ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಐದೇ ದಿನದಲ್ಲಿ ಕೊರೊನಾ ಸೋಂಕಿತರು ದುಪ್ಪಟ್ಟು

|
Google Oneindia Kannada News

ಬೆಂಗಳೂರು, ಜೂನ್ 29: ಕೇವಲ ಐದೇ ದಿನದಲ್ಲಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟು ಹೆಚ್ಚಳವಾಗಿದೆ.

ಜೂನ್ 23 ರಂದು 1556 ಕೊರೊನಾ ಸೋಂಕಿತ ಪ್ರಕರಣಗಳಿದ್ದವು, ಅದೇ ಜೂನ್ 28 ರಂದು ಸೋಂಕಿತರ ಸಂಖ್ಯೆ 3419ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿರುವ ಒಟ್ಟು ಪ್ರಕರಣಗಳಲ್ಲಿ ಶೇ.25.92ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿವೆ.

ಭಾರತದಲ್ಲಿ ಮತ್ತೆ 19,459 ಕೊರೊನಾ ಸೋಂಕಿತರು ಪತ್ತೆಭಾರತದಲ್ಲಿ ಮತ್ತೆ 19,459 ಕೊರೊನಾ ಸೋಂಕಿತರು ಪತ್ತೆ

ಬೆಂಗಳೂರಿನಲ್ಲಿ ಒಟ್ಟು 3314 ಕೊರೊನಾ ಸೋಂಕಿತ ಪ್ರಕರಣಗಳಿವೆ, ಒಂದೇ ದಿನ 789 ಪ್ರಕರಣಗಳು ಪತ್ತೆಯಾಗಿವೆ, 533 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ. 2692 ಪ್ರಕರಣಗಳು ಸಕ್ರಿಯವಾಗಿವೆ. 88 ಮಂದಿ ಮೃತಪಟ್ಟಿದ್ದಾರೆ.

With In Five Days COVID19 Positive Cases Are Doubled In Bengaluru

ರಾಜ್ಯದಲ್ಲಿ ಒಟ್ಟು 13,190 ಕೊರೊನಾ ಸೋಂಕಿತ ಪ್ರಕರಣಗಳಿವೆ. ಆಸ್ಪತ್ರೆಯಿಂದ ಇದುವರೆಗೂ 7507 ಮಂದಿ ಬಿಡುಗಡೆಹೊಂದಿದ್ದಾರೆ. 1267 ಹೊಸ ಪ್ರಕರಣಗಳು ವರದಿಯಾಗಿವೆ. ಇದುವರೆಗೆ ಒಟ್ಟು 207 ಮಂದಿ ಸಾವನ್ನಪ್ಪಿದ್ದಾರೆ. ಭಾನುವಾರ ಒಂದೇ ದಿನ 16 ಮಂದಿ ಸಾವನ್ನಪ್ಪಿದ್ದಾರೆ.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 19,459 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 308 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ ಒಟ್ಟು 16,475 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 5,48,318 ಲಕ್ಷ ತಲುಪಿದೆ. 2,10,120 ಪ್ರಕರಣಗಳು ಸಕ್ರಿಯವಾಗಿವೆ. 3,21,723 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

English summary
Bengaluru had 1556 COVID19 Positive cases as on June 23 which has doubled to 3419 cases as on June 28. Bengaluru now constitutes 25.92% of total cases in Karnataka.State Govt is taking all measures to ensure that every #COVID patient gets best treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X