ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಟಿಕ್ ಟಾಕ್' ಆ್ಯಪ್‌ ನಿಷೇಧಿಸುವಂತೆ ಕರ್ನಾಟಕ ಮಹಿಳಾ ಆಯೋಗ ಮನವಿ

|
Google Oneindia Kannada News

ಬೆಂಗಳೂರು, ಏ.9: 'ಟಿಕ್ ಟಾಕ್' ಆ್ಯಪ್‌ ನಿಷೇಧಿಸುವಂತೆ ಕೋರಿ ಕರ್ನಾಟಕ ಮಹಿಳಾ ಆಯೋಗ ಕರ್ನಾಟಕ ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ.

ಈಗಾಗಲೇ ಅಶ್ಲೀಲ ಚಿತ್ರ ಹಾಗೂ ವಿಡಿಯೊಗಳನ್ನು ಒಳಗೊಂಡ ಆರೋಪದ ಹಿನ್ನೆಲೆಯಲ್ಲಿ 'ಟಿಕ್‌ ಟಾಕ್‌' ಆ್ಯಪ್‌ ಡೌನ್‌ಲೋಡ್‌ಗೆ ನಿರ್ಬಂಧ ಹೇರಿ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ತಡೆ ನೀಡುವಂತೆ ಸಲ್ಲಿಸಿದ್ದ ಮನವಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಟಿಕ್‌ಟೊಕ್ ಆಪ್ ನಿಷೇಧಿಸಿ: ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆಟಿಕ್‌ಟೊಕ್ ಆಪ್ ನಿಷೇಧಿಸಿ: ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

ಈ ಸಂಬಂಧ ಹೈಕೋರ್ಟ್‌ಗೆ ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ಇದು ಚೀನಾ ತಯಾರಿಸಿದ ಅಪ್ಲಿಕೇಷನ್ ಆಗಿದೆ. ಈಗಾಗಲೇ 54 ಮಿಲಿಯನ್ ಆಕ್ಟೀವ್ ಬಳಕೆದಾರರಿದ್ದಾರೆ. ಮುಂದಿನ ದಿನಗಳಲ್ಲಿ ನಿಗದಿತ ಸಮಯದಲ್ಲೇ ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ಹೇಳಿದೆ.

Womens commission seeks legal recourse to ban TikTok

ಅಶ್ಲೀಲತೆಗೆ ಪ್ರಚೋದನೆ ನೀಡುವ ಹಿನ್ನೆಲೆಯಲ್ಲಿ 'ಟಿಕ್‌ ಟಾಕ್‌' ಆ್ಯಪ್‌ ನಿಷೇಧಿಸಬೇಕೆಂದು ಕೋರಿ ಮದ್ರಾಸ್‌ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಲಾಗಿತ್ತು. ವಿಚಾರಣೆ ಬಳಿಕ ಆ್ಯಪ್‌ ಡೌನ್‌ಲೋಡ್‌ ಮೇಲೆ ನ್ಯಾಯಾಲಯ ಏ.3ರಂದು ನಿರ್ಬಂಧ ಹೇರಿತ್ತು. ಅಲ್ಲದೆ, ಈ ವಿವಾದಿತ ಆ್ಯಪ್‌ ನಿಷೇಧಿಸಿ ಆದೇಶ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೂ ಮದ್ರಾಸ್‌ ಹೈಕೋರ್ಟ್‌ ಸೂಚನೆ ನೀಡಿತ್ತು.

ತಮಿಳುನಾಡಿನಲ್ಲಿ ಟಿಕ್‌ಟಾಕ್ ಮೊಬೈಲ್ ಆ್ಯಪ್ ನಿಷೇಧ, ಕಾರಣಗಳೇನು?ತಮಿಳುನಾಡಿನಲ್ಲಿ ಟಿಕ್‌ಟಾಕ್ ಮೊಬೈಲ್ ಆ್ಯಪ್ ನಿಷೇಧ, ಕಾರಣಗಳೇನು?

ಈ ಅಪ್ಲಿಕೇಷನ್‌ ಇಂದ ಯಾವುದೇ ಲಾಭ ಇಲ್ಲ, ಈಗಾಗಲೇ ಸರ್ಕಾರು ಅಶ್ಲೀಲ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದ ವೆಬ್‌ಸೈಟ್‌ಗಳನ್ನು ಬಂದ್ ಮಾಡಲಾಗಿದೆ. ನಾವು ಬಳಕೆದಾರರಿಂದ ಮಿಸ್‌ಯೂಸ್ ಆಗದಂತೆ ತಡೆಯುತ್ತಿದ್ದೇವೆ. ನಮ್ಮ ಕೆಲವು ನಿಯಮಗಳನ್ನು ಉಲ್ಲಂಘನೆ ಮಾಡಿ ವಿಡಿಯೋ ಮಾಡಿದರೆ ಅದನ್ನು ಡಿಲೀಟ್ ಮಾಡಲಾಗುತ್ತದೆ ಎಂದು ಟಿಕ್ ಟಾಕ್ ಸಂಸ್ಥೆ ಹೇಳಿದೆ.

English summary
The Karnataka State Commission for Women (KSCW) is expected to file a petition before the Karnataka high court seeking a ban on TikTok .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X