ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಪ್ರೋ ನೂತನ ಸಿಇಒ ಡೆಲಾಪೋರ್ಟ್ ವೇತನ ಕೇಳಿದ್ರೆ ನೀವು ಬೆರಗಾಗ್ತಿರಾ..!

|
Google Oneindia Kannada News

ಬೆಂಗಳೂರು, ಜೂನ್ 20: ದೇಶದ ಮೂರನೇ ಅತಿ ದೊಡ್ಡ ಸಾಫ್ಟ್‌ವೇರ್ ಸೇವಾ ರಫ್ತು ಸಂಸ್ಥೆಯಾಗಿರುವ ವಿಪ್ರೋ ಇತ್ತೀಚೆಗಷ್ಟೇ ಹೊಸ ಸಿಇಒ ನೇಮಕ ಮಾಡಿಕೊಂಡಿತು. ದೇಶದ ಮೊದಲ ಐಟಿ ಸಂಸ್ಥೆ ವಿದೇಶಿ ಸಿಇಒ ನೇಮಕ ಮಾಡಿಕೊಂಡಿದ್ದು ಸುದ್ದಿಯಾಗಿತ್ತು. ಇದರ ಜೊತೆಗೆ ಆತನ ವೇತನ ಕೇಳಿದ್ರೂ ನೀವು ಆಶ್ಚರ್ಯಗೊಳಗಾಗುತ್ತೀರ.

Recommended Video

ಮೋದಿಗಿಂತ ಮೊದಲೇ ಚೀನಾ ವಿರುದ್ಧ ತೊಡೆತಟ್ಟಿದ್ದ ಕುಮಾರಸ್ವಾಮಿ|HD KumarSwamy |Narendra Modi | Oneindia Kannada

ಸಿಇಒ ಹುದ್ದೆಗೆ ನಿಯೋಜನೆಗೊಂಡಿರುವ ಥಿಯೆರ್ರಿ ಡೆಲಾಪೋರ್ಟ್‌ ಅವರ ವಾರ್ಷಿಕ ವೇತನ ಬರೋಬ್ಬರಿ 40 ಕೋಟಿ ರುಪಾಯಿ ಇರಲಿದೆ. ಇದರ ಜೊತೆಗೆ ಷೇರು ಆದಾಯವು ಅವರಿಗೆ ದೊರೆಯಲಿದ್ದು ಒಟ್ಟಾರೆ 50 ರಿಂದ 62 ಕೋಟಿ ರುಪಾಯಿವರೆಗೂ ಆದಾಯ ಪಡೆಯಲಿದ್ದಾರೆ. ಈ ಮೂಲಕ ಭಾರತದ ಐಟಿ ವಲಯದಲ್ಲಿ ಅತಿ ಹೆಚ್ಚು ವೇತನ ಪಡೆಯುವ ಸಿಇಒ ಆಗಿ ಅವರು ಹೊರಹೊಮ್ಮಲಿದ್ದಾರೆ.

Wipros New Boss Thierry Delaporte

ಜುಲೈ 13ರಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಪ್ರೊ ಷೇರುದಾರರ ವಾರ್ಷಿಕ ಸಭೆ (ಎಜಿಎಂ) ನಡೆಯಲಿದ್ದು, ಈ ಸಂಬಂಧ ಹೊರಡಿಸಲಾದ ನೋಟಿಸ್‌ನಲ್ಲಿ ಥಿಯೆರ್ರಿ ವೇತನದ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.

ವಿಪ್ರೋ ಫೌಂಢೇಶನ್‌ ನಿಂದ ರೇಷನ್‌ ಕಿಟ್‌ ತಯಾರಿಕೆ, ವಿತರಣೆವಿಪ್ರೋ ಫೌಂಢೇಶನ್‌ ನಿಂದ ರೇಷನ್‌ ಕಿಟ್‌ ತಯಾರಿಕೆ, ವಿತರಣೆ

ವಿಪ್ರೊದ ಸಿಇಒ ಮತ್ತು ಎಂಡಿ ಸ್ಥಾನಕ್ಕೆ ಥಿಯೆರ್ರಿ ಅವರನ್ನು ಕಳೆದ ಮೇನಲ್ಲಿ ನೇಮಕ ಮಾಡಲಾಗಿತ್ತು. ಜುಲೈ 6,2020 ರಿಂದ ಆಡಳಿತಾವಧಿ ಆರಂಭವಾಗಲಿದ್ದು, ಜುಲೈ 5, 2025ರವರೆಗೆ ಇರಲಿದ್ದಾರೆ. ಹಿಂದಿನ ಸಿಇಒ ಅಬಿದಾಲಿ ಜೆಡ್‌ ನೀಮೂಚವಾಲಾ ಅವರಿಗೆ ಕಳೆದ ಹಣಕಾಸು ವರ್ಷ 34 ಕೋಟಿ ರೂ. ವಾರ್ಷಿಕ ವೇತನ ನೀಡಲಾಗಿತ್ತು. ಇನ್ಫೋಸಿಸ್‌ನ ಮಾಜಿ ಸಿಇಒ ವಿಶಾಲ್‌ ಸಿಕ್ಕಾಗೆ 45 ಕೋಟಿ ರೂ. ನೀಡಲಾಗಿತ್ತು.

ಪ್ಯಾರಿಸ್ ಮೂಲದ ಥಿಯೆರ್ರಿ ಯುರೋ 0.43-0.55 ಮಿಲಿಯನ್ (ರೂ. 3.65-4.67 ಕೋಟಿ) ವ್ಯಾಪ್ತಿಯಲ್ಲಿ ವಲಸಿಗ ಭತ್ಯೆಯನ್ನು ಪಡೆಯಲಿದ್ದಾರೆ. ಅವರು ವಾರ್ಷಿಕ ಯುರೋ 1.7-2.5 ಮಿಲಿಯನ್ ವ್ಯಾಪ್ತಿಯಲ್ಲಿ ವೇರಿಯಬಲ್ ವೇತನವನ್ನು ಹೊಂದಿರುತ್ತಾರೆ, ಇದು ಸುಮಾರು 21.2 ಕೋಟಿ ರುಪಾಯಿಯಷ್ಟಿದೆ.

English summary
Wipro, India's Third-biggest IT exporter's Chief Executive Officer designate Thierry Delaporte Is India's Highest Paid IT CEO
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X