ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

20 ವರ್ಷಗಳ ಬಳಿಕ ಬಿಡಿಎಗೆ ಮಹಿಳಾ ಆಯುಕ್ತರ ನೇಮಕ

|
Google Oneindia Kannada News

ಬೆಂಗಳೂರು, ಜೂನ್ 18 : 20 ವರ್ಷಗಳ ಬಳಿಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಹಿಳಾ ಆಯುಕ್ತರನ್ನು ನೇಮಕ ಮಾಡಲಾಗಿದೆ. ಬಿಡಿಎ ಆಯುಕ್ತರಾಗಿದ್ದ ರಾಕೇಶ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಬಿಡಿಎ ಆಯುಕ್ತರಾಗಿ ಡಾ.ಎನ್.ಮಂಜುಳಾ ಅವರನ್ನು ನೇಮಕ ಮಾಡಲಾಗಿದೆ. ಮಂಜುಳಾ ಅವರು 2002ನೇ ಬ್ಯಾಚ್ ಐಎಎಸ್ ಅಧಿಕಾರಿ. ಈ ಮೂಲಕ ಬಿಡಿಎಗೆ 2ನೇ ಬಾರಿಗೆ ಮಹಿಳಾ ಸಾರಥ್ಯ ಸಿಕ್ಕಿದೆ.

ಬಿಡಿಎ ಆಯುಕ್ತ ರಾಕೇಶ್ ಸಿಂಗ್ ವರ್ಗಾವಣೆಗೆ ಕುಮಾರಸ್ವಾಮಿ ಭರವಸೆಬಿಡಿಎ ಆಯುಕ್ತ ರಾಕೇಶ್ ಸಿಂಗ್ ವರ್ಗಾವಣೆಗೆ ಕುಮಾರಸ್ವಾಮಿ ಭರವಸೆ

ಅಚ್ಚರಿಯ ವಿಷಯವೆಂದರೆ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಬಿಡಿಎಗೆ ಮೊದಲ ಮಹಿಳಾ ಆಯುಕ್ತರನ್ನು ನೇಮಕ ಮಾಡಲಾಗಿತ್ತು. ಈಗ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದಾಗ ಮತ್ತೊಬ್ಬರು ಮಹಿಳಾ ಆಯುಕ್ತರನ್ನು ನೇಮಕ ಮಾಡಲಾಗಿದೆ.

ಕೆಂಪೇಗೌಡ ಬಡಾವಣೆ ಫಲಾನುಭವಿಗಳಿಗೆ ಗುಡ್ ನ್ಯೂಸ್ಕೆಂಪೇಗೌಡ ಬಡಾವಣೆ ಫಲಾನುಭವಿಗಳಿಗೆ ಗುಡ್ ನ್ಯೂಸ್

Women commissioner for BDA after 20 years

1995 ರಿಂದ 1999 ರ ತನಕ ಲಕ್ಷ್ಮೀ ವೆಂಕಟಾಚಲಂ ಅವರು ಬಿಡಿಎ ಆಯುಕ್ತರಾಗಿದ್ದರು. ಆ ಬಳಿಕ ಯಾವುದೇ ಮಹಿಳಾ ಅಧಿಕಾರಿಗೆ ಬಿಡಿಎ ಆಯುಕ್ತರ ಹೊಣೆ ನೀಡಿರಲಿಲ್ಲ. ಈಗ ಡಾ.ಎನ್.ಮಂಜುಳಾ ಅವರನ್ನು ಆಯುಕ್ತರಾಗಿ ನೇಮಿಸಲಾಗಿದೆ.

ಶೀಘ್ರ ಅರ್ಕಾವತಿ ಬಡಾವಣೆಯಲ್ಲಿ ಸೈಟ್ ವಿತರಣೆ ಕಾರ್ಯ ಆರಂಭಶೀಘ್ರ ಅರ್ಕಾವತಿ ಬಡಾವಣೆಯಲ್ಲಿ ಸೈಟ್ ವಿತರಣೆ ಕಾರ್ಯ ಆರಂಭ

ರಾಕೇಶ್ ಸಿಂಗ್ ಅವರು 2017ರ ಮಾರ್ಚ್ 10 ರಂದು ಬಿಡಿಎ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ಸದ್ಯ ಅವರು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಕೆಎಂಎಫ್ ಎಂಡಿಯಾಗಿ ಮೂರು ಹುದ್ದೆ ಹೊಂದಿದ್ದಾರೆ.

ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್ ಅವರನ್ನು ವರ್ಗಾವಣೆ ಮಾಡುವಂತೆ ಬಿಡಿಎ ಅಧ್ಯಕ್ಷರಾದ ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಅವರು ಪಟ್ಟು ಹಿಡಿದಿದ್ದರು.

ರಾಕೇಶ್ ಸಿಂಗ್ ವರ್ಗಾವಣೆಯಿಂದಾಗಿ ಎಸ್‌.ಟಿ.ಸೋಮಶೇಖರ್ ಮತ್ತು ಬಿಡಿಎ ಆಯುಕ್ತರ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಬಿದ್ದಿದೆ.

English summary
2002 batch IAS officer Dr.N.Manjula appointed as commissioner of Bangalore Development Authority (BDA). Manjula 2nd women chief for the BDA. Women commissioner appointed for authority after 20 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X