• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂತಾರಾಷ್ಟ್ರೀಯ ಮಹಿಳಾ ದಿನ; ಸವಾಲುಗಳೇ ಮಹಿಳೆಯ ಸಾಧನೆಯ ಮೆಟ್ಟಿಲು: ಡಾ.ಹೇಮಾ

By ಡಾ.ಹೇಮಾ ದಿವಾಕರ್
|

ಅಂತಾರಾಷ್ಟ್ರೀಯ ಮಹಿಳಾ ದಿನದ ಈ ಸಂದರ್ಭದಲ್ಲಿ ಮಹಿಳೆಯರ ಬಗ್ಗೆ ನಾವು ಗಂಭೀರವಾಗಿ ಯೋಚನೆ ಮಾಡುವುದು ಸೂಕ್ತವೆನಿಸುತ್ತದೆ. ಮನೆಗಷ್ಟೇ ಸೀಮಿತ ವಾಗಿದ್ದ ಹೆಣ್ಣು ಮಗಳು ಈಗ ಕಾಲಿಡದ ಕ್ಷೇತ್ರವೇ ಇಲ್ಲ. ಗಂಡಿನಂತೆ ಸರಿಸಮಾನವಾಗಿ ಕೆಲಸ ನಿರ್ವಹಿಸಬಲ್ಲೇ ಅನ್ನೋದನ್ನು ಇಂದು ಸಾಧಿಸಿ ತೋರಿಸಿದ್ದಾಳೆ.

ಇಷ್ಟೆಲ್ಲ ಸಾಧನೆ ಮಾಡಿರುವ ಮಹಿಳೆಗೆ ಸಾಮಾಜಿಕ ನ್ಯಾಯ ಸಿಕ್ಕಿದೆಯೇ? ಹಾಗಿದ್ದರೆ ಮಹಿಳೆ ಸಮಾಜಕ್ಕಾಗಿ ನೀಡಿದ ಕೊಡುಗೆ ಏನು? ಆಕೆಗೆ ಸಿಕ್ಕಿರುವ ಅವಕಾಶ ಎಷ್ಟು? ಇದೆಲ್ಲದರ ಬಗ್ಗೆ ಅಂತಾರಾಷ್ಟ್ರೀಯ ಮಹಿಳಾ ದಿನದಂದು ನಾವು ಚರ್ಚಿಸಬೇಕಿರುವ ಅನಿವಾರ್ಯತೆ ಇದೆ.

ಮಹಿಳಾ ದಿನದ ವಿಶೇಷ: ಸಮುದ್ರದಲ್ಲಿ ಕಯಾಕಿಂಗ್ ಸಾಹಸ ಮೆರೆದ ವಿದ್ಯಾರ್ಥಿನಿಯರು

ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲೂ ಮುಂದಿದ್ದಾಳೆ, ಫೈಲಟ್ ಆಗಿದ್ದಾಳೆ, ಯುದ್ಧ ವಿಮಾನ ಓಡಿಸುತ್ತಾಳೆ, ಗಗನದೆತ್ತರಕ್ಕೆ ಹಾರುತ್ತಾಳೆ. ವೈದ್ಯೆಯಾಗಿ ನೊಂದವರ ನೋವಿಗೆ ಸ್ಪಂದಿಸುತ್ತಾಳೆ. ಬಾಹ್ಯಕಾಶ ನೆಲಕ್ಕೂ ಕಾಲಿಟ್ಟಿದ್ದಾಳೆ. ಒಟ್ಟಾರೆ ಹೇಳುವುದಾದರೆ ಆಕೆ ಇಂದು ಸಾಧನೆ ಮಾಡದ ಕ್ಷೇತ್ರವೇ ಇಲ್ಲ ಎನ್ನಬಹುದು.

ಜಾಗತಿಕವಾಗಿ, 130 ಮಿಲಿಯನ್ ಹುಡುಗಿಯರು ಶಾಲೆಯಲ್ಲಿಲ್ಲ, ತುಂಬಾ ಹೆಣ್ಣು ಮಕ್ಕಳು ಶಾಲೆಯಲ್ಲಿರಲು ಮತ್ತು ಶಿಕ್ಷಣವನ್ನು ಪಡೆಯಲು ಹೆಣಗಾಡುತ್ತಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಡತನ, ಬಾಲ್ಯವಿವಾಹ, ಶಾಲೆಯಲ್ಲಿ ಹಿಂಸಾಚಾರ, ಶಾಲೆಗೆ ಹೋಗಲು ಬಲು ದೂರ ಹಾಗೂ ಶೌಚಾಲಯಗಳ ಕೊರತೆ ಹೆಣ್ಣು ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆಯುವುದನ್ನು ತಡೆಯುವಂತೆ ಮಾಡುತ್ತಿವೆ. ಹೆಣ್ಣು ಸಮಾಜದ ಕಣ್ಣು, ಆಕೆಯ ಆರೋಗ್ಯ, ಸವಾಲು ಹಾಗೂ ಸಾಮಾಜಿಕ ನ್ಯಾಯದ ಕಡೆಗೆ ಗಮನ ಹರಿಸುವುದು ಎಲ್ಲರ ಜವಾಬ್ದಾರಿಯಾಗಿದೆ.

ಸಮಾಜದಲ್ಲಿ ಮಹಿಳೆಯರು ಇತರ ಲಿಂಗಗಳಂತೆ ಸಂತೋಷದಿಂದ ಬದುಕಬೇಕು. ಮುಂದಿನ ದಿನಗಳನ್ನು ಆಕೆ ಉತ್ಸಾಹದಿಂದ ಬರಮಾಡಿಕೊಳ್ಳಬೇಕು. ಈ ಕನಸನ್ನು ನನಸಾಗಿಸಲು ಕೆಲಸ ಮಾಡೋಣ.

ಮಹಿಳಾ ದಿನದ ವಿಶೇಷ: ನೋವು ನುಂಗಿ ನಗುವ ಚೆಲ್ಲುವ ಆಕೆಗೊಂದು ನಮನ..

ಹೆಣ್ಣು ಮಕ್ಕಳು ಮತ್ತು ಯುವತಿಯರೊಂದಿಗೆ ಬೆನ್ನೆಲುಬಾಗಿ ನಿಂತು ಅವರಲ್ಲಿ ನಾಯಕತ್ವ ಬೆಳೆಸಲು ಉತ್ತೇಜಿಸುವುದು ನಮ್ಮೆಲ್ಲರ ಹೊಣೆ. ಅವರ ಕಲಿಕೆಗೆ, ಜೀವನದಲ್ಲಿ ಮುಂದೆ ಬರುವುದಕ್ಕೆ, ಅವರ ನಿರ್ಧಾರಕ್ಕೆ ಮತ್ತು ಆಕೆಯ ಸಂಪೂರ್ಣ ಬೆಳವಣಿಗೆಗೆ ಸಹಾಯ ಮಾಡಲು ಪುರುಷರು ಮತ್ತು ಯುವಕರು ಸೇರಿದಂತೆ ಎಲ್ಲಾ ಸಮುದಾಯದ ಸದಸ್ಯರು ಮತ್ತು ನಾಯಕರೊಂದಿಗೆ ಕೆಲಸ ಮಾಡಬೇಕಾಗಿದೆ. ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಸಾಧಿಸಲು ಮಹಿಳೆಯರ ಸಬಲೀಕರಣ ಮಾಡುವುದು ಅತ್ಯಗತ್ಯ.

ಹೆಣ್ಣು ಇಂದು ಗಂಡ, ಮನೆ, ಮಕ್ಕಳು ಅಂತ ಸೀಮಿತವಾಗಿಲ್ಲ. ಇದೆಲ್ಲವನ್ನು ನಿಭಾಯಿಸುವುದರ ಜತೆಗೆ ಕೆಲಸಕ್ಕೂ ಹೋಗಿ ಸ್ವಾಭಿಮಾನದ ಜೀವನವನ್ನು ನಡೆಸುತ್ತಿದ್ದಾಳೆ. ಸಂಸಾರ ರಥವನ್ನೆಳೆಯಲು ಪತಿಗೆ ಸಾಥ್ ನೀಡುತ್ತಾಳೆ. ಬಿಡುವಿಲ್ಲದ ಸಮಯದಲ್ಲೂ ಆಕೆ ಹೆಚ್ಚು ಕ್ರೀಯಾಶೀಲವಾಗಿರುತ್ತಾಳೆ. ಒತ್ತಡವನ್ನು ನಿಭಾಯಿಸುವ ಶಕ್ತಿಯನ್ನು ಮೈಗೂಡಿಸಿಕೊಂಡಿದ್ದಾಳೆ. ಎಂತಹ ಸಾಧನೆಗೂ ನಾನು ಸಿದ್ಧ ಅನ್ನುವ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದಾಳೆ.

ಕೊರೊನಾ ಸಂದರ್ಭದಲ್ಲಿ ಮಹಿಳೆಯರು ಸ್ವಾಸ್ಥ್ಯ ಸಮಾಜಕ್ಕೋಸ್ಕರ ಮಾಡಿದ ಕೆಲಸಕ್ಕೆ ಬೆಲೆ ಕಟ್ಟಲಾಗದು. ಸಾವಿರಾರು ಮಹಿಳೆಯರು ವೈದ್ಯರಾಗಿ, ನರ್ಸ್ ಗಳಾಗಿ, ಪೊಲೀಸ್ ಆಗಿ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಸರ್ಕಾರೇತರ ಸಂಘ ಸಂಸ್ಥೆಯಲ್ಲಿರುವ ಮಹಿಳೆಯರು ಬೀದಿ ಬದಿಯ ಜನರಿಗೆ ಆಹಾರದ ಪೊಟ್ಟಣಗಳನ್ನು ಹಿಡಿದುಕೊಂಡು ಹಂಚಿದ್ದಾರೆ. ವೀರ ಹೋರಾಟದಲ್ಲಿ ಹಲವಾರು ಮಂದಿ ಕೊರೊನಾ ತೆಕ್ಕೆಗೆ ಸಿಲುಕಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕೊರೊನಾಕ್ಕೂ ಅಂಜದೇ ಆಕೆ ಮಾಡಿರುವ ಕೆಲಸಕ್ಕೆ ಇಡೀ ನಾಗರೀಕ ಸಮಾಜವೇ ಸೆಲ್ಯೂಟ್ ಹೊಡೆದಿದೆ.

   Karnataka Budget 2021 : ಯಡಿಯೂರಪ್ಪ ಅವರ 2021 ಬಜೆಟ್ ! | Oneindia Kannada

   ಮಹಿಳೆ ಇಷ್ಟೆಲ್ಲಾ ಸಾಧನೆ ಮಾಡಿದ್ರೂ ಕೂಡ, ಬೇರೆ ಬೇರೆ ರೀತಿಯ ಸವಾಲುಗಳು ಮಹಿಳೆಯರಿಗೆ ಎದುರಾಗುತ್ತಿವೆ. ಮಾನಸಿಕ ಒತ್ತಡ, ಆರೋಗ್ಯದ ಸಮಸ್ಯೆ, ಸಂಸಾರವನ್ನು ನಿಭಾಯಿಸಬೇಕಿರುವ ಒತ್ತಡ, ಲೈಂಗಿಕ ಕಿರುಕುಳ, ಲಿಂಗ ಅಸಮಾನತೆ, ಶಿಕ್ಷಣದ ಕೊರತೆ ಈ ಎಲ್ಲಾ ಸವಾಲುಗಳ ಮುಳ್ಳಿನಿಂದ ಹೊರಬರಲು ಮಹಿಳೆ ಒದ್ದಾಡುತ್ತಿದ್ದಾಳೆ. ಪ್ರಪಂಚದಾದ್ಯಂತ ಲಕ್ಷಾಂತರ ಹೆಣ್ಣು ಮಕ್ಕಳು ಈ ಸಂಕಷ್ಟದಿಂದ ಪಾರಾಗಲು ಹರಸಾಹಸ ಪಡುತ್ತಿದ್ದಾರೆ. ಇದು ಅವರ ಸಾಧನೆಗೂ ಅಡ್ಡಿಯಾಗುತ್ತಿದೆ.

   English summary
   On this occasion of International Women's Day, it is appropriate for us to think seriously about women says Dr Hema of Diwakar's hospital, Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X