• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ದಯ್ಯ ರಸ್ತೆ ವೈಟ್ ಟ್ಯಾಪಿಂಗ್, ವಿಲ್ಸನ್ ಗಾರ್ಡನ್ ಟ್ರಾಫಿಕ್ ಬದಲಿ ಮಾರ್ಗ

|

ಬೆಂಗಳೂರು ನಗರ ವ್ಯಾಪ್ತಿಯ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ವಿಲ್ಸನ್‍ಗಾರ್ಡನ್ (ಸಿದ್ದಯ್ಯ ರಸ್ತೆ) 1ನೇ ಕ್ರಾಸ್‍ನಿಂದ 11 ನೇ ಕ್ರಾಸ್‍ವರೆಗಿನ ರಸ್ತೆಯಲ್ಲಿ ವೈಟ್ ಟಾಪಿಂಗ್ ಮಾಡುವ ಮೂಲಕ ಸದರಿ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಯಾಗಿ ನಿರ್ಮಿಸಲಾಗುತ್ತಿದೆ.

ಆದ್ದರಿಂದ ವಿಲ್ಸನ್‍ಗಾರ್ಡನ್ (ಸಿದ್ದಯ್ಯ ರಸ್ತೆ) ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಿಲ್ಸನ್‍ಗಾರ್ಡನ್ (ಸಿದ್ದಯ್ಯ ರಸ್ತೆ) ರಸ್ತೆಯಲ್ಲಿ ಸಾಗುವ ವಾಹನಗಳನ್ನು ಬಿಟಿಎಸ್ ರಸ್ತೆಯಲ್ಲಿ ಹಾಗೂ ಹೊಸೂರು ರಸ್ತೆಯಿಂದ ಬರುವ ವಾಹನಗಳು ಡಾ. ಮರೀಗೌಡ ರಸ್ತೆಯಲ್ಲಿ ಸಂಚರಿಸುವಂತೆ ಕಾಮಗಾರಿ ನಡೆಯುವಾಗ ಸಿದ್ದಯ್ಯ ರಸ್ತೆಯಲ್ಲಿ ಸಾಗುವ ವಾಹನಗಳನ್ನು ಕೆ.ಹೆಚ್. ರಸ್ತೆಯ ಮೂಲಕ ಡಾ. ಮರೀಗೌಡ ರಸ್ತೆಗೆ ಸಂಚರಿಸುವಂತೆ ಪಥ ಬದಲಾವಣೆ ಮಾಡಲಾಗಿರುತ್ತದೆ.

ಚಂದ್ರಯಾನಕ್ಕಿಂತ ದುಬಾರಿಯಾದ ಬೆಂಗಳೂರು ವೈಟ್ ಟಾಪಿಂಗ್ ರಸ್ತೆಗಳು

ವಿಲ್ಸನ್‍ಗಾರ್ಡನ್ (ಸಿದ್ದಯ್ಯ) ರಸ್ತೆಯಲ್ಲಿ ಕಾಮಗಾರಿ ನಡೆಯುವಾಗ (1ನೇ ಕ್ರಾಸ್‍ನಿಂದ 11 ನೇ ಕ್ರಾಸ್‍ವರೆಗೆ) ಸಿದ್ದಯ್ಯ ರಸ್ತೆಯಲ್ಲಿ (ವಿಲ್ಸನ್ ಗಾರ್ಡನ್ ಮುಖ್ಯರಸ್ತೆ) ಸಾಗುವ ಎಲ್ಲಾ ರೀತಿಯ ವಾಹನಗಳು ಕೆ.ಹೆಚ್. ಜಂಕ್ಷನ್ - ಕೆ.ಹೆಚ್. ವೃತ್ತದ ಮೂಲಕ ಹಾಗೂ ಲಘು ವಾಹನಗಳು ಬಿ.ಎಂ.ಟಿ.ಸಿ. ಜಂಕ್ಷನ್‍ನಲ್ಲಿ ಬಲತಿರುವು ಪಡೆದುಕೊಂಡು ಬಿ.ಟಿ.ಎಸ್. ರಸ್ತೆಯ ಮೂಲಕ ಸಂಚರಿಸುವುದು.

   Political Popcorn with Lavanya : Dr BL Shankar, ಈಗ ಆಗಿರೋದೆ ಸಾಕು ಇನ್ಮೇಲೆ ಚುನಾವಣೆಗೆ ನಿಲ್ಲಲ್ಲಾ!?! Part2

   ಡಾ. ಮರೀಗೌಡ ರಸ್ತೆಯಿಂದ 10ನೇ ಕ್ರಾಸ್‍ನಲ್ಲಿ ಬಲ ತಿರುವು ಪಡೆದುಕೊಂಡು ಸಿದ್ದಯ್ಯ ರಸ್ತೆಗೆ ಬರುವ ಬಸ್ಸುಗಳು ಹಾಗೂ ಬಾರೀ ವಾಹನಗಳು ಡಾ. ಮರೀಗೌಡ ರಸ್ತೆಯಲ್ಲಿ ಸಿದ್ದಾಪುರ ಜಂಕ್ಷನ್- ಕೆ.ಹೆಚ್. ವೃತ್ತದ ಮೂಲಕ ಬಲತಿರುವು ಪಡೆದುಕೊಂಡು ಶಾಂತಿನಗರ ಬಸ್ ನಿಲ್ದಾಣಕ್ಕೆ ಸಂಚರಿಸುವುದು. ಸಿದ್ದಯ್ಯ ರಸ್ತೆಯಲ್ಲಿ ಸಂಚರಿಸಲು ಬರುವ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ಕೆ.ಹೆಚ್. ರಸ್ತೆ ಹಾಗು ಡಾ. ಮರೀಗೌಡ ರಸ್ತೆಯಲ್ಲಿ ಸಂಚರಿಸುವುದು ಎಂದು ಸಂಚಾರಿ ವಿಭಾಗದ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   English summary
   Wilson Garden Traffic diversion updates: Siddaiah Road is undergoing white topping so, Traffic diversion from Wilson Garden 1st cross to 11 cross is implemented.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X