ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

6 ತಿಂಗಳು ಓಲಾ ನಿಷೇಧ, ಕಂಪನಿ ಹಾಗೂ ಸಾರಿಗೆ ಇಲಾಖೆ ವಾದವೇನು?

|
Google Oneindia Kannada News

ಬೆಂಗಳೂರು, ಮಾರ್ಚ್ 23: ಆರು ತಿಂಗಳ ಅವಧಿಗೆ ಓಲಾ ಕ್ಯಾಬ್ ಸಂಚಾರಕ್ಕೆ ನೀಡಿರುವ ಪರವಾನಗಿ ರದ್ದುಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಹಾಗಾದರೆ ಓಲಾ ಕಂಪನಿ ಇದಕ್ಕೆ ಏನು ಹೇಳುತ್ತೆ ಎನ್ನುವುದನ್ನು ನೋಡೋಣ..

ಸಾರಿಗೆ ಇಲಾಖೆಯು ಓಲಾ ಸೇವೆ ನಿಷೇಧಿಸಿದ ಬಳಿಕ ನೇರವಾಗಿ ಸಾರಿಗೆ ಇಲಾಖೆ ಜೊತೆಗೆ ನಾವು ಮಾತನಾಡುತ್ತೇವೆ ಎಂದು ಓಲಾ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಓಲಾಗೆ ಹೊಡೆತ! ಆರು ತಿಂಗಳು ಕರ್ನಾಟಕದಲ್ಲಿ ಕ್ಯಾಬ್ ನಿಷೇಧ ಓಲಾಗೆ ಹೊಡೆತ! ಆರು ತಿಂಗಳು ಕರ್ನಾಟಕದಲ್ಲಿ ಕ್ಯಾಬ್ ನಿಷೇಧ

ನಾವು ಅವರ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದೇವೆ ಆದರೂ ಸಾರಿಗೆ ಇಲಾಖೆ ಏಕೆ ಹೀಗೆ ಮಾಡಿದೆ ತಿಳಿದಿಲ್ಲ ನೇರವಾಗಿ ಚರ್ಚಿಸುತ್ತೇವೆ ಎಂದಿದ್ದಾರೆ.

ರಾಜ್ಯ ಸಾರಿಗೆ ಇಲಾಖೆಯು ಮಾರ್ಚ್ 18ರಂದು ನೋಟಿಸ್ ಜಾರಿಮಾಡಿದೆ. ಓಲಾ ಕಂಪನಿಯು ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜಿ ಅಗ್ರಿಗೇಟರ್ ರೂಲ್ಸ್ 2016ರನ್ನು ಉಲ್ಲಂಘಿಸಿದೆ.

Will address concerns with officials, says Ola

ಬಿಳಿ ನಾಮಫಲಕದ ವಾಹನಗಳನ್ನು ಬಾಡಿಗೆ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಆದರೆ, ಓಲಾ ಸಂಸ್ಥೆ ಈ ನಿಯಮವನ್ನು ಕಡೆಗಣಿಸಿ ಬಿಳಿ ನಾಮಫಲಕದ ವಾಹನಗಳನ್ನು ಕೂಡ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿತ್ತು ಎಂದು ತಿಳಿಸಿದೆ. ಅಗ್ರಿಗೇಟರ್ ನಿಯಮದ 11(1)ಸೆಕ್ಷನ್ ಪ್ರಕಾರ ಆರು ತಿಂಗಳ ಕಾಲ ಓಲಾ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಾರಿಗೆ ಆಯುಕ್ತ ವಿಪಿ ಇಕ್ಕೇರಿ ತಿಳಿಸಿದ್ದಾರೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಓಲಾ ಕಂಪನಿಯವರು ಬೈಕ್, ಟ್ಯಾಕ್ಸಿ,ಆಟೋಗಳನ್ನು ಅಕ್ರಮವಾಗಿ ಚಲಾಯಿಸುತ್ತಿದ್ದಾರೆ. ಹಲವು ಬಾರಿ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಓಲಾ ಕಂಪನಿಗೆ ಫೆಬ್ರವರಿ 15ರಂದು ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.

ಓಲಾ ಅದಕ್ಕೆ ಮಾರ್ಚ್ 5ರಂದು ಪ್ರತಿಕ್ರಿಯೆ ನೀಡಿತ್ತು. ಆದರೆ ಆ ಪ್ರತಿಕ್ರಿಯೆಯಿಂದ ಸಾರಿಗೆ ಇಲಾಖೆಗೆ ತೃಪ್ತಿಯಾಗಿಲ್ಲ. ಹಾಗಾಗಿ ಆರು ತಿಂಗಳ ಕಾಲ ಓಲಾ ಸೇವೆಯನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.

English summary
After the transport department suspended Ola’s licence for six months, the cab aggregator, in a statement, said: “We look forward to addressing these concerns directly with state officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X