ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಸಬ್‌ಅರ್ಬನ್ ರೈಲ್ವೆ ಯೋಜನೆಗೆ ಮತ್ತಷ್ಟು ವೇಗ: ಗೋಯಲ್

|
Google Oneindia Kannada News

ಬೆಂಗಳೂರು,ಫೆಬ್ರವರಿ 16: ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಚುರುಕುಗೊಳಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಬೆಂಗಳೂರನ್ನು ಪರಿವರ್ತಿಸುವ ಹಾಗೂ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸಲು ಸಹಾಯ ಮಾಡುವ ಉಪನಗರ ರೈಲ್ವೆ ಯೋಜನೆಯನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಇತರೆ ಪಾಲುದಾರರೊಂದಿಗೆ ಸಮನ್ವಯದಿಂದ ಕೆಲಸ ಮಾಡಬೇಕಿದೆ.

ಶಿವಮೊಗ್ಗದ ಮೂರು ರೈಲ್ವೆ ಮೇಲ್ಸೇತುವೆ ಕಾಮಗಾರಿಗಳಿಗೆ ಚಾಲನೆಶಿವಮೊಗ್ಗದ ಮೂರು ರೈಲ್ವೆ ಮೇಲ್ಸೇತುವೆ ಕಾಮಗಾರಿಗಳಿಗೆ ಚಾಲನೆ

ಬೆಂಗಳೂರು ಸಾಕಷ್ಟು ಮಂದಿಗೆ ಉದ್ಯೋಗವನ್ನು ನೀಡಿದೆ.ಮತ್ತು ಉತ್ತಮ ಸಾರಿಗೆ ಸೌಲಭ್ಯಗಳಿಗೆ ಅರ್ಹವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಯೋಜನೆಗಳು ರೂಪುಗೊಳ್ಳುವುದನ್ನು ಬೆಂಗಳೂರಿನ ಜನರು ನೋಡುತ್ತಾರೆ ಎಂದರು.

Will Speed Up Bengaluru Suburban Railway Project: Piyush Goyal

2014ಕ್ಕಿಂತ ಮೊದಲು ಕರ್ನಾಟಕದಲ್ಲಿ ಸರಾಸರಿ 1 ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ ಎಂದರು. ಆದಾಗ್ಯೂ,ಪ್ರಸ್ತುತ ಬಜೆಟ್‌ 2021-22ರಲ್ಲಿ ಕರ್ನಾಟಕಕ್ಕೆ ಮೀಸಲಿಟ್ಟ ಹಣ ಸುಮಾರು 4 ಸಾವಿರ ಕೋಟಿ, ಇದು 7 ವರ್ಷಗಳಲ್ಲಿ ಶೇ.400ರಷ್ಟು ಬೆಳವಣಿಗೆಯಾದಂತಾಗಿದೆ ಎಂದು ಹೇಳಿದರು.

ಉಪನಗರ ರೈಲು ಯೋಜನೆಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಿಂದ ಅನುಮೋದನೆ ಸಿಗದಿದ್ದರೂ ಕೆ - ರೈಡ್‌ ಸಂಸ್ಥೆಯು ಸಿದ್ಧತೆಗಳನ್ನು ಮುಂದುವರಿಸಿದೆ. ರೈಲು ಮಾರ್ಗ ಹಾದು ಹೋಗಲಿರುವ ಕಡೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಸರ್ವೆ ಪ್ರಕ್ರಿಯೆ ಆರಂಭಿಸಲಾಗಿದೆ.

Recommended Video

ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನದ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ | Oneindia Kannada

ಉಪನಗರ ರೈಲು ಯೋಜನೆಗೆ ರೈಲ್ವೆ ಮಂಡಳಿಯ ಒಪ್ಪಿಗೆ ಸಿಕ್ಕಿದ್ದರೂ ಆರ್ಥಿಕ ವ್ಯವಹಾರಗಳ ಸಮಿತಿಯ ಒಪ್ಪಿಗೆ ದೊರೆಯದೆ ಅನುಷ್ಠಾನ ವಿಳಂಬವಾಗಿದೆ. ಯೋಜನೆ ಜಾರಿಯ ಹೊಣೆ ಹೊತ್ತಿರುವ ಕೆ - ರೈಡ್‌ ಸಂಸ್ಥೆ ಒಟ್ಟು ಅನುದಾನದಲ್ಲಿ ಶೇ.60 ರಷ್ಟು ಬಾಹ್ಯ ಸಂಸ್ಥೆಗಳಿಂದ ತರುವ ಪ್ರಯತ್ನದಲ್ಲಿದೆ. ಮೆಟ್ರೋ ಯೋಜನೆ ಜಾರಿಗೊಳಿಸುವ ತಂಡದ ಮಾದರಿಯಲ್ಲಿ ತಜ್ಞರ ತಂಡವನ್ನು ರೂಪಿಸಲಾಗುತ್ತದೆ.

English summary
Railway Minister Piyush Goyal said the Bengaluru suburban railway project will be sped up. The minister was speaking after virtually launching works for three ROBs in Shivamogga and Bhadravathi on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X