ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯರ ಶೋಷಣೆ ವಿರುದ್ಧ ಬೆಂಗಳೂರಿನಲ್ಲಿ ವಿಚಾರಗೋಷ್ಠಿ

By Prasad
|
Google Oneindia Kannada News

ಬೆಂಗಳೂರು, ಜೂ. 13 : ಹಿರಿಯರ ಮೇಲೆ ನಡೆಯುತ್ತಿರುವ ಶೋಷಣೆಯ ವಿರುದ್ಧ ಜಾಗೃತಿ ಮೂಡಿಸಲು ಜೂನ್ 15, ವಿಶ್ವ ಹಿರಿಯರ ಶೋಷಣೆ ಜಾಗೃತಾ ದಿನದಂದು ಬೆಂಗಳೂರು ನಗರ ಪೊಲೀಸರು ಮತ್ತು ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ಬೆಂಗಳೂರಿನಲ್ಲಿ ವಿಚಾರಗೋಷ್ಠಿಯನ್ನು ಬೆಂಗಳೂರಿನಲ್ಲಿ ಆಯೋಜಿಸಿವೆ.

ಪ್ರತಿ ವರ್ಷವೂ ಜೂನ್ 15ನೇ ತಾರೀಖು ವಿಶ್ವ ಹಿರಿಯರ ಶೋಷಣೆ ಜಾಗೃತಾ ದಿನ [World Elder Abuse Awareness Day (WEAAD)] ಆಚರಿಸಲಾಗುತ್ತಿದೆ. ಹಿರಿಯರ ಶೋಷಣೆ, ನಿರ್ಲಕ್ಷ್ಯ, ಅವರನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದರ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಈ ದಿನ ಮೀಸಲು.

ಕಾದ ಬದಲಾದಂತೆ ಹಿರಿಯರು ಕಲಿಸಿಕೊಟ್ಟ ಮೌಲ್ಯಗಳು ಮಣ್ಣುಪಾಲಾಗುತ್ತಿವೆ, ಕೆಲಸದ ತಾಕಲಾಟಗಳ ನಡುವೆ ಸಂಬಂಧಗಳು ಮರೆಯಾಗುತ್ತಿವೆ. ಮಕ್ಕಳು ಮರಿಗಳು ಅಕ್ಕಪಕ್ಕದಲ್ಲೇ ಇದ್ದರೂ ಹಿರಿಯರು ವೃದ್ಧಾಶ್ರಮ ಸೇರುವಂತಾಗುತ್ತಿದೆ. ಹಿರಿಯರು ತಮ್ಮ ಮಕ್ಕಳಿಂದಲೇ ಶೋಷಣೆಗೊಳಗಾಗುತ್ತಿದ್ದಾರೆ. [ಹಿರಿಯರ ನೆರವಿಗೆ ಬೆಂಗಳೂರು ಪೊಲೀಸರ ಸಹಾಯವಾಣಿ]

World Elder Abuse Awareness Day on 15th June

ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಕೆಲವು ವರ್ಷಗಳಿಂದ ಜಾಗೃತಿಗಾಗಿ ಜಾಥಾ, ರಸ್ತೆ ಪ್ರದರ್ಶನಗಳು ಮತ್ತು ಬೀದಿ ನಾಟಕಗಳನ್ನು ನಿರ್ವಹಿಸುತ್ತಿದೆ. ಈ ವರ್ಷ "ಹಿರಿಯರ ಶೋಷಣೆಯನ್ನು ನಿಲ್ಲಿಸಿ - ಘರ್ಷಣೆಯಿಂದ ಸಂವಹನದ ಕಡೆ ಹೊರಡಿ" ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿಯನ್ನು ಆಯೋಜಿಸಿದೆ. ಇದು ಮಣಿಪಾಲ್ ಸೆಂಟರ್ ನಲ್ಲಿರುವ ರಾಯಲ್ ಆರ್ಕಿಡ್ ಸೆಂಟ್ರಲ್ ಹೋಟೆಲ್ ನಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ಪಿ.ಸಿ.ಜಯಣ್ಣ, ನಿರ್ದೇಶಕರು, ಅಂಗವಿಕಲರು ಹಾಗೂ ಹಿರಿಯರ ಸಬಲೀಕರಣ ವಿಭಾಗ, ಕರ್ನಾಟಕ ಸರ್ಕಾರ, ಅವರು ಈ ಸಮಾರಂಭಕ್ಕೆ ಮುಖ್ಯ ಅತಿಥಿ. ಹಿರಿಯರು, ಮಧ್ಯತಲೆಮಾರಿನವರು ಮತ್ತು ಇಂದಿನ ತಲೆಮಾರಿನ ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸತ್ತಿದ್ದಾರೆ. "ತಲೆಮಾರುಗಳ ಮಧ್ಯೆ ಘರ್ಷಣೆ" ಬಗ್ಗೆ ಹಿರಿಯ ವಕೀಲ ಶಿವಕುಮಾರ್ ಮಾತನಾಡಲಿದ್ದಾರೆ. [ಹಿರಿಜೀವಿಗಳಿಗೆ ಶನಿ ಪ್ರಭಾವ ಶುರುವಾದ್ರೆ ಗೋವಿಂದ!]

ತೊಂದರೆಯಲ್ಲಿರುವ ಹಿರಿಯರಿಗೆ ಸಾಧ್ಯವಾದಷ್ಟು ಬೆಂಬಲವನ್ನು 2002ರಿಂದ ಹಿರಿಯರ ಸಹಾಯವಾಣಿ 1090 ನೀಡುತ್ತಿದೆ. ಬೆಂಗಳೂರಿನಲ್ಲೇ ಸುಮಾರು 50%ರಷ್ಟು ಹಿರಿಯರು ಯಾವುದಾದರೊಂದು ರೀತಿಯಲ್ಲಿ ಶೋಷಣೆಯನ್ನು ಅನುಭವಿಸುತ್ತಿದಾರೆಂದು ಅಧ್ಯಯನದಿಂದ ತಿಳಿದುಬಂದಿದೆ. ಇದುವರೆಗೆ ಸಹಾಯವಾಣಿ 1,31,411 ಕರೆಗಳನ್ನು ಸ್ವೀಕರಿಸಿದ್ದು, 7984 ದೂರುಗಳು ನೋಂದಣೆಯಾಗಿವೆ. ಮತ್ತು 4089 ವಿವಾದಗಳು ಯಶಸ್ವಿಯಾಗಿ ಸಮಾಲೋಚನೆ, ಕಾನೂನು ಸಲಹೆ ಅಥವಾ ಇತರ ಸೂಕ್ತ ಕ್ರಮಗಳಿಂದ ಪರಿಹರಿಸಲಾಗಿದೆ.

ತೊಂದರೆಯಲ್ಲಿರುವ ಹಿರಿಯರು ಅಥವಾ ಶೋಷಣೆಯಲ್ಲಿರುವ ಹಿರಿಯರ ಶೋಷಣೆಯನ್ನು ನೋಡಿ, ಕಾಳಜಿ ಇರುವವರು ಹಿರಿಯರ ಸಹಾಯವಾಣಿ ಯನ್ನು 1090 (ಟೋಲ್ ಫ್ರೀ) ಅಥವಾ 22943226ಗೆ ಕರೆ ಮಾಡಬಹುದು. ಸಹಾಯವಾಣಿಯ ಎಲ್ಲಾ ಸೇವೆಗಳು ಉಚಿತವಾಗಿ ಕೊಡಲಾಗುವುದು.

ಹೆಚ್ಚಿನ ವಿವರಗಳಿಗೆ : ಡಾ. ರಾಧಾ ಎಸ್. ಮೂರ್ತಿ, ಮೇನೇಜಿಂಗ್ ಟ್ರಸ್ಟೀ, ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್
ಮೊಬೈಲ್ : 9844037381

English summary
Nighingales Medical Centre in association with Bangalore city police has organized a seminar to create awareness about safety of senior citizen. World Elder Abuse Awareness Day (WEAAD) will be celebrated on June 15 every year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X