ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಮನೆ ಕಟ್ಟಬೇಕು ಎಂದು ಕೊಂಡವರಿಗೆ ಕಹಿಸುದ್ದಿ!

By ಅನಿಲ್ ಬಾಸೂರ್
|
Google Oneindia Kannada News

ಬೆಂಗಳೂರು, ಡಿ. 21: ಮಲೇಶಿಯಾದಿಂದ ಮರಳು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ರಾಜ್ಯ ಬಿಜೆಪಿ ಸರ್ಕಾರ ತೀರ್ಮಾನಿಸಿದೆ. ಅಲ್ಲಿಂದ ಮರಳು ತರಿಸಿಕೊಂಡು ಖಾಸಗಿಯವರಿಗೆ ಮನೆ ಕಟ್ಟಲು ಮಾರಾಟ ಮಾಡುವುದೂ ಸೇರಿದಂತೆ ಸರ್ಕಾರದ ಯೋಜನೆಗಳಿಗೆ ಮರಳು ಬಳಸಿಕೊಳ್ಳಲು ಹಿಂದಿನ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರ ಯೋಜನೆ ಜಾರಿಗೆ ತಂದಿತ್ತು.

ಆದರೆ ಮಲೇಶಿಯಾದಿಂದ ತರುವುದನ್ನು ನಿಲ್ಲಿಸುವ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಿದೆ. ಹಾಗಾಗಿ ಮನೆ ಕಟ್ಟುವವರಿಗೆ ಮರಳು ಕೊರತೆ ಮತ್ತೆ ಕಾಡಲಿದೆ. ಆದರೆ ಸುಲಭವಾಗಿ ಮರಳು ಸಿಗುವಂತೆ ಮಾಡಲು ಸರ್ಕಾರ ಸಮಿತಿ ರಚನೆ ಮಾಡಿದೆ.

ಪರ್ಯಾಯ ವ್ಯವಸ್ಥೆಗೆ ಮುಂದಾದ ಸರ್ಕಾರ

ಪರ್ಯಾಯ ವ್ಯವಸ್ಥೆಗೆ ಮುಂದಾದ ಸರ್ಕಾರ

ಮಲೇಶಿಯಾದಿಂದ ಮರಳು ತರಿಸಿಕೊಳ್ಳುವುದನ್ನು ಇನ್ನುಮುಂದೆ ನಿಲ್ಲಿಸಲಾಗುವುದು ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಮಲೇಶಿಯಾದಿಂದ ಮರಳು ಆಮದು ಮಾಡಿಕೊಳ್ಳುವ ಯೋಜನೆ ವಿಫಲವಾಗಿದೆ. ಹಿಂದಿನ ಸರ್ಕಾರ‌ ಮಲೇಶಿಯಾದಿಂದ ಮರಳು ತರಿಸಿತ್ತು. ಆದರೆ ಮಲೇಶಿಯಾ ಮರಳಿಗೆ ಬೇಡಿಕೆ ಬರುತ್ತಿಲ್ಲ. ಇದಲ್ಲದೆ ಮಲೇಶಿಯಾದಿಂದ ಎಷ್ಟು ಮರಳು ತರಿಸಲಾಗಿತ್ತು, ಎಷ್ಟು ಮಾರಾಟವಾಗಿದೆ ಎಂದ ಮಾಹಿತಿ‌ ಕೂಡ ಇಲ್ಲ. ಆದರೆ ಮನೆಕಟ್ಟುವವರಿಗೆ ಮರಳು ಸುಲಭವಾಗಿ ಸಿಗುವಂತಾಗಲು ವ್ಯವಸ್ಥೆ ಮಾಡುತ್ತಿದ್ದೇವೆ. ಅದಕ್ಕಾಗಿ ಒಂದು ಸಮಿತಿ‌ಯ್ನೂ ರಚಿಸಲಾಗಿದೆ ಎಂದು ಜಗದೀಶ್ ಶೆಟ್ಟರ್ ಮಾಹಿತಿ ಕೊಟ್ಟಿದ್ದಾರೆ.


ಆದರೆ ಶೀಘ್ರವಾಗಿ ಮರಳು ಸುಲಭವಾಗಿ ಸಿಗುವಂತಾಗಲು ಸರ್ಕಾರ ಏನೂ ಮಾಡುತ್ತದೆ. ಯಾವಾಗ ಸಮಿತಿ ವರದಿ ಕೊಡುತ್ತದೆ ಎಂಬುದರ ಮಾಹಿತಿ ಇಲ್ಲ. ಹಾಗಾಗಿ ಹೊಸ ಮನೆ ಕಟ್ಟುವವರಿಗೆ ಮತ್ತೆ ಮರಳಿನ ಕೊರತೆ ಕಾಡಲಿದೆ.

ಶೀಘ್ರ ಸಿಹಿ ಸುದ್ದಿ ಕೊಡುತ್ತೇವೆ ಎಂದರು ಶೆಟ್ಟರ್

ಶೀಘ್ರ ಸಿಹಿ ಸುದ್ದಿ ಕೊಡುತ್ತೇವೆ ಎಂದರು ಶೆಟ್ಟರ್

ಮಹಾದಾಯಿ ಯೋಜನೆ ವಿಚಾರವಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಶೀಘ್ರ ಸಿಹಿಸುದ್ದಿ ಕೊಡುತ್ತೇವೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಹೇಳಿದ್ದಾರೆ. ಯೋಜನೆ ಅನುಷ್ಠಾನದ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಜೊತೆಗೆ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ಪ್ರಕಾಶ್ ಜಾವಡೇಕರ್ ಅವರು ಸಹ ಸಿಹಿಸುದ್ದಿ ಕೊಡ್ತೀವಿ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ, ಗೋವಾ ರಾಜ್ಯದೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಸಮಸ್ಯೆ ಬಗೆಹರಿಸುವ ಬಗ್ಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದು ಜಗದೀಶ್ ಶೆಟ್ಟರ್ ಮಾಹಿತಿ ಕೊಟ್ಟಿದ್ದಾರೆ. ಉಪ ಚುನಾವಣೆಗೋಸ್ಕರ ಪರಿಸರ ಇಲಾಖೆ ಅನುಮತಿ ನೀಡಿತ್ತು ಎಂಬುದು ಸಂಪೂರ್ಣ ಸುಳ್ಳು. ಉಪಚುನಾವಣೆಗಾಗಿ ಕೇಂದ್ರ ಅನುಮತಿ ಕೊಟ್ಟಿರಲಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅನುಮತಿ ಹಿಂದುರುಗಿ ಪಡೆಯಲಾಗಿದೆ ಅಷ್ಟೇ. ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ ನಾಯಕರು ಹೈಡ್ರಾಮಾ ಮಾಡ್ತಿದ್ದಾರೆ

ಕಾಂಗ್ರೆಸ್‌ ನಾಯಕರು ಹೈಡ್ರಾಮಾ ಮಾಡ್ತಿದ್ದಾರೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಪಕ್ಷ ಪ್ರಚೋದನೆ ಮಾಡುತ್ತಿದೆ. ಮಂಗಳೂರಿನಲ್ಲಿ ಪ್ರಕ್ಷುಬ್ದ ಸ್ಥಿತಿಯಿದೆ. ಅಂಥ ಸ್ಥಿತಿಯಲ್ಲಿ ಮತ್ತಷ್ಟು ಪ್ರಚೋದನೆ ಮಾಡಲು ಕಾಂಗ್ರೆಸ್ ನಾಯಕರು ಮಂಗಳೂರಿಗೆ ಹೋಗುತ್ತೇವೆ ಎನ್ನುತ್ತಿದ್ದಾರೆ. ಪ್ರಕ್ಷುಬ್ದ ಸ್ಥಿತಿ‌ ಇರುವಾಗ ಮಂಗಳೂರಿಗೆ ಹೋಗುತ್ತೇವೆ ಎನ್ನುವುದು ಒಳ್ಳೆಯ ವಿರೋಧ ಪಕ್ಷದವರ ಲಕ್ಷಣವಲ್ಲ. ಮಂಗಳೂರಿನಲ್ಲಿ ಕಾಂಗ್ರೆಸ್‌ ನಾಯಕ ಯು. ಟಿ. ಖಾದರ್ ಪ್ರಚೋದಾನಾತ್ಮಕ ಹೇಳಿಕೆ ಕೊಟ್ಟಿದ್ದರಿಂದ ಅಲ್ಲಿ ಸಮಸ್ಯೆ ಆಗಿದೆ. ಕರ್ಫ್ಯೂ ಇದ್ದಾಗ ಹೋಗುತ್ತೇನೆ ಎನ್ನುವುದು ಸರಿಯಲ್ಲ. ನಾನೂ ಕೂಡಾ ವಿಪಕ್ಷ ನಾಯಕನಾಗಿದ್ದೆ. ಪರಿಸ್ಥತಿ ಅರಿತು ವಿಪಕ್ಷದವರು ನಡೆದುಕೊಳ್ಳಬೇಕು ಎಂದು ಶೆಟ್ಟರ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮೊದಲ ಇನ್ವೆಸ್ಟ್ ಕರ್ನಾಟಕ

ಹುಬ್ಬಳ್ಳಿಯಲ್ಲಿ ಮೊದಲ ಇನ್ವೆಸ್ಟ್ ಕರ್ನಾಟಕ

ಕೈಗಾರಿಕಾ ವಲಯಕ್ಕೆ ಏಕರೂಪದ ತೆರಿಗೆ ಹಾಕುವುದರ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಏಕರೂಪ ತೆರಿಗೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ ನಂತರ ತೀರ್ಮಾನ ತೆಗೆದು ಕೊಳ್ಳಲಾಗುವುದು. ಎರಡನೇ ಹಂತದ ನಗರಗಳಿಗೆ ಕೈಗಾರಿಕೆಗಳ ವಿಸ್ತರಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ಎರಡನೇ ಹಂತದ ನಗರಗಳಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ಮಾಡುತ್ತೇವೆ. ಮೊದಲು ಹುಬ್ಬಳ್ಳಿಯಲ್ಲಿ ನಡೆಸಿ ಬಳಿಕ ಇತರ ನಗರಗಳಿಗೆ ಇನ್ವೆಸ್ಟ್ ಕರ್ನಾಟಕ ವಿಸ್ತರಣೆ ಮಾಡಲಾಗುವುದು. ಇನ್ನು ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ, ಫೆಬ್ರುವರಿ ತಿಂಗಳಲ್ಲಿ ಸಮಾವೇಶ ನಡೆಯುವಂತೆ ದಿನಾಂಕ ನಿಗದಿ ಮಾಡುತ್ತೇವೆ ಅಂತಾ ಶೆಟ್ಟರ್ ಮಾಹಿತಿ ಕೊಟ್ಟಿದ್ದಾರೆ.

English summary
Karnataka state government desided lay off sand import from malaysia because lack of demod.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X