ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿಯಲ್ಲಿ ಮಹಿಳಾ ಸುರಕ್ಷತಾ ಕ್ರಮಗಳ ಕುರಿತು ಸಮೀಕ್ಷೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 18: ಬಿಎಂಟಿಸಿ ಬಸ್ಸುಗಳಲ್ಲಿ ಮಹಿಳೆಯರ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಯಾಣಿಕರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ನಿರ್ಭಯಾ ನಿಧಿಯಡಿ ಹಣಕಾಸಿನ ನೆರವು ದೊರೆತ ನಂತರ ಬಿಎಂಟಿಸಿ ಇದೀಗ ಬಿ.ಪ್ಯಾಕ್ ಜತೆಗೆ ಸಮೀಕ್ಷೆ ನಡೆಸಲು ಮುಂದಾಗಿದೆ.

ಬಿಎಂಟಿಸಿಯಲ್ಲಿ ಮಹಿಳೆಯರಿಗಾಗಿ ಬಿಎಂಟಿಸಿಯಲ್ಲಿ ಮಹಿಳೆಯರಿಗಾಗಿ "ಗುಲಾಬಿ ಆಸನ'

ಕೇಂದ್ರದಿಂದ ದೊರೆತ 57 ಕೋಟಿ ಹಣವನ್ನು ಹಲವು ಉಪಕ್ರಮಗಳ ಅಭಿವೃದ್ಧಿ ಪಡಿಸಲು ಬಿಎಂಟಿಸಿ ಉತ್ಸುಕವಾಗುತ್ತಿದೆ. ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ಕಣ್ಗಾವಲು ವ್ಯವಸ್ಥೆಯನ್ನು ಬಿಎಂಟಿಸಿಯ ನೂತನ ಬಸ್ಸುಗಳಿಗೆ ಅಳವಡಿಸುವುದು, ವಾರ್ಷಿಕ ಸಾಮರ್ಥ್ಯ ಪ್ರಮಾಣಪತ್ರ ತಪಾಸಣೆ ಸಂದರ್ಭದಲ್ಲಿ ಬಸ್ಸುಗಳನ್ನು ಮೇಲ್ದರ್ಜೆಗೇರಿಸುವ ಇನ್ನಿತರೆ ಕ್ರಮಗಳನ್ನು ಒಳಗೊಂಡಿದೆ.

Women safety in BMTC:collect opinions from the commuters

ಬಿಎಂಟಿಸಿಯಲ್ಲಿ ಸುಮಾರು 35 ಸಾವಿರ ನೌಕರರಿದ್ದು ಅವರಲ್ಲಿ ಮಹಿಳಾ ನೌಕರರು10ಸಾವಿರ ಕೂಡ ಇಲ್ಲ, ಚಾಲಕರು, ನಿರ್ವಾಹಕರ ಹುದ್ದೆಗಳನ್ನು ಹೆಚ್ಚು ಹೆಚ್ಚಾಗಿ ಮಹಿಳೆಯರಿಗೆ ತರಬೇತಿ ನೀಡಲು ಬಿಎಂಟಿಸಿ ಕ್ರಮ ಕೈಗೊಳ್ಳುತ್ತಿದೆ.

ಸಿಸಿಟಿವಿ ಕ್ಯಾಮರಾ ಮತ್ತು ಚಾಲನಾ ತರಬೇತಿಯನ್ನು ಮಹಿಳಾ ನೌಕರರಿಗೆ ನೀಡುವುದು ಮಾತ್ರವಲ್ಲದೆ ಮಹಿಳೆಯರಿಗೆ ನಿರ್ದಿಷ್ಟವಾದ ಅಪ್ಲಿಕೇಷನ್ ಗಳು, ಬಿಎಂಟಿಸಿ ಸಿಬ್ಬಂದಿಗೆ ಲಿಂಗ ಸೂಕ್ಷ್ಮತೆ ಕಾರ್ಯಕ್ರಮಗಳು, ಮಹಿಳಾ ಪ್ರಯಾಣಿಕರಿಗೆ ಲಾಂಜ್ ಗಳು ಕೂಡ ಒಳಗೊಂಡಿರುತ್ತದೆ.

ಸಮೀಕ್ಷೆ ನಡೆಸುವುದರಿಂದ ಪ್ರಯಾಣಿಕರಿಗೆ ಯಾವೆಲ್ಲಾ ಸೇವೆಗಳು ಅಗತ್ವಯವಾಗಿರುತತ್ದೆ ಎಂದು ತಳಿದುಕೊಳ್ಳಬಹುದು, ಆನ್ ಲೈನ್ ಮೂಲಕ ಮತ್ತು ಹಲವು ಬಸ್ ನಿಲ್ದಾಣಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. 2 ಸಾವಿರ ಮಂದಿಯಿಂದ ಪ್ರತಿಕ್ರಿಯೆ ಪಡೆದ ನಂತರ ಬಿಎಂಟಿಸಿಗೆ ಬಿ.ಪ್ಯಾಕ್ ಸಂಸ್ಥೆಯ ಕಾರ್ಯಕರ್ತರು ಫಲಿತಾಂಶವನ್ನು ಸಲ್ಲಿಸಲಿದ್ದಾರೆ.

English summary
Bengaluru’s commuters will now have a chance to pick initiatives which they believe would be the best for ensuring safety for women on board buses operated by the BMTC. After having receiving a grant from the Central Government’s Nirbhaya Fund, the BMTC is now conducting a survey along with the B.PAC to ensure that funds are disbursed towards initiatives which the citizens feel are essential.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X