ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೈಂಗಿಕ ಕಿರುಕುಳ : ಪಿಜಿಯಲ್ಲಿ ಯುವತಿ ಆತ್ಮಹತ್ಯೆ

|
Google Oneindia Kannada News

Suicide
ಬೆಂಗಳೂರು, ಜೂ. 13 : ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯಬ್ಬಳು ಪಿಜಿ ಕೇಂದ್ರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಕೆರೆ ಬೃಂದಾವನ ಲೇಔಟ್ ನಲ್ಲಿ ನಡೆದಿದೆ. ಯುವತಿ ಕೆಲಸ ಮಾಡುತ್ತಿದ್ದ ಕಂಪನಿ ಸಿಇಓ, ಆತನ ಸಹೋದರ ನೀಡುತ್ತಿದ್ದ ಮಾನಸಿಕ ಹಾಗೂ ಲೈಂಗಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕು ಅಜ್ಜಂಪುರದ ಹೆಬ್ಬೂರು ನಿವಾಸಿ ಎಚ್.ಎಸ್. ಅನಿತಾ (25) ಎಂದು ಗುರುತಿಸಲಾಗಿದೆ. ಹುಳಿಮಾವು ಅರಕೆರೆ ಬೃಂದಾವನ ಲೇಔಟ್‌ ನಲ್ಲಿರುವ ಪಿಜಿಯಲ್ಲಿದ್ದ ಅನಿತಾ ಬುಧವಾರ ಸಂಜೆ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕುಟುಂಬದವರ ಆರೋಪ : ಅನಿತಾ ಕೆಲಸ ಮಾಡುತ್ತಿದ್ದ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಆತನ ಸಹೋದರ ನೀಡುತ್ತಿದ್ದ ಮಾನಸಿಕ ಹಾಗೂ ಲೈಂಗಿಕ ಕಿರುಕುಳದಿಂದ ಬೇಸರಗೊಂಡು ಅನಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಕಳೆದ ವರ್ಷ ಇಂಜಿನಿಯರಿಂಗ್ ಮುಗಿಸಿದ್ದ ಅನಿತಾ, ಬನ್ನೇರುಘಟ್ಟ ಸಮೀಪದಲ್ಲಿರುವ ಕೆ.ಬಿ. ಫೌಂಡೇಷನ್ ಸಂಸ್ಥೆಯಲ್ಲಿ ತರಬೇತಿದಾರರಾಗಿ ಎಂಟು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ಕೆ.ಬಿ. ಫೌಂಡೇಷನ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾರ್ತಿಕ್‌ ಸಹೋದರ ಮದನ್ ಹಾಗೂ ಅನಿತಾ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ವಿಷಯವನ್ನು ಅನಿತಾ ತನ್ನ ಸೋದರ ಸಂಬಂಧಿ ವಿವೇಕ್ ಎಂಬುವರ ಬಳಿ ಹೇಳಿಕೊಂಡಿದ್ದರು.

ಆದರೆ, ತಮ್ಮ ಪ್ರೀತಿಗೆ ಮದನ್ ಸಹೋದರ ಶ್ರೀಕಾರ್ತಿಕ್ ಆಕ್ಷೇಪಿಸುತ್ತಿದ್ದಾರೆ ಎಂದು ಹೇಳಿದ್ದರು. ಜೂ.10 ರಂದು ಅನಿತಾರನ್ನು ಮನೆಗೆ ಕರೆಸಿದ್ದ ಕಾರ್ತಿಕ್ ಹಾಗೂ ಮದನ್ ಕಿರುಕುಳ ನೀಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಮಂಗಳವಾರ ರಾತ್ರಿ ಅನಿತಾ ಮದನ್ ಜತೆ ಮೊಬೈಲ್‌ ನಲ್ಲಿ ಚಾಟ್ ಮಾಡಿದ್ದಳು. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅನಿತಾ ಕೊಠಡಿಯಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹುಳಿಮಾವು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

English summary
A 25-year-old woman from Chikmagalur committed suicide at her paying guest accommodation at Brindavan Layout in Hulimavu Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X