ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಜೇನು ನೊಣಗಳ ದಿನ, ಮಹತ್ವ, ಇತಿಹಾಸ ಅರಿಯಿರಿ

|
Google Oneindia Kannada News

ಬೆಂಗಳೂರು ಮೇ 20: ಜೇನುಗಿಂತ ಸವಿ ಈ ಪ್ರಪಂಚದಲ್ಲೇ ಇಲ್ಲ. ಜೇನು ತುಪ್ಪದ ಸವಿ ಬಲ್ಲವನೇ ಬಲ್ಲ. ಅದನ್ನು ಪದಗಳಲ್ಲಿ ವರ್ಣಿಸುವುದು ಕಷ್ಟಸಾಧ್ಯ. ಜೇನು ತುಪ್ಪದ ರುಚಿಯನ್ನು ಸವಿಯುವ ಮೂಲಕವೇ ಅದರ ಸ್ವಾದವನ್ನು ನಾವು ಅನುಭವಿಸಬೇಕಿದೆ. ಅಯುವೇದದಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿದೆ. ಬಹುತೇಕ ಅಯುರ್ವೇದ ಔಷಧಗಳಿಗೆ ಜೇನು ತುಪ್ಪವನ್ನು ಬಳಸಲಾಗುತ್ತದೆ.

ಜೇನು ತುಪ್ಪವನ್ನು ಸೇವಿಸಿದರೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಇದರಿಂದ ಕಾರ್ಯಚಟುವಟಿಕೆ ಸಾಮರ್ಥ್ಯ ಹೆಚ್ಚಳ, ಲೈಂಗಿಕ ಶಕ್ತಿ ವೃದ್ಧಿ ಸೇರಿದಂತೆ ಅನೇಕ ಆರೋಗ್ಯಕರ ಉಪಯೋಗಗಳಿವೆ. ಬೆಳಗ್ಗೆ ಖಾಲಿ ಹೊಟ್ಟೆಗೆ ಉಗುರು ಬೆಚ್ಚಗಿನ ನೀರಿಗೆ ಎರಡು ಚಮಚ ಜೇನು ತುಪ್ಪ ಸೇರಿಸಿ ಪ್ರತಿದಿನ ಕುಡಿದರೆ ದೇಹದ ತೂಕ ಕಡಿಮೆ ಆಗಲು ಸಹಕಾರಿಯಾಗಿದೆ. ಹೀಗೆ ಜೇನು ತುಪ್ಪದಿಂದ ಹತ್ತು-ಹಲವು ಉಪಯೋಗಗಳಿವೆ.

 ವಿಶ್ವ ಜೇನು ಹುಳುಗಳ ದಿನ ಆಚರಣೆ:

ವಿಶ್ವ ಜೇನು ಹುಳುಗಳ ದಿನ ಆಚರಣೆ:

ಜೇನು ತುಪ್ಪವನ್ನು ನಾವು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಒಂದು ಚಮಚ ಜೇನು ತುಪ್ಪ ಶೇಖರಣೆಗೆ ಹತ್ತಾರು ಹೂಗಳಿಂದ ಜೇನು ಹುಳಗಳು ಜೇನು ಸಂಗ್ರಹಿಸಬೇಕಾಗುತ್ತದೆ. ಜೇನು ಹುಳುಗಳ ಶ್ರಮದಿಂದ ಮನುಷ್ಯನು ಜೇನು ತುಪ್ಪ ಸವಿಯುತ್ತಿದ್ದಾನೆ. ಅಲ್ಲದೇ ಪರಿಸರ ವ್ಯವಸ್ಥೆ ಸಮತೋಲನವಾಗಿರಲು ಜೇನು ಹುಳಗಳು ಅತ್ಯವಶ್ಯಕ. ಹೀಗಾಗಿ ಜೇನು ಹುಳಗಳಿಗೆ ಕೃತಜ್ಞತೆ ಸಲ್ಲಿಸಲು ಮೇ 20ರಂದು ಪ್ರಪಂಚದಾದ್ಯಂತ 'ವಿಶ್ವ ಜೇನು ಹುಳುಗಳ ದಿನ'ವನ್ನಾಗಿ ಆಚರಿಸಲಾಗುತ್ತಿದೆ.

 ಜೈವಿಕ ವೈವಿಧ್ಯತೆ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ:

ಜೈವಿಕ ವೈವಿಧ್ಯತೆ ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ:

ಪರಿಸರ ವ್ಯವಸ್ಥೆಯಲ್ಲಿ ಜೇನು ನೊಣಗಳು ಮತ್ತು ಇತರೆ ಪರಾಗಸ್ಪರ್ಶಗಳ ಪ್ರಾಮುಖ್ಯತೆಯನ್ನು ಗುರುತಿಸುವ ಗುರಿಯನ್ನು ವಿಶ್ವ ಜೇನು ನೊಣಗಳ ದಿನ ಹೊಂದಿದೆ. ಜೈವಿಕ ವೈವಿಧ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜೇನು ನೊಣಗಳ ಪಾತ್ರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಪರಾಗಸ್ಪರ್ಶಗಳು ಮತ್ತು ಅವುಗಳ ಆವಾಸ ಸ್ಥಾನವನ್ನು ರಕ್ಷಿಸುವ ಮತ್ತು ಅವುಗಳ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಜೇನು ಸಾಕಣೆಯ ದೀರ್ಘಾವಧಿ ಅಭಿವೃದ್ಧಿಯನ್ನು ಬೆಂಬಲಿಸುವ ಕ್ರಮಗಳನ್ನು ಉತ್ತೇಜಿಸಲು ವಿಶ್ವಾದ್ಯಂತೆ ಇದನ್ನು ಆಚರಿಸಲಾಗುತ್ತಿದೆ.

 ವಿಶ್ವ ಜೇನು ಹುಳುಗಳ ದಿನ 2022ರ ಥೀಮ್‌:

ವಿಶ್ವ ಜೇನು ಹುಳುಗಳ ದಿನ 2022ರ ಥೀಮ್‌:

'ಬೀ ಎಂಗೇಜ್ಡ್: ಜೇನು ನೊಣಗಳ ವೈವಿಧ್ಯತೆ ಮತ್ತು ಜೇನು ಸಾಕಣೆ ವ್ಯವಸ್ಥೆಯ ಸಂಭ್ರಮ' ಇದು ವಿಶ್ವ ಜೇನು ಹುಳುಗಳ ದಿನ 2022ರ ಥೀಮ್‌ ಆಗಿದೆ.

 ವಿಶ್ವ ಜೇನು ನೊಣಗಳ ದಿನದ ಇತಿಹಾಸ:

ವಿಶ್ವ ಜೇನು ನೊಣಗಳ ದಿನದ ಇತಿಹಾಸ:

ಜೇನು ಸಾಕಣೆಯ ಪ್ರವರ್ತಕ ಆಂಟನ್ ಜನ್ಸಾ ಅವರ ಜನ್ಮದಿನದ ನೆನಪಿಗಾಗಿ ವಿಶ್ವಸಂಸ್ಥೆಯು ಮೇ 20ರಂದು 'ವಿಶ್ವ ಜೇನು ನೊಣ ದಿನ'ವನ್ನಾಗಿ ಆಚರಿಸಲು ನಿರ್ಧರಿಸಿದೆ. 2016ರಲ್ಲಿ ಅಪಿಮೊಂಡಿಯಾ ಬೆಂಬಲದೊಂದಿಗೆ ಮೇ 20 ಅನ್ನು ವಿಶ್ವ ಜೇನು ನೊಣಗಳ ದಿನವನ್ನಾಗಿ ಆಚರಿಸಲು ಪ್ರಸ್ತಾಪಿಸಿತು. ಸ್ಲೊವೇನಿಯಾದ ಈ ಪ್ರಸ್ತಾವವನ್ನು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು 2017ರಲ್ಲಿ ಅನುಮೋದಿಸಿತು. ಈ ನಿರ್ಣಯವು ಜೇನು ನೊಣಗಳ ಸಂರಕ್ಷಣೆಯ ಮಹತ್ವ ಮತ್ತು ಅದರ ಪ್ರಾಮುಖ್ಯತೆಯನ್ನು ಒತ್ತಿಹೇಳಿತು. 2018ರಲ್ಲಿ ಮೊದಲ ಬಾರಿಗೆ 'ವಿಶ್ವ ಜೇನು ನೊಣ ದಿನ'ವನ್ನು ಆಚರಿಸಲಾಯಿತು.

 ವಿಶ್ವ ಜೇನು ಹುಳಗಳ ದಿನದ ಪ್ರಾಮುಖ್ಯತೆ:

ವಿಶ್ವ ಜೇನು ಹುಳಗಳ ದಿನದ ಪ್ರಾಮುಖ್ಯತೆ:

ಮನುಷ್ಯರು, ಸಸ್ಯಗಳು, ಪ್ರಾಣಿಗಳು ಮತ್ತು ಪರಿಸರದ ನಡುವೆ ಸಮತೋಲನವನ್ನು ಕಾಪಾಡುವಲ್ಲಿ ಜೇನು ನೊಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಜೇನು ನೊಣಗಳು ಇಲ್ಲದಿದ್ದರೆ ವಿಶ್ವದಲ್ಲಿ ಆಹಾರಕ್ಕೆ ಕೊರತೆ ಉಂಟಾಗುತ್ತದೆ. ಜನಸಂಖ್ಯೆಯ ಬಹಪಾಲು ಭಾಗವು ಹಸಿವಿನಿಂದ ಕೃಶವಾಗುತ್ತದೆ. ಜೇನು ನೊಣಗಳು ಪರಾಗಸ್ಪರ್ಶ ಮಾಡುವ ಮೂಲಕ ಪ್ರಪಂಚದಾದ್ಯಂತ ಕೃಷಿ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಜೇನು ನೊಣಗಳ ದಿನವನ್ನು ಆಚರಿಸಲಾಗುತ್ತದೆ.

English summary
To raise public awareness about the importance of bees in maintaining biodiversity May 20th is celebrated as World Bee Day,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X