ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರಿ ಪೊಲೀಸರ ದಂಡಾಸ್ತ್ರದಿಂದ ಗಂಡಂದಿರನ್ನು ರಕ್ಷಿಸಲು ಮಹಿಳೆಯರ ಹೊಸ ಅಸ್ತ್ರ

|
Google Oneindia Kannada News

ಬೆಂಗಳೂರು, ಏಪ್ರಿಲ್ 10: ಸಂಚಾರ ಪೊಲೀಸರು ಮೂರ್ಛೆ ಹೊಗುವುದು ಬಾಕಿ. ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರು ದಂಡದಿಂದ ತಪ್ಪಿಸಿಕೊಳ್ಳಲು ಪೊಲೀಸರೇ ತಲೆ ತಿರುಗುವ ಐಡಿಯಾ ಮಾಡಿಕೊಂಡಿದ್ದಾರೆ. ನಿಯಮ ಉಲ್ಲಂಘನೆ ಕುರಿತು ಪೋಟೋ ತೆಗೆದು ದಂಡ ವಸೂಲಿ ಮಾಡಲಾಗದಂತೆ ಪೊಲೀಸರ ಕಾರ್ಯಕ್ಕೆ ವಾಹನ ಸವಾರರ ಹಿಂಬದಿ ಕೂರುವರೇ ಹೊಸ ಐಡಿಯಾ ಕಂಡು ಕೊಂಡಿದ್ದಾರೆ. ಅದರಲ್ಲೂ ತಮ್ಮ ಗಂಡಂದಿರನ್ನು ಸಂಚಾರ ಪೊಲೀಸರು ವಿಧಿಸುವ ದಂಡಾಸ್ತ್ರದಿಂದ ತಪ್ಪಿಸಲು ಹಿಂಬದಿ ಕೂರುವ ಪತ್ನಿಯರೇ ಹೊಸ ಐಡಿಯಾ ಕಂಡುಕೊಂಡಿದ್ದಾರೆ. ಮಹಿಳೆಯರ ಈ ಐಡಿಯಾ ನೋಡಿ ಸಂಚಾರ ಪೊಲೀಸರೇ ಮೂರ್ಛೆ ಹೋಗುವಂತಾಗಿದೆ !

Recommended Video

ಮಹಿಳೆಯರ ಐಡಿಯಾ ನೋಡಿದ್ರೆ ಟ್ರಾಫಿಕ್ ಪೊಲೀಸ್ ತಲೆ ತಿರುಗಿ ಬೀಳೋದು ಪಕ್ಕಾ | Oneindia Kannada

ಬೆಂಗಳೂರಲ್ಲಿ ಬೈಕ್‌ಗಳಿಗೆ ಇಂಡಿಕೇಟರ್ ಇಲ್ಲದಿದ್ದರೆ 500 ರೂ. ದಂಡಬೆಂಗಳೂರಲ್ಲಿ ಬೈಕ್‌ಗಳಿಗೆ ಇಂಡಿಕೇಟರ್ ಇಲ್ಲದಿದ್ದರೆ 500 ರೂ. ದಂಡ

ಸೆರಗಾಸ್ತ್ರ : ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ ಸವಾರರ ವಾಹನ ಅಡ್ಡಗಟ್ಟಿ ಸಂಚಾರ ಪೊಲೀಸರು ದಂಡ ವಸೂಲಿ ಮಾಡುತ್ತಿದ್ದರು. ನಿಯಮ ಉಲ್ಲಂಘಣೆ ಮಾಡದ ಸವಾರರನ್ನು ಸಂಚಾರ ಪೊಲೀಸರು ಅಡ್ಡಗಟ್ಟಿ ದಂಡ ವಸೂಲಿ ಮಾಡುತ್ತಿದ್ದ ವಿಚಾರ ಸಾರ್ವಜನಿಕ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸಿಗ್ನಲ್ ನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ಪೋಟೋ ತೆಗೆದು ದಂಡ ವಸೂಲಿ ಮಾಡುವ ವಿನೂತನ ಕಾರ್ಯಕ್ಕೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ದಂಡ ವಸೂಲಿ ಕಾರ್ಯ ಶೈಲಿ ಬೆಂಗಳೂರು ಸಂಚಾರ ಪೊಲೀಸರು ಬದಲಿಸಿದ್ದರು.

ತಮ್ಮ ಪತಿಯರ ಜತೆ ಪ್ರಯಾಣಿಸುವ ಪತ್ನಿಯರು ಸಂಚಾರ ನಿಯಮ ಉಲ್ಲಂಘನೆ ಕುರಿತು ಭಾವಿಚಿತ್ರ ತೆಗೆಯುವ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವಂತಹ ಐಡಿಯಾ ಕಂಡುಕೊಂಡಿದ್ದಾರೆ. ಹಿಂಬದಿ ಕೂರುವ ಪತ್ನಿಯರು ಪೊಲೀಸರು ಚಿತ್ರ ತೆಗೆಯುವಾಗ ವಾಹನ ನಂಬರ್ ಕಾಣದಂತೆ ಕಾಲು ಅಡ್ಡ ಇಟ್ಟು ತಮ್ಮ ಪತಿಯರನ್ನು ಸಂಚಾರ ದಂಡದಿಂದ ತಪ್ಪಿಸುತ್ತಿದ್ದಾರೆ. ಇನ್ನೂ ಕೆಲವು ಮಹಿಳೆಯರು ನಂಬರ್ ಪ್ಲೇಟ್ ಮೇಲೆ ಬಿಟ್ಟು ತಮ್ಮ ಪತಿಯರನ್ನು ರಕ್ಷಣೆ ಮಾಡುವ ಐಡಿಯಾ ಕಂಡುಕೊಂಡಿದ್ದಾರೆ. ಮಹಿಳೆಯರ ಈ ಸಾಹಸ ನೋಡಿ ಇದೀಗ ಸಂಚಾರ ಪೊಲೀಸರೇ ಮೂರ್ಛೆ ಹೋಗುವಂತಾಗಿದೆ.

Bengaluru women Amazing Idea to Escape from Traffic Fines

ಇನ್ನೊಂದಡೆ ಹಿಂಬದಿ ಸವಾರರು ಕೂಡ ನಂಬರ್ ಪ್ಲೇಟ್ ಕಾಣದಂತೆ ಕೈ ಅಡ್ಡ ಇಟ್ಟು ದಂಡದಿಂದ ತಪ್ಪಿಸಿಕೊಳ್ಳುವ ಹಾದಿ ಕಂಡು ಕಂಡುಕೊಂಡಿದ್ದಾರೆ. ಯುವಕನೊಬ್ಬ ಹಿಂದಿನಿಂದ ಬಗ್ಗಿ ಇಡೀ ನಂಬರ್ ಪ್ಲೇಟ್ ಕಾಣದಂತೆ ಮುಚ್ಚಿ ತಪ್ಪಿಸಿಕೊಂಡಿದ್ದಾರೆ. ಇನ್ನೊಂದಡೆ ಬೈಕ್ ಸವಾರರು ಹಿಂಬದಿ ನಂಬರ್ ಪ್ಲೇಟ್ ಕಾಣದಂತೆ ಎಲೆಗಳಿಂದ ಮುಚ್ಚಿದ್ದಾರೆ. ಸಂಚಾರ ಪೊಲೀಸರ ದಂಡಾಸ್ತ್ರದ ವಿರುದ್ಧ ಸಾರ್ವಜನಿಕರು ಕಂಡುಕೊಂಡಿರುವ ಹೊಸ ಹಾದಿಯ ಚಿತ್ರಗಳು ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ.

English summary
Bengaluru Bike riders who violate traffic rules have found an innovative idea to escape from traffic fines. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X