅತಿ ದೊಡ್ಡ ಸಾವಯವ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮರೆತುಹೋದ ದೇಸಿ ಆಹಾರದ ಪ್ರಕಾರಗಳನ್ನು ತೃಣದಾನ್ಯಗಳನ್ನು ಉಪಯೋಗಿಸಿ ಆರೋಗ್ಯದಾಯಕ ಮತ್ತು ರುಚಿಕರವಾದ ವಿವಿಧ ವಿಭಿನ್ನ ಆಹಾರಗಳನ್ನು ಗ್ರಾಹಕರಿಗೆ ನೀಡುವ ಪ್ರಯತ್ನವನ್ನು ಮಾಡಲಾಗಿದೆ.

ದೇಶದಲ್ಲಿ ಮೊಟ್ಟಮೊದಲ ಬಾರಿಗೆ ತೃಣದಾನ್ಯಗಳ ಪಿಜ್ಜಾ ಮತ್ತು ಇತರೆ ತಿನಿಸುಗಳನ್ನು ತಯಾರು ಮಾಡಲಾಗಿದೆ. ವಿವಿಧ ರೀತಿಯ ಡೀಟಾಕ್ಸ್ ಪಾನೀಯಗಳನ್ನು ಸಹ ಗ್ರಾಹಕರಿಗೆ ಒದಗಿಸಲಾಗುತ್ತಿದೆ ಎಂದು ಗ್ರೀಸ್ ಪಾತ್ ನ ಸಂಸ್ಥಾಪಕ ಜಯರಾಮ್ ಎಂದರು.

English summary
Malleshwaram as always moving towards another milestone on World Environmental day 2016. MLA Ashwath Narayan urged public to follow and adopt Organic farming. He also inaugurated “Adopt a Tree Initiative” planting 1500 saplings across all 7 wards of the constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X