ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರ ವಿರುದ್ಧ ದೌರ್ಜನ್ಯ ತಡೆ ಮೊದಲ ಆದ್ಯತೆ: ಗೃಹ ಸಚಿವ ಬೊಮ್ಮಾಯಿ

|
Google Oneindia Kannada News

ಮಹಿಳೆಯರ ವಿರುದ್ಧ ದೌರ್ಜನ್ಯ ತಡೆ ಮೊದಲ ಆದ್ಯತೆ: ಗೃಹ ಸಚಿವ ಬೊಮ್ಮಾಯಿ
ಬೆಂಗಳೂರು, ಡಿಸೆಂಬರ್ 07: ಮಹಿಳೆಯರ ಮೇಲಿನ ದೌರ್ಜನ್ಯ, ದಾಳಿ, ಅತ್ಯಾಚಾರ, ಲೈಂಗಿಕ ಹಿಂಸೆಗಳಂತಹಾ ಕೃತ್ಯಗಳನ್ನು ತಡೆಯುವುದು ಮೊದಲ ಆದ್ಯತೆಯಾಗಿದ್ದು, ಈ ಬಗ್ಗೆ ಹಲವು ಪರಿಣಾಮಕಾರಿ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಂಡಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಬೊಮ್ಮಾಯಿ, ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯದ 1761 ಕೇಸ್ ದಾಖಲಾಗಿದೆ ಇವುಗಳಲ್ಲಿ 1264 ಚಾರ್ಜ್ ಶೀಟ್ ಆಗಿದೆ, ಫೊಸ್ಕೊ ಕಾಯಿದೆ ಅಡಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಗಳನ್ನು ದಾಖಲು ಮಾಡುತ್ತಿದ್ದೇವೆ, 2015 ರಿಂದ ಈಚೆಗೆ 5764 ಪ್ರಕರಣಗಳು ದಾಖಲಾಗಿದ್ದು, 4945 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದೇವೆ 553 ಕೇಸ್ ಗಳು , 329 ಎಫ್ ಎಸ್ ಎಲ್ ಲ್ಯಾಬ್ ನಿಂದ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.

ಹೆಣ್ಣು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಮತ್ತು ಆತ್ಮರಕ್ಷಣೆ ಮಾಡಿಕೊಳ್ಳುವ ಸ್ಥೈರ್ಯ ಮತ್ತು ಕೌಶಲ್ಯ ಕಲಿಸುವ ಕೆಲಸಕ್ಕೆ ಮುಂದಾಗುತ್ತಿದ್ದೇವೆ, ರಾಜ್ಯದಲ್ಲಿ ಆತ್ಮರಕ್ಷಣೆಗೆ ತರಬೇತಿ ನೀಡುವ 22 ಕೇಂದ್ರಗಳಿವೆ, ರಾಜ್ಯದಲ್ಲಿ ಮೊದಲ ಬಾರಿಗೆ ಈ ತರಬೇತಿ ಕೇಂದ್ರದಲ್ಲಿ ಸಾರ್ವಜನಿಕರಿಗೆ ತರಬೇತಿ ನೀಡಲು ಮುಂದಾಗುತ್ತಿದ್ದೇವೆ ಎಂದು ಬೊಮ್ಮಾಯಿ ಭರವಸೆ ನೀಡಿದರು.

ರಾತ್ರಿ ಗಸ್ತು ತಿರುಗುವ ಸ್ವಯಂ ಸೇವಕರ ದಳ ಸ್ಥಾಪಿಸಲು ನಿರ್ಣಯ. ಇದರಲ್ಲಿ ಮಹಿಳೆಯರಿಗೂ ಅವಕಾಶ ಕಲ್ಪಿಸಲು ತೀರ್ಮಾನ, 30 ಲಕ್ಷ ಮಂದಿ ಸ್ವಯಂ ಸೇವಕರಾಗಿ ಪೊಲೀಸರ ಜತೆ ಕೆಲಸ ಮಾಡಲು ಮುಂದೆ ಬಂದಿದ್ದಾರೆ, ಇವರಿಗೆ ಎರಡು ದಿನ ತರಬೇತಿ ನೀಡಿ ಆಯಾ ಜಿಲ್ಲೆಗಳಲ್ಲಿ ಸ್ವಯಂ ಸೇವಕರನ್ನು ಇಲಾಖೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ಸುರಕ್ಷಾ ಆಪ್ ರಾಜ್ಯಕ್ಕೆ ವಿಸ್ತಾರ

ಸುರಕ್ಷಾ ಆಪ್ ರಾಜ್ಯಕ್ಕೆ ವಿಸ್ತಾರ

ಸುರಕ್ಷಾ ಅ್ಯಪ್ ಅನ್ನು ರಾಜ್ಯಕ್ಕೆ ವಿಸ್ತರಿಸುತ್ತೇವೆ, ತಂತ್ರಜ್ಞಾನವನ್ನು ಆದುನೀಕರಿಸುತ್ತೇವೆ, ಸುರಕ್ಷಾ ಅ್ಯಾಪ್ ದೂರುಗಳಿಗೆ 9 ನಿಮಿಷ ಬದಲು 7 ಗಳಲ್ಲಿ ಪೊಲೀಸರು ತಲುಪುವಂತೆ ಕ್ರಮ ಕೈಗೊಳ್ಳುತ್ತಿದ್ದೇವೆ, ಬೆಂಗಳೂರಲ್ಲಿ ಗಸ್ತು ವಾಹ‌ನಗಳನ್ನ 197 ರಿಂದ 500 ಕ್ಕೆ ಹೆಚ್ಚಿಸಲು ಪಸ್ತಾವನೆ ಕಳುಹಿಸಿದ್ದೇವೆ, ರಾತ್ರಿ ಪಾಳಿಯಲ್ಲಿ ಹಿರಿಯ ಅಧಿಕಾರಿಗಳು ಹೋಗಲು ಸೂಚಿಸಲಾಗಿದೆ, ಜಿಲ್ಲೆಗೊಂದು ಪೋಸ್ಕೊ ಕೋರ್ಟ್ ಇವೆ ಇವನ್ನು ಹೆಚ್ಚಿಸಲು ಮನವಿ ಮಾಡಿದ್ದೇವೆ, 31 ಫಾಸ್ಟ್ ಟ್ರಾಕ್ ಕೋರ್ಟ್ ಗಳ ಆರಂಭಕ್ಕೆ ಯತ್ನ ಮಾಡುತ್ತಿದ್ದೇವೆಂದರು.

ರಾತ್ರಿ ಗಸ್ತು ಹೆಚ್ಚು ಮಾಡಲು ಸೂಚನೆ

ರಾತ್ರಿ ಗಸ್ತು ಹೆಚ್ಚು ಮಾಡಲು ಸೂಚನೆ

ರಾತ್ರಿ ಗಸ್ತು ಹೆಚ್ಚು ಮಾಡಲು ಸೂಚನೆ ನೀಡಿದ್ದೇನೆ, ಡಾರ್ಕ್ ಏರಿಯಾಗಳನ್ನು ಗುರುತಿಸಿ ಆ ಏರಿಯಾಗಳಲ್ಲಿ ಹೆಚ್ಚಿನ ಗಸ್ತು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮಾದಕ ದ್ರವ್ಯ ಕುರಿತು ಅರಿವು‌ ಮೂಡಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜತೆ ಕಾರ್ಯಕ್ರಮ ರೂಪಿಸುತ್ತೇವೆ ಎಂದರು.

66 ಬಾಂಗ್ಲಾ ಪ್ರಜೆಗಳನ್ನು ಹೊರಹಾಕಿದ್ದೇವೆ: ಬೊಮ್ಮಾಯಿ

66 ಬಾಂಗ್ಲಾ ಪ್ರಜೆಗಳನ್ನು ಹೊರಹಾಕಿದ್ದೇವೆ: ಬೊಮ್ಮಾಯಿ

ಅವಧಿ ಮುಗಿದ ವಿದೇಶಿಯರನ್ನ ಹೊರಗೆ ಹಾಕಿದ್ದೇವೆ, ಕೆಲವರನ್ನ ಹೊರಗೆ ಹಾಕಿದ್ದೇವೆ, ಇನ್ನೂ ಕೆಲವರನ್ನ ಹೊರಹಾಕೋಕೆ ಪ್ರಯತ್ನ ನಡೆಸಿದ್ದೇವೆ, 66 ಬಾಂಗ್ಲಾ ಪ್ರಜೆಗಳನ್ನ ಕಳಿಸಿಕೊಟ್ಟಿದ್ದೇವೆ, ನೈಜೀರಿಯನ್ ಪ್ರಜೆಗಳನ್ನ ಕಳಿಸುವ ಪ್ರಯತ್ನ ನಡೆದಿದೆ, ಅವಧಿ ಮುಗಿದ ಪ್ರಜೆಗಳನ್ನ ಕಳಿಸುತ್ತಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

ವಿದೇಶಗಳಿಂದ ಮಾದಕ ವಸ್ತು ಬರುತ್ತಿವೆ: ಬೊಮ್ಮಾಯಿ

ವಿದೇಶಗಳಿಂದ ಮಾದಕ ವಸ್ತು ಬರುತ್ತಿವೆ: ಬೊಮ್ಮಾಯಿ

ಮಾದಕ ವಸ್ತುಗಳಿದಿಂದಾಗಿಯೂ ಹೆಚ್ಚಿನ ಅಪರಾಧಗಳು ಆಗುತ್ತಿವೆ ಹಾಗಾಗಿ ಮಾದಕ ದ್ರವ್ಯ ನಿಯಂತ್ರಣಕ್ಕೆ ಒತ್ತು ನೀಡಿದ್ದೇವೆ, ಹೊರರಾಜ್ಯ, ವಿದೇಶಗಳಿಂದ ಮಾದಕ ವಸ್ತುಗಳು ಬೆಂಗಳೂರಿಗೆ ಬರುತ್ತಿದೆ, ಹೊಸ ಮಾದರಿಯಲ್ಲಿ ಡ್ರಾಗ್ಸ್ ಪೂರೈಕೆಯಾಗ್ತಿದೆ, ಇದನ್ನ ಮಟ್ಟ ಹಾಕೋಕೆ ಕಟ್ಟು ನಿಟ್ಟು ಸೂಚನೆ ನೀಡಿದ್ದೇನೆ ಎಂದರು.

ರೌಡಿ ಹಾವಳಿ ಕಡಿಮೆ ಮಾಡಲು ಕ್ರಮ

ರೌಡಿ ಹಾವಳಿ ಕಡಿಮೆ ಮಾಡಲು ಕ್ರಮ

ಬೆಂಗಳೂರಿನಲ್ಲಿ ಪುಡಿರೌಡಿಗಳ ಹಾವಳಿ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ಗಮನಹರಿಸಿದ್ದೇವೆ, 25 ರೊಳಗಿನ ಅಶಿಕ್ಷಿತರೇ ಕೃತ್ಯ ಎಸಗುತ್ತಿದ್ದಾರೆ, ಪೊಲೀಸರ ಮೇಲೂ ಅಟ್ಯಾಕ್ ಆಗುತ್ತಿವೆ, ಇದನ್ನ ಮಟ್ಟಹಾಕೋಕೆ ನಾವು ತಯಾರಿದ್ದೇವೆ, ಇವತ್ತಿನ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬೊಮ್ಮಾಹಿ ಹೇಳಿದರು.

English summary
Women safety is police's first priority said home minister Basavaraj Bommai. He said night patrol expanded and deployed more personals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X