ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ಮಿಕರ ಇಪಿಎಫ್ ಪಾವತಿ: ಇಸಿಆರ್ ಸಲ್ಲಿಸಲು ಸೂಚನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 27: ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟುವ ಹೋರಾಟದ ಭಾಗವಾಗಿ ಬಡವರಿಗೆ ಸಹಾಯ ಮಾಡಲು ಭಾರತ ಸರ್ಕಾರ ಮಾರ್ಚ್ 26 ರಂದು ಪ್ರಧಾನ್‍ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ ರೂ. 1.70 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದೆ.

ಈ ಪ್ಯಾಕೇಜಿನ ಭಾಗವಾಗಿ, ಗರಿಷ್ಠ ಒಂದು ನೂರು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿರುವ ಉದ್ಯೋಗಿಗಳು, ಮುಂದಿನ ಮೂರು ತಿಂಗಳು, ಪ್ರತಿ ತಿಂಗಳಿಗೆ ಹದಿನೈದು ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ಮಾಸಿಕ ವೇತನದ ಶೇ.24ರಷ್ಟು ಸಂಬಂಧಿಸಿದ ಉದ್ಯೋಗಿಗಳ ಇಪಿಎಫ್ ಖಾತೆಗಳಿಗೆ ನೇರವಾಗಿ ಪಾವತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರೂ.15,000 ಕ್ಕಿಂತ ಕಡಿಮೆ ಮಾಸಿಕ ವೇತನ ಗಳಿಸುವರು ಇರುವಂತಹ ಸಂಸ್ಥೆಯ ಉದ್ಯೋಗಿಗಳಿಗೆ ಈ ಲಾಭ ದೊರೆಯುವದು.

ಪತ್ರಕರ್ತರ ಉದ್ಯೋಗ, ಸಂಬಳ ಕಡಿತದ ಬಗ್ಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್ಪತ್ರಕರ್ತರ ಉದ್ಯೋಗ, ಸಂಬಳ ಕಡಿತದ ಬಗ್ಗೆ ಕೇಂದ್ರ ಸರ್ಕಾರಕ್ಕೆ ನೋಟಿಸ್

ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಆಯಾ ಜಿಲ್ಲೆಗಳ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು. ಉದ್ಯೋಗಿ ಕಂಪೆನಿಗಳಿಗೆ ಈಗಾಗಲೇ ಇ-ಮೇಲ್ ಮತ್ತು ಎಸ್‍ಎಂಎಸ್ ಮೂಲಕ ಇಸಿಆರ್ ಗಳನ್ನು ಸಲ್ಲಿಸಲು ವಿನಂತಿಸಲಾಗಿದೆ.

Workers EPF Payment: Notice to Submit ECR

ಈ ಸಂಕಷ್ಟದ ಸಮಯದಲ್ಲಿ ಸಂಸ್ಥೆಯವರು ಇಸಿಆರ್ (Electronic Challan cum Return) ಸಲ್ಲಿಸುವುದರಿಂದ ಅವರ ಉದ್ಯೋಗಿಗಳ ಇಪಿಎಫ್ ಖಾತೆಗೆ ವೇತನದಿಂದ ಯಾವುದೇ ಕಡಿತವಿಲ್ಲದೆ ಹಣ ಜಮೆಯಾಗುವುದರಿಂದ ಅವರ ಮನೋಸ್ಥೈರ್ಯವನ್ನೂ ಹೆಚ್ಚಿಸುತ್ತದೆ ಮತ್ತು ಸಂಸ್ಥೆಗೂ ಹೊರೆ ಕಡಿಮೆಯಾಗುತ್ತದೆ ಎಂದು ಭವಿಷ್ಯನಿಧಿ ಆಯುಕ್ತರು ತಿಳಿಸಿದ್ದಾರೆ.

English summary
Workers EPF Payment: Notice to Submit ECR. lockdown time many workers suffring from sallary issue. this is benifits of PMGKY.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X