ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಜೈಲಿನಲ್ಲಿದ್ದ ಮಹಿಳೆಗೆ ಪಾಕಿಸ್ತಾನದ ಪೌರತ್ವ

|
Google Oneindia Kannada News

ಬೆಂಗಳೂರು, ಫೆಬ್ರವರಿ 19: ಬೆಂಗಳೂರಿನ ಜೈಲಿನಲ್ಲಿರುವ ಮಹಿಳೆಯೊಬ್ಬರಿಗೆ ಪಾಕಿಸ್ತಾನ ಪೌರತ್ವ ಪ್ರಮಾಣಪತ್ರವನ್ನು ನೀಡಿದೆ. ಈ ಮೂಲಕ ಬೆಂಗಳೂರು ಜೈಲಿನಲ್ಲಿರುವ ಮಹಿಳೆ ತನ್ನ ನಾಲ್ಕು ವರ್ಷದ ಮಗಳೊಂದಿಗೆ ಪಾಕಿಸ್ತಾನ ದೇಶಕ್ಕೆ ಮರಳಲು ದಾರಿ ಮಾಡಿಕೊಟ್ಟಿದೆ ಎಂದು ಮಾಧ್ಯಮಗಳ ವರದಿ ಶುಕ್ರವಾರ ತಿಳಿಸಿದೆ.

ಪಾಕಿಸ್ತಾನ ರಾಷ್ಟ್ರೀಯ ಡೇಟಾಬೇಸ್ ಮತ್ತು ನಿಯಂತ್ರಣ ಪ್ರಾಧಿಕಾರವು ಆಕೆಯ ಕುಟುಂಬದ ಬಗ್ಗೆ ಪರಿಶೀಲನೆ ಮಾಡಿದ ಬಳಿಕ ಬೆಂಗಳೂರಿನ ಬಂಧನ ಕೇಂದ್ರದಲ್ಲಿರುವ ಸುಮೈರಾ ಅವರಿಗೆ ಪಾಕಿಸ್ತಾನದ ಪೌರತ್ವ ಪ್ರಮಾಣಪತ್ರವನ್ನು ಪಾಕ್‌ ಸಚಿವಾಲಯ ಗುರುವಾರ ನೀಡಿದೆ ಎಂದು ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ ಎಂದು ಪಾಕ್‌ನ ಪ್ರಮುಖ ಮಾಧ್ಯಮ ಡಾನ್ ವರದಿ ಮಾಡಿದೆ.

ಹಿಜಾಬ್ ವಿವಾದ: ಸ್ಥಳೀಯಕ್ಕಿಂತ ಮೊದಲು ಪಾಕ್ ಮಾಧ್ಯಮದಲ್ಲಿ ಬಂದಿದ್ದು ಹೇಗೆ?; ಗೃಹ ಸಚಿವರಿಗೆ ಪತ್ರಹಿಜಾಬ್ ವಿವಾದ: ಸ್ಥಳೀಯಕ್ಕಿಂತ ಮೊದಲು ಪಾಕ್ ಮಾಧ್ಯಮದಲ್ಲಿ ಬಂದಿದ್ದು ಹೇಗೆ?; ಗೃಹ ಸಚಿವರಿಗೆ ಪತ್ರ

ಪ್ರಮಾಣಪತ್ರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಲಾಗಿದೆ ಮತ್ತು ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಆಕೆಗೆ ಪ್ರಯಾಣದ ದಾಖಲೆಯನ್ನು ನೀಡಲಿದೆ. ಈ ಮೂಲಕ ಆಕೆ ತನ್ನ ಮಗಳೊಂದಿಗೆ ಪಾಕಿಸ್ತಾನಕ್ಕೆ ಮರಳಲು ಅವಕಾಶ ನೀಡುತ್ತದೆ ಎಂದು ಪಾಕಿಸ್ತಾನ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್‌ ಮಾಹಿತಿ ನೀಡಿದ್ದಾರೆ.

Woman lodged in Bengaluru jail given Pakistan citizenship

ಬೆಂಗಳೂರಿನ ಜೈಲಿನಲ್ಲಿರುವ ಮಹಿಳೆಯ ಪ್ರಕರಣವನ್ನು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಸೆನೆಟರ್ ಇರ್ಫಾನ್ ಸಿದ್ದಿಕಿ ಅವರು ಸೋಮವಾರ ಸೆನೆಟ್‌ನಲ್ಲಿ ಪ್ರಸ್ತಾಪ ಮಾಡಿದ್ದಾರೆ ಎಂದು ಪಿಟಿಐ ವರದಿಯು ಉಲ್ಲೇಖ ಮಾಡಿದೆ.

ಸುಮೈರಾ ಬೆಂಗಳೂರು ಜೈಲಿನಲ್ಲಿ ಇರುವುದು ಹೇಗೆ?

ಸದ್ಯ ಬೆಂಗಳೂರು ಜೈಲಿನಲ್ಲಿ ಇರುವ ಸುಮೈರಾ, ಅವರು ಕತಾರ್‌ನಲ್ಲಿ ಭೇಟಿಯಾದ ಕೇರಳದ ಪಾಲಕ್ಕಾಡ್ ಮೂಲದ ಮೊಹಮ್ಮದ್ ಶಿಹಾಬ್ ಅವರನ್ನು ವಿವಾಹವಾಗಿದ್ದಾರೆ. ದಂಪತಿ, ಇಬ್ಬರು ಪಾಕಿಸ್ತಾನಿಗಳೊಂದಿಗೆ 2016ರ ಸೆಪ್ಟೆಂಬರ್‌ನಲ್ಲಿ ನೇಪಾಳ ಗಡಿ ಮೂಲಕ ಬೆಂಗಳೂರಿಗೆ ಅಕ್ರಮವಾಗಿ ಬಂದು ಕುಮಾರಸ್ವಾಮಿ ಲೇಔಟ್‌ನಲ್ಲಿ ಎರಡು ಬೆಡ್‌ರೂಮ್‌ಗಳ ಮನೆಯಲ್ಲಿ ವಾಸಿ ಮಾಡಲು ಆರಂಭಿಸಿದ್ದರು. ಮೇ 2017 ರಲ್ಲಿ, ನಗರ ಪೊಲೀಸರು ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಬಂಧನ ಮಾಡಿದ್ದಾರೆ. ಆ ಸಂದರ್ಭದಲ್ಲಿ ಸುಮೈರಾ ಕೂಡಾ ಬಂಧನಕ್ಕೆ ಒಳಗಾಗಿದ್ದಾರೆ. ನಂತರ ಸುಮೈರಾಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.

ಪುಲ್ವಾಮಾ ದಾಳಿಯ 3ನೇ ವರ್ಷ: ಐಪಿಎಸ್ ಅಧಿಕಾರಿ ಬರೆದಿರುವ ಪುಸ್ತಕ ಬಿಡುಗಡೆಗೆ ಸಿದ್ಧಪುಲ್ವಾಮಾ ದಾಳಿಯ 3ನೇ ವರ್ಷ: ಐಪಿಎಸ್ ಅಧಿಕಾರಿ ಬರೆದಿರುವ ಪುಸ್ತಕ ಬಿಡುಗಡೆಗೆ ಸಿದ್ಧ

ಸುಮೈರಾ ಜೈಲು ಶಿಕ್ಷೆಗೆ ಒಳಗಾದ ಎರಡು ತಿಂಗಳ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆ ಬಂಧನದಲ್ಲಿದ್ದಾಗ ಪತಿ ಕೇರಳದ ಪಾಲಕ್ಕಾಡ್ ಮೂಲದ ಮೊಹಮ್ಮದ್ ಶಿಹಾಬ್ ಆಕೆಯನ್ನು ಬಿಟ್ಟು ಹೋಗಿದ್ದ. ಜೈಲಿನಿಂದ ಬಿಡುಗಡೆಯಾದಾಗಿನಿಂದ ಸುಮೈರಾ ತನ್ನ ಮಗಳೊಂದಿಗೆ ಬೆಂಗಳೂರಿನ ಬಂಧನ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದ ಬೆಂಗಳೂರಿನ ಜೈಲು ಅಧಿಕಾರಿಗಳು

ಈ ನಡುವೆ ಸುಮೈರಾಗೆ ಪಾಕಿಸ್ತಾನಿ ಪೌರತ್ವವನ್ನು ನೀಡುವ ಬಗ್ಗೆ ಭಾರತ ಸರ್ಕಾರ ಅಥವಾ ಪಾಕಿಸ್ತಾನದ ಅಧಿಕಾರಿಗಳಿಂದ ಇದುವರೆಗೆ ಯಾವುದೇ ಮಾಹಿತಿ ನಮಗೆ ಲಭ್ಯವಾಗಿಲ್ಲ ಎಂದು ಬೆಂಗಳೂರಿನ ಜೈಲು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. "ಬಂಧಿತ ವ್ಯಕ್ತಿ ಸುಮೈರಾ ಪಾಕಿಸ್ತಾನಿ ಪೌರತ್ವವನ್ನು ನೀಡಲಾಗಿದೆ ಎಂದು ಸುದ್ದಿ ವರದಿಗಳಿವೆ. ದರೆ ನಮಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ," ಎಂದು ಹೆಸರು ಹೇಳಲು ಬಯಸದ ಬೆಂಗಳೂರಿನ ಜೈಲು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಪ್ರಕ್ರಿಯೆ ಸಂಪೂರ್ಣವಾದ ಬಳಿಕ ಈ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಬಹುದು ಎಂದು ಕೂಡಾ ಬೆಂಗಳೂರು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.

ಈ ನಡುವೆ ಬೆಂಗಳೂರಿನ ಬಂಧನ ಕೇಂದ್ರದಲ್ಲಿರುವ ಸುಮೈರಾ ಅವರಿಗೆ ಪಾಕಿಸ್ತಾನದ ಪೌರತ್ವ ಪ್ರಮಾಣಪತ್ರವನ್ನು ಪಾಕ್‌ ಸಚಿವಾಲಯ ಗುರುವಾರ ನೀಡಿದೆ ಎಂದು ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ ಎಂದು ಭಾರತದ ಪ್ರಮುಖ ಮಾಧ್ಯಮ ಸಂಸ್ಥೆಗಳು ವರದಿ ಮಾಡಿದೆ. (ಒನ್‌ಇಂಡಿಯಾ ಸುದ್ದಿ)

Recommended Video

Venkatesh Iyer ಶಾಟ್ ನೋಡಿ ತಬ್ಬಿಬ್ಬಾದ Virat & Rohit Sharma | Oneindia Kannada

English summary
Pakistan has issued a citizenship certificate to a woman held in a jail in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X