ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಟಿಬಿ ಗೆದ್ದರೆ 24 ಗಂಟೆಯಲ್ಲೇ ಸಚಿವ: ಯಡಿಯೂರಪ್ಪ

|
Google Oneindia Kannada News

Recommended Video

ಎಂಟಿಬಿ ಗೆ ಬಂಪರ್ ಆಫರ್ ಕೊಟ್ಟ ಯಡಿಯೂರಪ್ಪ | Oneindia Kannada

ಹೊಸಕೋಟೆ, ನವೆಂಬರ್ 19: ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದಿರುವ ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸಿದರೆ 24 ಗಂಟೆಯೊಳಗೆ ಅವರನ್ನು ಸಚಿವರನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.

ಹೊಟಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಂಟಿಬಿ ನಾಗರಾಜ್ ಅವರ ಪರ ಸೋಮವಾರ ಪ್ರಚಾರ ನಡೆಸಿದ ಯಡಿಯೂರಪ್ಪ, ಉಪ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿದರೆ ಕೂಡಲೇ ಮಂತ್ರಿಯನ್ನಾಗಿ ಮಾಡುವುದಾಗಿ ಜನರಿಗೆ ಭರವಸೆ ನೀಡಿದರು.

ಬಿಜೆಪಿಗೆ ಆಘಾತ: ಸಂಸದ ಬಿ.ಎನ್.ಬಚ್ಚೇಗೌಡ ರಾಜೀನಾಮೆಗೆ ಸಜ್ಜು?ಬಿಜೆಪಿಗೆ ಆಘಾತ: ಸಂಸದ ಬಿ.ಎನ್.ಬಚ್ಚೇಗೌಡ ರಾಜೀನಾಮೆಗೆ ಸಜ್ಜು?

ಹೊಟಕೋಟೆಯನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಎಂಟಿಬಿ ನಾಗರಾಜ್ ಅವರ ಪರಿಶ್ರಮದಿಂದ ಹೊಸಕೋಟೆ ಕ್ಷೇತ್ರ ಅಭಿವೃದ್ಧಿ ಆಗಲಿದೆ. ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಎಂಟಿಬಿ ನಾಗರಾಜ್. ಎಂಟಿಬಿ ಅವರಿಗೆ ಮುಸ್ಲಿಂ ಮತ್ತು ಅಲ್ಪಸಂಖ್ಯಾತ ಮತದಾರರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ವಾಪಸ್ ಸೇರಿಸಿಕೊಳ್ಳುವುದಿಲ್ಲ

ವಾಪಸ್ ಸೇರಿಸಿಕೊಳ್ಳುವುದಿಲ್ಲ

ಬಿಜೆಪಿಯಿಂದ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶರತ್ ಬಚ್ಚೇಗೌಡ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಪಕ್ಷಕ್ಕೆ ದ್ರೋಹ ಎಸಗಿದವರನ್ನು ಉಚ್ಚಾಟನೆ ಮಾಡಲಾಗಿದೆ. ಶರತ್ ಬಚ್ಚೇಗೌಡ ಅವರನ್ನು ಯಾವ ಕಾರಣಕ್ಕೂ ಮತ್ತೆ ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎದೆ ಕೊಯ್ದುಕೊಂಡ ಅಭಿಮಾನಿ

ಎದೆ ಕೊಯ್ದುಕೊಂಡ ಅಭಿಮಾನಿ

ಸೋಮವಾರ ಎಂಟಿಬಿ ನಾಗರಾಜ್ ಅವರು ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ವೇಳೆ ಮೆರವಣಿಗೆಯಲ್ಲಿ ಹೋಗುತ್ತಿದ್ದ ಅವರ ಅಭಿಮಾನಿಯೊಬ್ಬ ಎದೆ ಭಾಗಕ್ಕೆ ಚುಚ್ಚಿಕೊಂಡ ಘಟನೆ ನಡೆಯಿತು. ನಮ್ಮಣ್ಣ ನಾಗರಾಜ್ ಅವರಿಗೆ ಪ್ರಾಣವನ್ನೇ ಕೊಡುತ್ತೇನೆ ಎಂದು ಎದೆಗೆ ಹರಿತವಾದ ಆಯುಧದಿಂದ ಚುಚ್ಚಿಕೊಂಡಿದ್ದಾರೆ. ಅವರ ಕೈಯಲ್ಲಿದ್ದ ಆಯುಧವನ್ನು ಕಸಿದುಕೊಂಡ ಕಾರ್ಯಕರ್ತರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಗಲೇ ವಿಪರೀತ ರಕ್ತ ಸೋರಿಕೆಯಾಗಿತ್ತು.

ಸಿದ್ದರಾಮಯ್ಯಗೆ ಎಂಟಿಬಿ ನಾಗರಾಜ್ ಬಹಿರಂಗ ಸವಾಲುಸಿದ್ದರಾಮಯ್ಯಗೆ ಎಂಟಿಬಿ ನಾಗರಾಜ್ ಬಹಿರಂಗ ಸವಾಲು

ಮೋಸ ಮಾಡಿದರೆ ದೇವರು ಮೆಚ್ಚೊಲ್ಲ

ಮೋಸ ಮಾಡಿದರೆ ದೇವರು ಮೆಚ್ಚೊಲ್ಲ

ಎಂಟಿಬಿ ಅವರು ಹೊಸಕೋಟೆ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದರು. ಅಭಿವೃದ್ಧಿಗಾಗಿ ಎಂಟಿಬಿ ನಾಗರಾಜ್ ಪತ್ರ ರವಾನಿಸಿದರೆ ಕುಮಾರಸ್ವಾಮಿ ಅದನ್ನು ವಾಪಸ್ ಕಳುಹಿಸುತ್ತಿದ್ದರು. ಇದರಿಂದ ಬೇಸರಗೊಂಡು ಎಂಟಿಬಿ ರಾಜೀನಾಮೆ ನೀಡಿದರು. ಈ ಸರ್ಕಾರ ರಚನೆಗೆ ಯಾರಾದರೂ ಕಾರಣವಾಗಿದ್ದರೆ ಅದು ಎಂಟಿಬಿ ನಾಗರಾಜ್. ಇಂತಹವರಿಗೆ ಮೋಸ ಮಾಡಿದರೆ ದೇವರು ಮೆಚ್ಚುತ್ತಾನಾ? ಅವರಿಗೆ ದ್ರೋಹ ಮಾಡಿದರೆ ನಿಮಗೆ ಒಳ್ಳೆಯದಾಗೊಲ್ಲ ಎಂದು ಸಚಿವ ಆರ್ ಅಶೋಕ್, ಪರೋಕ್ಷವಾಗಿ ಶರತ್ ಬಚ್ಚೇಗೌಡ ವಿರುದ್ಧ ಹರಿಹಾಯ್ದರು.

ಜೆಡಿಎಸ್ ಶಾಸಕರಿಗೆ ಮಾತ್ರ ಕೊಟ್ಟರು

ಜೆಡಿಎಸ್ ಶಾಸಕರಿಗೆ ಮಾತ್ರ ಕೊಟ್ಟರು

ಹೊಸಕೋಟೆ ತಾಲ್ಲೂಕಿನಲ್ಲಿ 20 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಹೀಗಾಗಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕುಮಾರಸ್ವಾಮಿ ಅವರ ಬಳಿ ಕೈಮುಗಿದು ಪರಿಪರಿಯಾಗಿ ಬೇಡಿಕೊಂಡರೂ ಕೊಡಲಿಲ್ಲ. ಜೆಡಿಎಸ್ ಶಾಸಕರಿಗೆ ಮಾತ್ರ ಕೊಟ್ಟರು ಎಂದು ಎಂಟಿಬಿ ನಾಗರಾಜ್ ಆರೋಪಿಸಿದರು. ಎಂಟಿಬಿಗೆ ನಾನು ಚುನಾವಣೆ ಟಿಕೆಟ್ ಕೊಡಿಸಿದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ನಾನು ಕಾಂಗ್ರೆಸ್ ಸೇರಿದಾಗ ಸಿದ್ದರಾಮಯ್ಯ ಇನ್ನೂ ಜೆಡಿಎಸ್‌ನಲ್ಲಿಯೇ ಇದ್ದರು ಎಂದ ಎಂಟಿಬಿ, ಯಡಿಯೂರಪ್ಪ ಅವರು ತಾರತಮ್ಯ ಮಾಡದೆ ಅನುದಾನ ನೀಡುವ ರಾಜ್ಯದ ಧೀಮಂತ ಮುಖ್ಯಮಂತ್ರಿ ಎಂದು ಕೊಂಡಾಡಿದರು.

ಎಂಟಿಬಿ ಎದೆಯಲ್ಲಿ ಈಗ ನಾನಿಲ್ಲ ಯಡಿಯೂರಪ್ಪ ಇದಾನೆ: ಸಿದ್ಧರಾಮಯ್ಯಎಂಟಿಬಿ ಎದೆಯಲ್ಲಿ ಈಗ ನಾನಿಲ್ಲ ಯಡಿಯೂರಪ್ಪ ಇದಾನೆ: ಸಿದ್ಧರಾಮಯ್ಯ

English summary
Chief Minister BS Yediyurappa in Hoskote on Monday said that, he will make MTB Nagaraj as minister in 24 hours after he won by elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X