ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಮಾವು ಕೊಯ್ಯಲು ಹೋಗಿ ಪ್ರಾಣ ಕಳೆದುಕೊಂಡ ಮಹಿಳೆ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 24: ಮಾವಿನ ಕಾಯಿ ಕೊಯ್ಯಲು ಹೋಗಿ ನಗರದ ಹನುಮಂತನಗರದಲ್ಲಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಜೂನ್ 15ರಂದು ಮಾವಿನ ಕಾಯಿ ಕೊಯ್ಯಲು ಹೋಗಿ ಮಹಿಳೆ ವಿದ್ಯುತ್ ಶಾಕ್ ಗೆ ಒಳಗಾಗಿದ್ದರು. ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಗುರುವಾರ ಸಾವನ್ನಪ್ಪಿದ್ದಾರೆ.

ಹನುಮಂತನಗರದ ಶ್ರೀನಿವಾಸ ನಗರ 9ನೇ ಮುಖ್ಯ ರಸ್ತೆಯಲ್ಲಿ 28 ವರ್ಷದ ಯಶೋಧಾ ಎಚ್.ಕೆ. ಎಂಬವರ ಮನೆ ಇದ್ದು. ಅವರ ಮನೆ ಮುಂದೆ ಮಾವಿನ ಮರವಿದೆ. ಅವರು ಜೂನ್ 15ರಂದು ಮಧ್ಯಾಹ್ನ ಎರಡನೇ ಮಹಡಿಯಲ್ಲಿರುವ ತಮ್ಮ ಮನೆಯ ಬಾಲ್ಕನಿಯಿಂದ ಮಾವು ಕೊಯ್ಯಲು ಹೋಗಿದ್ದರು.

ಮಾವಿನ ಹಣ್ಣು ಕದ್ದಿದ್ದಕ್ಕೆ ಗುಂಡೇಟು: ಬಿಹಾರದ ಬಾಲಕ ಸಾವುಮಾವಿನ ಹಣ್ಣು ಕದ್ದಿದ್ದಕ್ಕೆ ಗುಂಡೇಟು: ಬಿಹಾರದ ಬಾಲಕ ಸಾವು

ಈ ಸಂದರ್ಭ ಮರಕ್ಕೆ ತಾಗಿಕೊಂಡಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಅವರ ಎದೆ, ಕೈ ಮತ್ತು ಹೊಟ್ಟೆ ಭಾಗ ಸುಟ್ಟು ಹೋಗಿತ್ತು. ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಕಾರಿಯಾಗದೆ ಯಶೋಧಾ ಅವರು ಗುರುವಾರ ಸಾವನ್ನಪ್ಪಿದ್ದಾರೆ.

Woman dies when she plucking mangoes in Hanumathnagar

ಇದೀಗ ಯಶೋಧಾ ಅವರ ಪತಿ ನಾಗರಾಜ ಆರ್ ಎಂಬವರು ಕಟ್ಟಡದ ಮಾಲಿಕರು ಮತ್ತು ಬೆಸ್ಕಾಂ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಿದ್ದಾರೆ.

English summary
A 28 year-old woman, Yashodha HK died on Thursday. She was undergoing treatment after suffering an electric shock on June 15 while plucking mangoes from a tree in front her house at Hanumanthanagar, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X