ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಸ್ವಚ್ಛತಾ ದಿನ: ಬೆಂಗಳೂರಲ್ಲಿ 20 ಟನ್‌ ಬಳಸಿದ ಅಲ್ಯುಮಿನಿಯಂ ಕ್ಯಾನ್‌ ಸಂಗ್ರಹ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ವಿಶ್ವ ಸ್ವಚ್ಛತಾ ದಿನದ ಅಂಗವಾಗಿ ದೇಶದ ಮುಂಚೂಣಿಯ ಮರುಬಳಕೆಯ ಅಲ್ಯುಮಿನಿಯಂ ಪಾನೀಯ ಕ್ಯಾನ್‌ಗಳ ತಯಾರಕ ಕಂಪನಿ ಬಾಲ್‌ ಬೆವರೇಜ್‌ ಪ್ಯಾಕಿಂಗ್‌ ಇಂಡಿಯಾ, ಬೆಂಗಳೂರಿನಲ್ಲಿ 20 ಟನ್‌ (20 ಸಾವಿರ ಕೆಜಿ) ಅಲ್ಯುಮಿನಿಯಂ ಪಾನೀಯ ಕ್ಯಾನ್‌ಗಳನ್ನು(ಯುಬಿಸಿ) ಸಂಗ್ರಹಿಸಿರುವುದಾಗಿ ಘೋಷಿಸಿದೆ. ಕಳೆದ ಆರು ತಿಂಗಳಿಂದ ನಡೆಯುತ್ತಿರುವ ಈ ಮರುಬಳಕೆಯ ಪ್ರಾಯೋಗಿಕ ಯೋಜನೆಯ ಭಾಗವಾಗಿ ಈ ಉಪಕ್ರಮ ಹಮ್ಮಕೊಳ್ಳಲಾಗಿತ್ತು. ಇದು ವ್ಯವಸ್ಥಿತ ವಿಧಾನದಲ್ಲಿ ಯುಬಿಸಿಗಳನ್ನು ಸಂಗ್ರಹಿಸಿ, ಮರುಸಂಸ್ಕರಣೆ ಮಾಡುವ ಮೂಲಕ, ತ್ಯಾಜ್ಯ ಸಂಗ್ರಾಹಕರ ಜೀವನೋಪಾಯ ಹೆಚ್ಚಳ ಹಾಗೂ ಹೆಚ್ಚು ಮೌಲ್ಯಯುತ ಅಲ್ಯುಮಿನಿಯಂ ಅನ್ನು ಪೂರಕ ಸರಣಿಯಲ್ಲಿ ಉಳಿಸಿಕೊಳ್ಳುವ ಗುರಿ ಹೊಂದಿದೆ. ಈ ಪ್ರಾಯೋಗಿಕ ಯೋಜನೆ, ಬೆಂಗಳೂರು ಮೂಲದ 5 ಸಾವಿರ ತ್ಯಾಜ್ಯ ಸಂಗ್ರಾಹಕರಿಗೆ ನಿರಂತರ ಆದಾಯ ತಂದುಕೊಡುವ ಮೂಲಕ ಲಾಭ ಒದಗಿಸಿದೆ. ಹಾಗೂ, ಕ್ಯಾನ್‌ಗಳನ್ನು ತಯಾರಿಸಲು ಬಳಸಿದ ಅಲ್ಯುಮಿನಿಯಂ ಪೂರೈಕೆ ಕೂಡ ಹೆಚ್ಚಳವಾಗಿದೆ.

ಯುಬಿಸಿಗಳನ್ನು ತ್ಯಾಜ್ಯ ಸಂಗ್ರಾಹಕರ ರೀಸೈಕಲ್‌ ನೆಟ್‌ವರ್ಕ್ ಮೂಲಕ ಮನೆಗಳು, ಅಪಾರ್ಟ್‌ಮೆಂಟ್‌ಗಳು, ಬ್ಯುಸಿನೆಸ್‌ ಪಾರ್ಕ್‌ಗಳು, ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳಿಂದ ಸಂಗ್ರಹಿಸಲಾಗಿದೆ. ಯುಬಿಸಿಗಳ ಮೊದಲ ರವಾನೆಯನ್ನು ಭಾರತದಲ್ಲಿ ಹೊಸ ಅಲ್ಯುಮಿನಿಯಂ ಕ್ಯಾನ್‌ ತಯಾರಿಗೆ ಬಳಸಲಾಗುತ್ತದೆ. ಅಲ್ಯುಮಿನಿಯಂ ಕ್ಯಾನ್‌ಗಳ ಮರುಬಳಕೆ ಅಲ್ಯುಮಿನಿಯಂನ ಪ್ರಾಥಮಿಕ ಲೋಹ ತಯಾರಿಕೆಯನ್ನು ಶೇ.95ರಷ್ಟು ಕಡಿಮೆಗೊಳಿಸುತ್ತದೆ ಮತ್ತು ಜಿಎಚ್‌ಜಿ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆಗೊಳಿಸುತ್ತದೆ. ಶೀಘ್ರದಲ್ಲೇ ಈ ಯೋಜನೆ ದೇಶದ ಇತರ ಭಾಗಗಳಿಗೆ ವಿಸ್ತರಣೆಯಾಗಲಿದೆ. ಈಪ್ರಾಯೋಗಿಕ ಉಪಕ್ರಮ ದೇಶಾದ್ಯಂತ ಒಂದು ಮಿಲಿಯನ್‌ಗೂ ಹೆಚ್ಚು ತ್ಯಾಜ್ಯ ಸಂಗ್ರಾಹಕರಿಗೆ ಲಾಭ ತಂದುಕೊಟ್ಟಿದೆ.

ಈ ಉಪಕ್ರಮದ ಕುರಿತು ಪ್ರತಿಕ್ರಿಯಿಸಿರುವ ಬಾಲ್‌ ಬೆವರೇಜ್‌ ಪ್ಯಾಕೇಜಿಂಗ್‌ನ ಭಾರತ ಹಾಗೂ ಆಗ್ನೇಯ ಏಷಿಯಾ ಪ್ರದೇಶದ ಉಪಾಧ್ಯಕ್ಷ ಹಾಗೂ ಪ್ರಧಾನ ವ್ಯವಸ್ಥಾಪಕ ಅಮಿತ್‌ ಲಾಹೋಟಿ, ''ರೀಸೈಕಲ್‌ನೊಂದಿಗಿನ ಸಹಭಾಗಿತ್ವದ ನಮ್ಮ ಪ್ರಾಯೋಗಿಕ ಯೋಜನೆ, ಮರುಬಳಕೆಯ ಕ್ಯಾನ್‌ಗಳು ಜನರು ಹಾಗೂ ಪರಿಸರ ಎರಡಕ್ಕೂಲಾಭ ತಂದುಕೊಡಬಲ್ಲದು ಎಂಬುದನ್ನು ದೃಢಪಡಿಸಿದೆ. ಇದು ತ್ಯಾಜ್ಯ ಸಂಗ್ರಾಹಕರಿಗೆ ಜೀವನೋಪಾಯ ಒದಗಿಸುವುದರ ಜೊತೆಗೆ, ನೈಸರ್ಗಿಕ ಸಂಪನ್ಮೂಲಗಳ ಮರುಬಳಕೆ ಹಾಗೂ ಸಂಗ್ರಹಿಸಿದ ಯುಬಿಸಿಗಳ ಮರುಬಳಕೆ ಮತ್ತು ಹೊಸ ಕ್ಯಾನ್‌ಗಳಾಗಿ ಪರಿವರ್ತನೆಯನ್ನು ಖಾತರಿಪಡಿಸುತ್ತದೆ'' ಎಂದಿದ್ದಾರೆ.

World Cleanup Day: 20 tons of Used Beverage Aluminum Cans for recycling

ಮುಂದುವರಿದು ಅವರು, "ಈ ಉಪಕ್ರಮದ ಮೂಲಕ ನಮ್ಮ ಪರಿಸರ ಹಾಗೂ ಖಂಡವನ್ನು ಸಂರಕ್ಷಿಸಲು ನಾವು ಹಲವು ರೀತಿಯಲ್ಲಿ ಕೊಡುಗೆ ನೀಡಬಲ್ಲದು ಎಂಬುದನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವ ಒಂದು ಪ್ರಯತ್ನ ನಡೆಸಲಾಗಿದೆ. ಬಳಸಿದ ಕ್ಯಾನ್‌ಗಳನ್ನು ಸಂಗ್ರಹಿಸುವುದು ಮತ್ತು ಅದನ್ನು ತ್ಯಾಜ್ಯ ಸಂಗ್ರಾಹಕರಿಗೆ ತಲುಪಿಸುವುದು ಇದರ ಒಂದು ಸರಳ ಆರಂಭವಷ್ಟೇ. ನಾವು ಈ ಸಂಬಂಧ ರೀಸೈಕಲ್‌ನೊಂದಿಗೆ ಕೆಲಸ ಮುಂದುವರಿಸುತ್ತೇವೆ" ಎಂದರು.

ಭಾರತದಲ್ಲಿ ಯುಬಿಸಿಗಳ ಒಟ್ಟು ಮೊತ್ತವು ವರ್ಷಕ್ಕೆ ಸುಮಾರು 22,000 ಟನ್‌ಗಳಷ್ಟಿರುತ್ತದೆ ಎಂದು ಅಂದಾಜಿಸಲಾಗಿದೆ ಆದ್ದರಿಂದ ದೇಶದಲ್ಲಿ ಒಂದು ವೃತ್ತಾಕಾರದ ಆರ್ಥಿಕತೆಗೆ ಮತ್ತಷ್ಟು ಕೊಡುಗೆ ನೀಡಲು ಈ ಉಪಕ್ರಮಕ್ಕೆ ಹೆಚ್ಚಿನ ಅವಕಾಶವಿದೆ.

ರೀಸೈಕಲ್ ನಿರ್ದೇಶಕ ಅಫ್ಸರ್ ಅಹ್ಮದ್ ಮೊಹಮ್ಮದ್ ಮಾತನಾಡಿ, "ಬಳಸಿದ ಅಲ್ಯೂಮಿನಿಯಂ ಪಾನೀಯ ಕ್ಯಾನ್‌ಗಳ ಸಂಗ್ರಹ ಎರಡು ಗುರಿಗಳನ್ನು ಸಾಧಿಸುವಲ್ಲಿ ನೆರವಾಗಿದೆ. ಅವುಗಳೆಂದರೆ- ಭಾರತದಲ್ಲಿ ಸಂಕಷ್ಟದಲ್ಲಿದ್ದ ತ್ಯಾಜ್ಯ ಸಂಗ್ರಾಹಕರ ಆರ್ಥಿಕ ಸಬಲೀಕರಣ ಮತ್ತು ತ್ಯಾಜ್ಯ ಸಂಗ್ರಹ ವೃತ್ತಿಯನ್ನು ಸುವ್ಯವಸ್ಥಿತಗೊಳಿಸುವುದು. ಬಾಲ್ ಜೊತೆಗಿನ ಈ ಪ್ರಾಯೋಗಿಕ ಯೋಜನೆ ನಮಗೆ ಅಲ್ಯೂಮಿನಿಯಂ ಅನ್ನು ಪ್ಯಾಕೇಜಿಂಗ್ ಫಾರ್ಮ್ಯಾಟ್ ಎಂದು ಗುರುತಿಸಲು ನೆರವಾಯಿತು. ಯುಬಿಸಿಗಳ ಜವಾಬ್ದಾರಿಯುತ ವಿಲೇವಾರಿ ಮತ್ತು ಸಂಗ್ರಹಣೆಯು ಬೆಂಗಳೂರಿಗರಿಗೆ ಬದುಕಲು ಸ್ವಚ್ಛ ಮತ್ತು ಹಸಿರು ನಗರ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ವಿಶ್ವಾಸವಿದೆ" ಎಂದರು.

ಅಲ್ಯೂಮಿನಿಯಂ ಕ್ಯಾನುಗಳು ಕಾರ್ಬನ್‌ ಡೈ ಆಕ್ಸೈಡ್‌ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಐಸಿಎಫ್ ಇಂಟರ್‌ನ್ಯಾಷನಲ್‌ನ 2016 ರ ಅಧ್ಯಯನವು ಅಲ್ಯೂಮಿನಿಯಂ ಕ್ಯಾನ್‌ಗಳಲ್ಲಿ ಪಾನೀಯಗಳ ಸಂಗ್ರಹದಿಂದ ಇತರ ಪಾನೀಯಗಳಿಗೆ ಹೋಲಿಸಿದರೆ ಕಡಿಮೆ ಸಂಯೋಜಿತ ಹಸಿರುಮನೆ ಅನಿಲ (ಜಿಎಚ್‌ಜಿ) ಹೊರಸೂಸುತ್ತದೆ ಎಂದು ತಿಳಿಸಿದೆ.

English summary
World Cleanup Day: Ball India and Recykal collect 20 tons of Used Beverage Aluminum Cans for recycling from Bengaluru City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X