ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೂರು ರೂಪಾಯಿ ಲಿಪ್‍ಸ್ಟಿಕ್ ಆಸೆಗೆ ಮೂರು ಲಕ್ಷ ಕಳೆದುಕೊಂಡ ಮಹಿಳೆ

|
Google Oneindia Kannada News

ಬೆಂಗಳೂರು ಮೇ 13: ಆರ್ಥಿಕ ಸಂಕಷ್ಟದ ನಡುವೆ ಕಡಿಮೆ ಬೆಲೆಯಲ್ಲಿ ಯಾವುದಾದರು ವಸ್ತು ಸಿಗುತ್ತೆ ಅಂದ್ರೆ ಜನ ಮುಗಿಬಿದ್ದು ಖರೀದಿ ಮಾಡುತ್ತಾರೆ. ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡು ಕೆಲ ಮಂದಿ ಮೋಸದ ಸುಳಿಯಲ್ಲಿ ಜನರನ್ನು ಸಿಕ್ಕಿಬೀಳುವಂತೆ ಮಾಡುತ್ತಿದ್ದಾರೆ. ಇಂತಹದೊಂದು ಪ್ರಕರಣ ಸಿಲಿಕಾನ್ ಸಿಟಿಯಲ್ಲಿ ದಾಖಲಾಗಿದೆ.

ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ನಿಧನಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ನಿಧನ

ಹೌದು.. ಕಡಿಮೆ ಬೆಲೆಯಲ್ಲಿ ಲಿಪ್‌ಸ್ಟಿಕ್ ಖರೀದಿ ಮಾಡಲು ಮುಂದಾದ ಮಹಿಳೆಗೆ ಖದೀಮರು ಪಂಗನಾಮ ಹಾಕಿದ್ದಾರೆ. ರೂಪಾಯಿ ಲಿಪ್‍ಸ್ಟಿಕ್ ಆಸೆಗೆ ಬಿದ್ದ ಯುವತಿಯೊಬ್ಬರು ಬರೋಬ್ಬರಿ ಮೂರೂವರೆ ಲಕ್ಷ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಹೆಬ್ಬಾಳ ಬಳಿಯ ನಾಗೇನಹಳ್ಳಿ ಮಹಿಳೆಯೊಬ್ಬರಿಗೆ ಆನ್‍ಲೈನ್ ಡೆಲಿವರಿ ಕಂಪನಿಯಿಂದ ಕಾಲ್ ಮಾಡಿ ನೂರು ರೂಪಾಯಿ ಲಿಪ್‍ಸ್ಟಿಕ್ ಬುಕ್ ಮಾಡಿದ್ರೆ, ಲಕ್ಷಾಂತರ ರೂಪಾಯಿ ಬಹುಮಾನ ಗೆಲ್ಲಬಹುದು ಅಂತಾ ಮಹಿಳೆಯ ತಲೆಗೆ ತುಂಬಿದೆ.

woman lost three lakhs rupees to buy lipstick at a lower price

ಇದನ್ನೇ ನಂಬಿದ ಮಹಿಳೆ ಲಿಪ್‌ಸ್ಟಿಕ್ ಆರ್ಡರ್ ಮಾಡಿದ್ದಾಳೆ. ಲಿಪ್‍ಸ್ಟಿಕ್ ಬುಕ್ ಮಾಡಿದ ಮಹಿಳೆಗೆ ಕೆಲ ನಿಮಿಷದಲ್ಲೇ ಆ ಕಡೆಯಿಂದ ಅಪರಿಚಿತ ಕಾಲ್ ಮಾಡಿ ಮೇಡಂ ನಿಮಗೆ ಒಂದು ಲ್ಯಾಪ್ ಟಾಪ್ ಮತ್ತು ಐಫೋನ್ ಬಂಪರ್ ಬಹುಮಾನ ಬಂದಿದೆ. ನಿಮಗೆ ಒಂದು ಲಿಂಕ್ ಕಳಿಸಿದ್ದೀನಿ ಅದನ್ನು ಓಕೆ ಮಾಡಿ ಅಂದಿದ್ದಾರೆ. ಅಷ್ಟೇ ತಾನೇ ಅಂತಾ ಮಹಿಳೆ ಆ ಲಿಂಕ್ ಓಕೆ ಮಾಡಿದ್ದಾಳೆ. ಅಷ್ಟೇ ಕ್ಷಣಮಾತ್ರದಲ್ಲೇ ಆ ಯುವತಿ ಅಕೌಂಟ್ ನಲ್ಲಿದ್ದ ಮೂರು ಲಕ್ಷದ ಮೂವತ್ತೆಂಟು ಸಾವಿರ ಡೆಬಿಟ್ ಆಗಿದೆ.

woman lost three lakhs rupees to buy lipstick at a lower price

ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ವಿಚಾರಣೆ ನಡೆಯುತ್ತಿದೆ. ಹೀಗಾಗಿ ರೂಪಾಯಿ ಆಸೆಗೆ ಬಿದ್ದು ಅಧಿಕ ಹಣ ಕಳೆದುಕೊಳ್ಳುವಂತವರಿಗೆ ಇದೊಂದು ಪಾಠವಾಗಿದೆ. ಈಗಲಾದರೂ ಇಂತಹ ಖದೀಮರಿಂದ ಜನ ಎಚ್ಚೆತ್ತುಕೊಳ್ಳಬೇಕಾಗಿದೆ.

English summary
An online delivery company has cheated a woman of a hebbala nagenahalli to buy lipstick at a lower price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X