ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; 63 ದಿನ ಚಿಕಿತ್ಸೆ ಪಡೆದ ಕೋವಿಡ್ ಸೋಂಕಿತ ಮಹಿಳೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 26: ಕೋವಿಡ್ ಸೋಂಕು ತಗುಲಿದ್ದ ವೃದ್ಧೆಯೊಬ್ಬರು 63 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ದಿನಗಳ ಕಾಲ ಚಿಕಿತ್ಸೆ ಪಡೆದ ರೋಗಿ ಇವರಾಗಿದ್ದಾರೆ.

ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿಯಾದ 69 ವರ್ಷದ ಮಹಿಳೆ ನಗರ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ 63 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದಾರೆ. ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು.

ಕಂಟೈನರ್‌ನಲ್ಲಿ ಕೋವಿಡ್ ಐಸಿಯು, ಬೆಂಗಳೂರಿನಲ್ಲಿ ಮೊದಲ ಪ್ರಯೋಗಕಂಟೈನರ್‌ನಲ್ಲಿ ಕೋವಿಡ್ ಐಸಿಯು, ಬೆಂಗಳೂರಿನಲ್ಲಿ ಮೊದಲ ಪ್ರಯೋಗ

ಆಗಸ್ಟ್ 19ರಂದು ಮಹಿಳೆಗೆ ಮೊದಲು ಜ್ವರ ಕಾಣಿಸಿಕೊಂಡಿತ್ತು. ಕುಟುಂಬ ಸದಸ್ಯರು ಮೆಡಿಕಲ್‌ನಿಂದ ಮಾತ್ರೆ ತಂದು ಕೊಟ್ಟಿದ್ದರು. ಜ್ವರ ಕಡಿಮೆಯಾದರೂ ಎದೆ, ಹೊಟ್ಟೆ ನೋವು ಕಾಣಸಿಕೊಂಡಿತ್ತು.

 ಬೆಡ್, ಐಸಿಯು ಇಲ್ಲ ಎಂದು ಚಿಕಿತ್ಸೆ ಕೊಡದ ಆಸ್ಪತ್ರೆ ಲೈಸನ್ಸ್ ರದ್ದು! ಬೆಡ್, ಐಸಿಯು ಇಲ್ಲ ಎಂದು ಚಿಕಿತ್ಸೆ ಕೊಡದ ಆಸ್ಪತ್ರೆ ಲೈಸನ್ಸ್ ರದ್ದು!

Women With COVID Symptoms Spent 63 Days In Hospital

ಅಕ್ಟೋಬರ್ 22ರಂದು ಉಸಿರಾಟಕ್ಕೆ ತೀವ್ರ ತೊಂದರೆ ಉಂಟಾಗಿ ಪ್ರಜ್ಞೆ ಕಳೆದುಕೊಂಡರು. ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವಾಗಲೂ ಪ್ರಜ್ಞೆ ಇರಲಿಲ್ಲ. ಅಂದಿನಿಂದಲೂ ಐಸಿಯುನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು.

ಪ್ಲಾಸ್ಮಾ ಚಿಕಿತ್ಸೆ ವಿಫಲ: ಕೋವಿಡ್ ಮಾರ್ಗಸೂಚಿಯಿಂದ ಕೈಬಿಡಲು ನಿರ್ಧಾರಪ್ಲಾಸ್ಮಾ ಚಿಕಿತ್ಸೆ ವಿಫಲ: ಕೋವಿಡ್ ಮಾರ್ಗಸೂಚಿಯಿಂದ ಕೈಬಿಡಲು ನಿರ್ಧಾರ

ಮಹಿಳೆ ಈಗ ಸುಧಾರಿಸಿಕೊಳ್ಳುತ್ತಿದ್ದು ಕೃತಕ ಆಮ್ಲಜನಕದ ಪೂರೈಕೆ ಇಲ್ಲದೇ ಉಸಿರಾಟ ನಡೆಸುತ್ತಿದ್ದಾರೆ. ಮಹಿಳೆಗೆ ನಡೆಸಿದ ಆರ್‌ಟಿಪಿಸಿಆರ್ ಪರೀಕ್ಷೆಯ ವರದಿ ಸಹ ನೆಗೆಟಿವ್ ಬಂದಿದೆ. ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದೆ.

ಜಯದೇವ ಆಸ್ಪತ್ರೆಯ ಡಾ. ಸಿ. ಎನ್. ಮಂಜುನಾಥ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಕೆಲವು ವ್ಯಕ್ತಿಗಳ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲೂ ನೆಗೆಟಿವ್ ವರದಿ ಬರುತ್ತದೆ. ಅವರನ್ನು ನಾವು ಹೆಚ್‌ಆರ್‌ಸಿಟಿ ಪಾಸಿಟಿವ್ ಎಂದು ಕರೆಯುತ್ತೇವೆ" ಎಂದು ಹೇಳಿದ್ದಾರೆ.

"ಇಂತಹ ಪ್ರಕರಣದಲ್ಲಿ ಪರೀಕ್ಷೆಗೆ ಸ್ವ್ಯಾಬ್ ಸಂಗ್ರಹ ಮಾಡುವ ಗಂಟಲಿನಲ್ಲಿ ವೈರಸ್ ಇರುವುದಿಲ್ಲ. ಆದ್ದರಿಂದ, ಪರೀಕ್ಷೆ ವರದಿ ನಗೆಟಿವ್ ಬಂದರೂ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು" ಎಂದು ತಿಳಿಸಿದ್ದಾರೆ.

English summary
Bengaluru based 69-year-old woman with symptoms of Covid-19 has spent 63 days in an ICU. This the longest hospitalisation case in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X