ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಹಿಳೆ ಸಾವಿಗೆ ಕಾರಣ ಇದೂ ಇರಬಹುದು

|
Google Oneindia Kannada News

ಬೆಂಗಳೂರು, ಜೂನ್ 11: ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಇತ್ತೀಚೆಗೆ ಮಹಿಳೆಯ ಶವವೊಂದು ಪತ್ತೆಯಾಗಿತ್ತು.

ಮಹಿಳೆ ಸಾವಿಗೆ ಕಾರಣ ತಿಳಿದು ಬಂದಿಲ್ಲ ಆದರೆ ಪೊಲೀಸರು, ಕುಟುಂಬಸ್ಥರು ಕೆಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಮಹಿಳೆಗೆ ಶ್ರವಣದೋಷವಿದ್ದ ಕಾರಣ ಆಕೆ ರೈಲು ಬಂದಿದ್ದೇ ತಿಳಿಯದೆ ರೈಲು ಹರಿದು ಮೃತಪಟ್ಟಿರಬಹುದು ಎಂದು ಪೊಲೀಸರು ಹೇಳಿದ್ದರೆ, ಅದು ಸಹಜ ಸಾವಲ್ಲ ಕೊಲೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಬೆಂಗಳೂರಲ್ಲಿ ರೈಲ್ವೆ ಪ್ರಯಾಣಿಕರ ಮೊಬೈಲ್ ಕದಿಯೋದು ಇವರೇ ನೋಡಿ ಬೆಂಗಳೂರಲ್ಲಿ ರೈಲ್ವೆ ಪ್ರಯಾಣಿಕರ ಮೊಬೈಲ್ ಕದಿಯೋದು ಇವರೇ ನೋಡಿ

ಹತ್ತು ದಿನಗಳ ಹಿಂದೆ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ 30 ವರ್ಷ ಆಸುಪಾಸಿನ ಮಹಿಳೆಯೊಂದರ ಶವ ಪತ್ತೆಯಾಗಿತ್ತು. ಇದೀಗ ಪೊಲೀಸರು ಅವರ ಸಂಬಂಧಿಕರನ್ನು ಪತ್ತೆ ಮಾಡಿದ್ದಾರೆ.

woman dead body found in Railway station

ಪಶ್ಚಿಮ ಬಂಗಾಳ ಮೂಲಕ ಟೀಕಾ ದೇವಿ ಸಹೋದರ ಸಂಬಂಧಿ ಜೊತೆಗೆ ಈಜಿಪುರದಲ್ಲಿ ಕಳೆದ ಕೆಲವು ವರ್ಷಗಳಿಂದ ವಾಸಿಸುತ್ತಿದ್ದರು. ಟೀಕಾ ದೇವಿ ಮೇ 31ರಂದು ನಾಪತ್ತೆಯಾಗಿದ್ದರು. ಕಾಣೆಯಾಗಿ ಒಂದು ದಿನ ಬಳಿಕ ಕುಟುಂದವರು ಪೊಲೀಸರಿಗೆ ದೂರು ನೀಡಿದ್ದರು.

100 ರೈಲುಗಳ ನಿರ್ವಹಿಸುವ ಬೆಂಗಳೂರಿನ ನಿಲ್ದಾಣದಲ್ಲಿ ನೂರಾರು ಸಮಸ್ಯೆ 100 ರೈಲುಗಳ ನಿರ್ವಹಿಸುವ ಬೆಂಗಳೂರಿನ ನಿಲ್ದಾಣದಲ್ಲಿ ನೂರಾರು ಸಮಸ್ಯೆ

ಟೀಕಾ ಸಹೋದರಿ ಮುನ್ನಾ ಹೇಳುವ ಪ್ರಕಾರ ಮೇ 31ರಂದು ಸಂಜೆ 4.30ರ ಸುಮಾರಿಗೆ ಅವರು ಮನೆ ಬಿಟ್ಟಿದ್ದರು.ಮುನ್ನ ಮನೆಗೆ ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಬಂದಿದ್ದಾರೆ. ಅವರ ಬಟ್ಟೆ, ಬ್ರಷ್ ಇನ್ನಿತರೆ ವಸ್ತುಗಳು ಕಾಣೆಯಾಗಿದ್ದವು. ಕೆಲವು ಸಿಸಿ ಕ್ಯಾಮರಾಗಳನ್ನು ವೀಕ್ಷಿಸಿ ಇತರರನ್ನು ವಿಚಾರಿಸಿದಾಗ ಅವರು ಒಬ್ಬರೇ ಬ್ಯಾಂಗ್‌ ಒಂದನ್ನು ಹಿಡಿದುಕೊಂಡು ಓಡಾಡುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಆದರೆ ಅವರ ಕುಟುಂಬದವರು ಹೇಳುವ ಪ್ರಕಾರ ಅವರು ಯಾವತ್ತೂ ಮನೆಯಿಂದ ಹೊರಗೆ ಹೋಗುತ್ತಿರಲಿಲ್ಲ. ಅವರಿಗೆ ಬೆಂಗಳೂರಿನಲ್ಲಿ ಯಾವ ಸ್ನೇಹಿತರೂ ಇಲ್ಲ, ಬೆಂಗಳೂರಲ್ಲಿ ಸರಿಯಾಗಿ ಓಡಾಡಿಯೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಹಳಿಯನ್ನು ಕ್ರಾಸ್ ಮಾಡುವ ವೇಳೆ ಅವರ ಮೇಲೆ ರೈಲು ಹರಿದಿರುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸರ ಅಭಿಪ್ರಾಯವಾಗಿದೆ.

English summary
woman dead body found in Railway station in Baippanahalli, there was no way the woman, who was deaf, could have drifted far from home. They alleged she was murdered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X