• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೇಡೀಸ್ ಫೇವರಿಟ್ ಸಿದ್ದರಾಮಯ್ಯ, ಸೆಲ್ಫಿಗಾಗಿ ಮುಗಿಬಿದ್ದ ಮಹಿಳೆಯರು

|

ಬೆಂಗಳೂರು, ಅಕ್ಟೋಬರ್ 06: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಅತಿ ಜನಪ್ರಿಯ ರಾಜಕಾರಣಿ ಎಂಬುರಲ್ಲಿ ಎರಡು ಮಾತಿಲ್ಲ.

ಸಿದ್ದರಾಮಯ್ಯ v/s ಡಿಕೆಶಿ, ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಶುರು

ಸಿದ್ದರಾಮಯ್ಯ ಹೋದಲ್ಲೆಲ್ಲಾ ಜನಜಾತ್ರೆ, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬೀಳುತ್ತಾರೆ. ಇದರಲ್ಲಿ ಹೆಣ್ಣು ಮಕ್ಕಳೂ ಹಿಂದೆ ಇಲ್ಲ. ಹೆಣ್ಣುಮಕ್ಕಳ ಫೇವರೇಟ್ ರಾಜಕಾರಣಿ ಸಿದ್ದರಾಮಯ್ಯ ಎನ್ನುವುದು ಈ ಹಿಂದೆ ಸಹ ಕೆಲವು ಬಾರಿ ಸಾಬೀತಾಗಿದೆ (ಮುತ್ತಿನ ಘಟನೆ ನೆನಪಿಸಿಕೊಳ್ಳಿ).

ಸದಾಶಿವ ವರದಿ: ಸಿದ್ದರಾಮಯ್ಯ ಮೊರೆ ಹೋಗಲು ಮಾದಿಗರ ತೀರ್ಮಾನ

ಇಂದು ಸಹ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಮಹಿಳೆಯರು ಮುಗಿಬಿದ್ದು ಗೊಂದಲ ಉಂಟುಮಾಡಿದರು. ಸಿದ್ದರಾಮಯ್ಯ ಮಾತ್ರ ನಗುತ್ತಲೆ ಮಹಿಳೆಯರ ಜೊತೆ ಸೆಲ್ಫಿಗೆ ಹಲ್ಲುಕಿರಿದರು.

ಡಿ.ಕೆ.ಶಿ ಮನೆಯಲ್ಲಿ ಕಾಂಗ್ರೆಸ್ ಸಚಿವರಿಗೆ ಉಪಹಾರ, ಸಿದ್ದರಾಮಯ್ಯಗಿಲ್ಲ ಆಹ್ವಾನ!

ಸೆಲ್ಫಿಗಾಗಿ ಸಿದ್ದು ಮೇಲೆ ಮಹಿಳೆಯರ ಮುತ್ತಿಗೆ

ಸೆಲ್ಫಿಗಾಗಿ ಸಿದ್ದು ಮೇಲೆ ಮಹಿಳೆಯರ ಮುತ್ತಿಗೆ

ದೇವರಾಜು ಅರಸು ಭವನದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಂಘ ಹಾಗೂ ಕುರುಬ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಅವರು ಸಮಾರಂಭಕ್ಕೆ ಬಂದ ಕೂಡಲೇ ಮಹಿಳಾ ಸಂಘದ ಮಹಿಳೆಯರು ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಭಾರಿ ಸಂಖ್ಯೆಯಲ್ಲಿದ್ದ ಮಹಿಳೆಯರಿಗೆ ನಗುತ್ತಲೇ ಸೆಲ್ಫಿಗೆ ಫೋಸು ನೀಡಿದರು ಸಿದ್ದರಾಮಯ್ಯ.

ಈ ಹಿಂದೆಯೂ ಹಲವು ಬಾರಿ ಹೀಗಾಗಿತ್ತು

ಈ ಹಿಂದೆಯೂ ಹಲವು ಬಾರಿ ಹೀಗಾಗಿತ್ತು

ಸಿದ್ದರಾಮಯ್ಯ ಅವರು ಈ ಹಿಂದೆ ಮೈಸೂರಿಗೆ ಹೋಗಿದ್ದಾಗೊಮ್ಮೆ ಹೀಗೆ ಆಗಿತ್ತು. ಮಹಿಳೆಯರ ಸೆಲ್ಫಿ ಇಂದ ತಪ್ಪಿಸಿಕೊಂಡು ಬರಲು ಸಿದ್ದರಾಮಯ್ಯ ಅವರಿಗೆ ಅರ್ಧ ಗಂಟೆ ಹಿಡಿದಿತ್ತು. ಮಹಿಳಾ ದಿನಾಚರಣೆ ವೇಳೆ ಸಹ ಸಿದ್ದರಾಮಯ್ಯ ಅವರ ಮಹಿಳೆಯರೊಂದಿಗಿನ ಸೆಲ್ಫಿ ಭಾರಿ ಫೇಮಸ್ ಆಗಿತ್ತು.

ಸಿದ್ದರಾಮಯ್ಯ ಅವರ ಮುತ್ತಿನ ಕತೆಯ ಮುರೆಯುವಂತಿಲ್ಲ

ಸಿದ್ದರಾಮಯ್ಯ ಅವರ ಮುತ್ತಿನ ಕತೆಯ ಮುರೆಯುವಂತಿಲ್ಲ

ಸಿದ್ದರಾಮಯ್ಯ ಅವರು ಮಹಿಳೆಯರ ಫೇವರೇಟ್ ನಾಯಕ ಎಂಬುದಕ್ಕೆ ಅವರಿಗೆ ಒದಗಿಬಂದಿದ್ದ ಮುತ್ತೇ ಸಾಕ್ಷಿ. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ನಡೆದಿದ್ದ ಹೊಸದಾಗಿ ಆಯ್ಕೆಯಾದ ಕುರುಬ ಜನಾಂಗದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಸನ್ಮಾನಿಸುವ ವೇಳೆ ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಸದಸ್ಯೆ ಗಿರಿಜಾ ಶ್ರೀನಿವಾಸ ಅವರು ಸಿದ್ದರಾಮಯ್ಯ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದು ಯಾರಾದರೂ ಮರೆಯಲು ಸಾಧ್ಯವೇ?

ಸಿದ್ದರಾಮಯ್ಯ ಅವರಿಗೂ ಸೆಲ್ಫಿ ಕ್ರೇಜ್ ಇದೆ

ಸಿದ್ದರಾಮಯ್ಯ ಅವರಿಗೂ ಸೆಲ್ಫಿ ಕ್ರೇಜ್ ಇದೆ

ಸಿದ್ದರಾಮಯ್ಯ ಅವರು ಸ್ವತಃ ಸೆಲ್ಫಿ ತೆಗೆದುಕೊಳ್ಳುವ ಕ್ರೇಜ್ ಇಲ್ಲದೆ ಇದ್ದರು. ಬೇರೆಯರು ತೆಗೆಯುವ ಸೆಲ್ಫಿಗೆ ಧಾರಾಳವಾಗಿ ಹಲ್ಲು ಕಿರಿಯುತ್ತಾರೆ. ಯಾವುದೋ ಕಾರ್ಯಕ್ರಮವೊಂದರಲ್ಲಿ ದೂರದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವತಿಯನ್ನು ಕೈ ಹಿಡಿದು ಹತ್ತಿರ ಎಳೆದ ವಿಡಿಯೋ ಭಾರಿ ವೈರಲ್‌ ಆಗಿತ್ತು. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಸಹ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದರು.

ಶಿಲ್ಪಾಶೆಟ್ಟಿ ತೆಗೆದುಕೊಂಡಿದ್ದರು ಸೆಲ್ಫಿ

ಶಿಲ್ಪಾಶೆಟ್ಟಿ ತೆಗೆದುಕೊಂಡಿದ್ದರು ಸೆಲ್ಫಿ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಯೋಗದಿನಕ್ಕೆಂದು ಆಗಮಿಸಿದ್ದ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಅವರು ಸಹ ಸಿದ್ದರಾಮಯ್ಯ ಅವರ ಜೊತೆ ಸೆಲ್ಫಿ ತೆಗೆದುಕೊಂಡಿದ್ದರು. ಈ ಚಿತ್ರ ಸಹ ಬಹಳ ವೈರಲ್ ಆಗಿತ್ತು. ಸಿದ್ದರಾಮಯ್ಯ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ನಿರೂಪಣೆ ಮಾಡುವವರು, ಆಯೋಜಕರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳವುದು ಸಾಮಾನ್ಯವಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Siddaramaiah is a friendly politician. Where ever he goes people well gather there and try to shake his hands, took photo with him. Today also in Bengaluru women attacked Siddaraiamaiah to took selfie with him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more