ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ದೊಡ್ಡಕೆರೆ ಆವರಣದಲ್ಲಿ ಸಸಿ ನೆಟ್ಟು ಪರಿಸರ ದಿನ ಆಚರಣೆ

|
Google Oneindia Kannada News

ಬೆಂಗಳೂರು, ಜೂನ್ 6: ವಿಶ್ವ ಪರಿಸರ ದಿನದ ನಿಮಿತ್ತ ಬೆಂಗಳೂರು ಮೂಲದ ಎನ್ ಜಿ ಒ ಯುನೈಟೆಡ್ ವೇ ಬೆಂಗಳೂರು ಮತ್ತು ಬಿಬಿಎಂಪಿ ಸಹಯೋಗದಲ್ಲಿ ಸದ್ಗುರು ಸಾಯಿನಾಥ್ ಶಾಲೆಯ 150 ಮಕ್ಕಳಿಂದ ಸಸಿ ನೆಡುವ ಕಾರ್ಯಕ್ರಮ ಬೆಂಗಳೂರಿನ ಕುಡ್ಲು ದೊಡ್ಡಕೆರೆ ಸಮಿಪ ನಡೆಯಿತು.

600 ಸಸಿಗಳನ್ನು ನೆಟ್ಟ ಮಕ್ಕಳಿಗೆ ಪರಿಸರ ರಕ್ಷಣೆ, ಸಸಿ ಬೆಳೆಸುವ ಮಹತ್ವವನ್ನು ತಿಳಿಸಿಕೊಡಲಾಯಿತು. ಯುನೈಟೆಡ್ ವೇ ಬೆಂಗಳೂರು ಎನ್ ಜಿ ಓದ ಸಿಇಒ ಮನಿಶ್ ಮೈಕಲ್ ಮಾತನಾಡಿ, ನಮ್ಮ ಭವಿಷ್ಯವಾದ ಈ ಮಕ್ಕಳನ್ನು ಉತ್ತಮ ಸಂಸ್ಕಾರ ನೀಡಿ ಬೆಳೆಸುವ ಮೂಲಕ ಅವರು ಸಮಾಜಕ್ಕೆ ಮಾದರಿಯಾಗುವಂತೆ ಮಾಡಬೇಕಿದೆ ಎಂದರು. ಅವರಿಗೆ ಪರಿಸರದ ಮಹತ್ವವನ್ನು ತಿಳಿಸಿಕೊಡುವುದು ಮುಖ್ಯ ಎಂದರು.[ಜಾಗತಿಕ ತಾಪಮಾನ ತಗ್ಗಿಸಲು ಪಣತೊಡೋಣ: ಅನಂತ ಕುಮಾರ್]

World Environment Day Celebration by school children in bengaluru

40 ಎಕರೆಯಷ್ಟು ವಿಶಾಲವಾದ ದೊಡ್ಡಕೆರೆಯನ್ನು ವೇಕ್ ದ ಲೇಕ್ ಕ್ಯಾಂಪೇನ್ ಮೂಲಕ ಸ್ವಚ್ಛಗೊಳಿಸಲಾಗುತ್ತಿದ್ದು, ಈ ಕೆರೆಯ ಸುತ್ತ ವಾಕಿಂಗ್ ಪಾತ್ ನಿರ್ಮಿಸುವ ಜವಾಬ್ದಾರಿಯನ್ನು ಯುನೈಟೆಡ್ ವೇ ಆಫ್ ಬೆಂಗಳೂರು ಹೊತ್ತಿತ್ತು. ಇದೀಗ ಈ ಕೆರೆ ಸುತ್ತ ಸಸಿಗಳನ್ನು ಬೆಳೆಸುವ ಮೂಲಕ ಹಸಿರು ಬೆಂಗಳೂರಿಗೆ ನಾಂದಿ ಹಾಡಿದೆ.

English summary
The World Environment Day was celebrated amidst much excitement and joy by school children and volunteers which was organized by Bengaluru based NGO United Way Bengaluru and BBMP. Nearly 150 children from Sadhguru Sainath School, 50 volunteers and team members of United Way Bengaluru came together to plant 600 saplings at Kudlu Doddakere near Kudlu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X