ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲ್ಯಾಶ್ ಮಾಬ್ ಡ್ಯಾನ್ಸ್‌ ಮೂಲಕ ವೈದ್ಯರಿಗೆ ವಿಶೇಷ ಗೌರವ ಸಮರ್ಪಣೆ

|
Google Oneindia Kannada News

ಬೆಂಗಳೂರು, ಜುಲೈ 01; 'ವೈದ್ಯೋ ನಾರಾಯಣೋ ಹರಿ' ಎನ್ನುವ ಮಾತಿದೆ. ಅದು ಈಗ ಅಕ್ಷರಶಃ ಸತ್ಯ ಎನಿಸದಿರದು. ಕೋವಿಡ್ ಪರಿಸ್ಥಿತಿ ಬಳಿಕ ವೈದ್ಯರು ನಿಜಕ್ಕೂ ಭೂಮಿಯ ಮೇಲಿನ ದೇವರಂತಾಗಿದ್ದಾರೆ. ಶುಕ್ರವಾರ ವಿಶ್ವ ವೈದ್ಯರ ದಿನ. ವೈದ್ಯರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಬೆಂಗಳೂರಿನಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ ನಡೆಯಿತು.

ಹೆಸರಾಂತ ವೈದ್ಯ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ. ಬಿಧನ್ ಚಂದ್ರ ರಾಯ್ ಜನ್ಮದಿನದ ಪ್ರಯುಕ್ತ ಹಾಗೂ ಅವರ ಕೊಡುಗೆಗಳನ್ನು ಗೌರವಿಸಲು ಜುಲೈ 1 ರಂದು ವೈದ್ಯರ ದಿನವೆಂದು ಆಚರಿಸಲಾಗುತ್ತದೆ. ವಿಶ್ವ ವೈದ್ಯರ ದಿನದ ಪ್ರಯುಕ್ತ ವೈದ್ಯರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬೆಂಗಳೂರಿನ ರಾಜಾಜಿನಗರದ ಎನ್‌ಯು ಆಸ್ಪತ್ರೆಯ ನರ್ಸ್, ಸಿಬ್ಬಂದಿಗಳು ವೈದ್ಯರಿಗೆ ವಿಶಿಷ್ಟ ಬಗೆಯ ಶುಭಾಶಯ ತಿಳಿಸಿದರು.

ಹಿಮಾಲಯ ಚಾರಣಕ್ಕೆ ಹೋದ ಬೆಂಗಳೂರು ವೈದ್ಯ ಕಣ್ಮರೆ! ಹಿಮಾಲಯ ಚಾರಣಕ್ಕೆ ಹೋದ ಬೆಂಗಳೂರು ವೈದ್ಯ ಕಣ್ಮರೆ!

ಆಸ್ಪತ್ರೆಯ ತಳ ಮಹಡಿಯಲ್ಲಿ ಒಬ್ಬೊಬ್ಬರಾಗಿ ಸೇರಿದ ಆಸ್ಪತ್ರೆಯ ಸಿಬ್ಬಂದಿ ತಮ್ಮದೇ ಶೈಲಿಯಲ್ಲಿ ನೃತ್ಯ ಮಾಡುವ ಮೂಲಕ ರೋಗಿಗಳ, ಪೋಷಕರ ಹಾಗೂ ವೈದ್ಯರ ಗಮನ ಸೆಳೆದರು. ನಂತರ ನೃತ್ಯಕ್ಕೆ ಒಬ್ಬೊಬ್ಬರಾಗಿ ಜೊತೆಯಾದರು.

ಮೋದಿಯನ್ನು ಭೇಟಿ ಮಾಡಿದ ಉಕ್ರೇನ್‌ನಲ್ಲಿ ಮೃತಪಟ್ಟ ವೈದ್ಯ ವಿದ್ಯಾರ್ಥಿ ನವೀನ್ ಕುಟಂಬ ಮೋದಿಯನ್ನು ಭೇಟಿ ಮಾಡಿದ ಉಕ್ರೇನ್‌ನಲ್ಲಿ ಮೃತಪಟ್ಟ ವೈದ್ಯ ವಿದ್ಯಾರ್ಥಿ ನವೀನ್ ಕುಟಂಬ

World Doctors Day 2022 Flash Mob Dance At Hospital To Honor Doctors

ಸದ್ದೇ ಇಲ್ಲದೆ ಕುಣಿಯಲು ಆರಂಭಿಸಿದ ಸಿಬ್ಬಂದಿ ನಂತರ ಗಮನಸೆಳೆಯುವ ಹಾಡುಗಳಿಗೆ ನೃತ್ಯ ಮಾಡಲಾರಂಭಿದಿದರು. ಆ ಮೂಲಕ ದೇಶದಲ್ಲಿ ನಿಸ್ವಾರ್ಥದಿಂದ ಸೇವೆ ಮಾಡುವ ವೃತ್ತಿಗಳಲ್ಲಿ ಒಂದಾದ ವ್ಯದ್ಯ ವೃತ್ತಿಗೆ ನಮನ ಸಲ್ಲಿಸಿದರು.

ಉಕ್ರೇನ್‌ನಿಂದ ಬಂದ ವೈದ್ಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ; ಸರ್ಕಾರಕ್ಕೆ ಎಚ್‌ಡಿಕೆ ಆಗ್ರಹಉಕ್ರೇನ್‌ನಿಂದ ಬಂದ ವೈದ್ಯ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿ; ಸರ್ಕಾರಕ್ಕೆ ಎಚ್‌ಡಿಕೆ ಆಗ್ರಹ

ಸಾಮಾನ್ಯವಾಗಿ ಸಮಯದ ಹೊಂದಾಣಿಯ ಕೊರತೆಯ ಕಾರಣಕ್ಕಾಗಿ ವ್ಯದ್ಯರನ್ನು ಶಪಿಸುತ್ತಲೇ ಕಾಲ ಕಳೆಯುವ ಬಹುತೇಕ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹೋಲಿಸಿದರೆ ಎನ್‌ಯು ಆಸ್ಪತ್ರೆಯ ಸಿಬ್ಬಂದಿ ಭಿನ್ನ ಎನಿಸಿಕೊಳ್ಳುತ್ತಾರೆ. ಇಂತಹ ಸಿಬ್ಬಂದಿ ವಿಶಿಷ್ಟ ಫ್ಲಾಷ್ ಮಾಬ್ ಮೂಲಕ ವಿಶ್ವ ವೈದ್ಯರ ದಿನವನ್ನು ಆಚರಿಸಿದರು.

World Doctors Day 2022 Flash Mob Dance At Hospital To Honor Doctors

ಬೆಂಗಳೂರಿನ ಎನ್‌ಯು ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಮತ್ತು ಹಿರಿಯ ಸಮಾಲೋಚಕ, ಪೀಡಿಯಾಟ್ರಿಕ್ ಮೂತ್ರಶಾಸ್ತ್ರಜ್ಞ ಡಾ. ಪ್ರಸನ್ನ ವೆಂಕಟೇಶ್ ಮಾತನಾಡಿ, "ವೈದ್ಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಅವರು ದೈನಂದಿನ ದೈಹಿಕ ಚಟುವಟಿಕೆ, ವಾರ್ಷಿಕ ಆರೋಗ್ಯ ತಪಾಸಣೆ ಮತ್ತು ಸೂಕ್ತವಾದ ಆಹಾರಕ್ರಮವನ್ನು ಖಚಿತಪಡಿಸಿಕೊಳ್ಳಬೇಕು. ವೈದ್ಯರ ದಿನವು ನಮಗೆ ಅತ್ಯಂತ ಮಹತ್ವದ್ದು. ವೈದ್ಯರು ಸಮಾಜದ ಆರೋಗ್ಯ ಕಾಪಾಡಲು ತಮ್ಮ ಕುಟುಂಬದ ಸಮಯ ತ್ಯಾಗ ಮಾಡುತ್ತಾರೆ. ವೈದ್ಯರನಿಸ್ವಾರ್ಥ ಸೇವೆಗಾಗಿ ಧನ್ಯವಾದಗಳು" ಎಂದರು.

ಆಸ್ಪತ್ರೆಯ ವೈದ್ಯ ಡಾ. ಪ್ರಮೋದ್ ಕೃಷ್ಣಪ್ಪ ಮಾತನಾಡಿ, "ಇದು ನಿಜವಾಗಿಯೂ ಆಹ್ಲಾದಕಾರಿ ಉಲ್ಲಾಸಯುತ ಕಾರ್ಯಕ್ರಮವಾಗಿತ್ತು. ನಾವೆಲ್ಲರೂ ಆಸ್ಪತ್ರೆಯಲ್ಲಿ ಕುಟುಂಬವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಕುಟುಂಬ ಸದಸ್ಯರು ಸಮಾಜದಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಫ್ಲಾಷ್ ಮಾಬ್ ಮೂಲಕ ಗೌರವ ಸಮರ್ಪಣೆ ಮಾಡಿದ್ದು ನಿಜಕ್ಕೂ ಸಂತೋಷದ ವಿಚಾರ" ಎಂದು ಹೇಳಿದರು.

English summary
World doctors day 2022; Flash mob dance at Bengaluru Rajajinagar hospital to honor doctors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X