ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ.6 ದಕ್ಷಿಣ ಭಾರತದ ಮೊದಲ ವೈನ್ ಉತ್ಸವ

By ಶಂಭು, ಹುಬ್ಬಳ್ಳಿ
|
Google Oneindia Kannada News

ಬೆಂಗಳೂರು, ಜನವರಿ, 22: ಪಾರ್ಟಿ ಪ್ರಿಯರೇ, ಪಾರಂಪರಿಕ ವೈನ್ ಗಳ ರುಚಿ ಸವಿಯಬೇಕೇ? ಮಸ್ತಾಗಿ ವೈನ್ ಕುಡಿದು, ಕುಣಿದು ಕುಪ್ಪಳಿಸಬೇಕೇ? ಹಾಗಾದರೆ ನಗರದಲ್ಲಿ ನಡೆಯುವ ವೈನ್ ಉತ್ಸವದಲ್ಲಿ ಪಾಲ್ಗೊಳ್ಳಿ. ನಿಮ್ಮ ಇಷ್ಟ ಪೂರೈಸಿಕೊಳ್ಳಿ.

ವೈನ್ ಉತ್ಸವವು ನಗರದ ಹೆಬ್ಬಾಳ ಭಾರ್ತಿಯಾ ಸಿಟಿಯಲ್ಲಿ ಫೆಬ್ರವರಿ 6ರಂದು ಜರುಗಲಿದ್ದು, ದಕ್ಷಿಣ ಭಾರತದ ಮೊದಲ ವೈನ್ ಉತ್ಸವ ಖ್ಯಾತಿಗೂ ಇದು ಪಾತ್ರವಾಗಿದೆ. ಈವೆಂಟ್ ಕ್ಯಾಪಿಟಲ್, ಇನ್ವಿಷನ್ ಮತ್ತು ಓರಿಜೆನ್ ಗ್ರೋವರ್ ಝಂಪಾ ವಿನೆಯಾಡ್ಸರ್ಸ್ ಸಹಯೋಗದಲ್ಲಿ ಗ್ರೇಟ್ ಗ್ರೋವರ್ ವೈನ್ ಉತ್ಸವ 2ನೇ ಬಾರಿ ನಡೆಯಲಿದೆ.[ಮಕ್ಕಳ ಕೈಯಲ್ಲಿ ಮದ್ಯ ಸಿಕ್ಕರೆ ಬಾರ್ ಮಾಲೀಕರಿಗೆ ಜೈಲೂಟ]

Wine festival event to be held in Bengaluru

ಕಳೆದ ವರ್ಷ ಆರಂಭವಾದ ಈ ವೈನ್ ಉತ್ಸವದಲ್ಲಿ ಏಕಕಾಲದಲ್ಲಿ ನಾನಾ ವೈನ್ ಗಳನ್ನು ಕುಡಿಯಬಹುದು. ಇದರ ಜೊತೆಗೆ ಊಟದ ಪ್ರೇಮಿಗಳಿಗೆ ಸಖತ್ ಊಟ ಕೂಡ ಲಭಿಸುತ್ತದೆ. ಸಂಗೀತ, ಲೈವ್ ಕರೋಕೆ, ಕಲೆ ಮತ್ತು ಶಿಲ್ಪಕಲಾ ಗ್ಯಾಲರಿ, ಫ್ಲೀ ಮಾಕರ್ಟ್ ಮತ್ತಿತರೆ ವಿಶೇಷ ಮನರಂಜನಾ ಕಾರ್ಯಕ್ರಮಗಳ ಅನುಭವ ಪಡೆಯಬಹುದು ಎಂದು ವೈನ್ ಉತ್ಸವ ವ್ಯವಸ್ಥಾಪಕ ಅಧಿಕಾರಿ ತಿಳಿಸಿದರು.

ಬೆಂಗಳೂರಿನ ಕಲಾವಿದರಾದ ಲಗೋರಿ, ಆಭಾ ಹಂಜುರಾ-ಸೂಫಿಸ್ಟಿಕೇಷನ್, ಕಾತರ್ಕ್ ಅಯ್ಯರ್ ಲೈವ್, ಅನಂತ್ ಮೆನನ್ ಅಂಡ್ ಟ್ರಯೊ, ವಂಶಿಧರ್ ಭೋಗರಾಜು ಅವರಿಂದ ಪ್ರದರ್ಶನ, ಸಬ್ರಿನಾ ಅವರ ಕರೋಕೆ ಮತ್ತು ಪ್ರಖ್ಯಾತ ಡಿಜೆ-ಡಿಜೆ ಇವಾನ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.[ಕುಡುಕ ಗಂಡ ಬೇಡ ಎಂದು ಹಸೆಮಣೆ ಬಿಟ್ಟು ಎದ್ದೇಬಿಟ್ಟ ವಧು]

ಇಲ್ಲಿ ದ್ರಾಕ್ಷಿ ತುಳಿದು ವೈನ್ ತಯಾರಿಸುವ ಹಳೆಯ ಸಂಪ್ರದಾಯವನ್ನು ಅನುಭವಿಸಬಹುದು. ವಿಜಯ್ ಅಮೃತ್ರಾಜ್ ರಿಸರ್ವ್ ಕಲೆಕ್ಷನ್, ಲಾ ರಿಸರ್ವ್, ಚೆನೆ ಗ್ರಾಂಡ್ ರಿಸರ್ವ್ ಆಟರ್ ಕಲೆಕ್ಷನ್ ಮತ್ತು ಪ್ರೀಮಿಯಂ ಸ್ಪಾಕ್ಲರ್ಗ್ ವೈನ್ಸ್ ಸಾಯ್ರೀ ಬ್ರಟ್ ಮತ್ತು ಬ್ರಟ್ ರೋಸ್ ಸವಿಯುವ ಅಪರೂಪದ ಅವಕಾಶ ಇಲ್ಲಿದೆ ಎಂದು ಸುಮೇಧ್ ಸಿಂಗ್ ಮಂಡ್ಲ ಹೇಳಿದರು.

English summary
Wine festival event to be held in Hebbal, Bengaluru, on February 06th. Its good opportunity for wine lovers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X