ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ಸಹಾಯವಾಣಿಗೇ ಅಶ್ಲೀಲ ಕರೆ!

ಮಹಿಳೆಯರ ದೂರುಗಳನ್ನು ಕೇಳುವುದಕ್ಕಾಗಿ ಆರಂಭಿಸಿದ್ದ ಸಹಾಯವಾಣಿ ಸಂಖ್ಯೆಗೆ ಆಗಾಗ ಕರೆ ಮಾಡುವ ಕೆಲ ಕಿಡಿಗೇಡಿಗಳು ಅಶ್ಲೀಲ ಮಾತುಗಳನ್ನಾಡಿ, ಲೈಂಗಿಕ ಬೇಡಿಕೆಗಳನ್ನಿಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

|
Google Oneindia Kannada News

ಬೆಂಗಳೂರು, ಏಪ್ರಿಲ್ 1: ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ನೀಡುವುದಕ್ಕಾಗಿ, ಮಹಿಳೆಯರ ಅಹವಾಲನ್ನು ಆಲಿಸುವುದಕ್ಕಾಗಿ ಆರಂಭಿಸಿದ ಮಹಿಳಾ ಹೆಲ್ಪ್ ಲೈನೇ ಈಗ ಹೆಲ್ಪ್ ಲೆಸ್ ಆಗಬೇಕಾದ ಪರಿಸ್ಥಿತಿ ಬಂದಿದೆ.

ಮಹಿಳೆಯರ ದೂರುಗಳನ್ನು ಕೇಳುವುದಕ್ಕಾಗಿ ಆರಂಭಿಸಿದ್ದ ಸಹಾಯವಾಣಿ ಸಂಖ್ಯೆ 1090 ಮತ್ತು ಹಿರಿಯ ನಾಗರಿಕರಿಗಾಗಿ ಆರಂಭಿಸಿದ್ದ 1091 ಸಂಖ್ಯೆಗೆ ಆಗಾಗ ಕರೆ ಮಾಡುವ ಕೆಲ ಕಿಡಿಗೇಡಿಗಳು ಅಶ್ಲೀಲ ಮಾತುಗಳನ್ನಾಡಿ, ಲೈಂಗಿಕ ಬೇಡಿಕೆಗಳನ್ನಿಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.[ಬಾಲಕಿ ಲೈಂಗಿಕ ದೌರ್ಜನ್ಯ, ಸಚಿವರ ಆಪ್ತನ ರಕ್ಷಣೆ ನಿಂತರೆ ಪೊಲೀಸರು?]

Women Helpline, now become helpless!

ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವಷ್ಟೇ. ಯಾವುದೇ ದೂರು ದಾಖಲಿಸಿಲ್ಲ. ಈ ಕರೆಗಳು ಪ್ರತಿದಿನವೂ ಬರುತ್ತಿದ್ದು, ಕಚೇರಿಯ ನೆಮ್ಮದಿ ಹಾಳಾಗುತ್ತಿದೆ, ಇದರಿಂದಾಗಿ ನೆಮ್ಮದಿಯಿಂದ ಕೆಲಸ ಮಾಡುವುದು ಕಷ್ಟವಾಗುತ್ತದೆ ಎಂಬುದು ಸಹಾಯವಾಣಿ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರ ಅಂಬೋಣ.

ಮಹಿಳೆಯರ ಸಹಾಯಕ್ಕೆಂದು ಆರಂಭಿಸಿದ ಸಹಾಯವಾಣಿಯೇ ಈಗ ಅಸಹಾಯಕವಾಗಿರುವುದು ಶೋಚನೀಯ ವಿಷಯವೆನ್ನಿಸಿದೆ. ಪ್ರತಿದಿನ ಹಲವಾರು ಬಾರಿ ಕಿಡಿಗೇಡಿಗಳಿಂದ ಇಂಥ ಕರೆ ಬರುತ್ತಿದ್ದರೂ ಇಂದಿಗೂ ದೂರು ದಾಖಲಿಸದಿರುವುದು ಅಚ್ಚರಿಯ ಸಂಗತಿ ಎನ್ನಿಸಿದೆ.

English summary
Women Helpline, now become helpless! Becuase some people regularly calling helpline number and speaking vulgerly with the staff. Staff members are getting irritated by this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X