ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವನ್ಯಜೀವಿಗಳ ಕಳ್ಳಸಾಗಣೆ; ಮಹಿಳೆ ಸೇರಿ ಏಳು ಮಂದಿ ಬಂಧನ

ಅಕ್ರಮವಾಗಿ ಪ್ರಾಣಿಗಳನ್ನು ಸಾಗಣೆ ಮಾಡುತ್ತಿದ್ದ ಏಳು ಮಂದಿಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕಳ್ಳಸಾಗಣೆ ಮಾಡುತ್ತಿದ್ದ ಪ್ರಾಣಿಗಳೆಷ್ಟು ಗೊತ್ತೆ...? ಮುಂದೆ ಓದಿ.

|
Google Oneindia Kannada News

ಬೆಂಗಳೂರು, ಜನವರಿ. 30: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ವನ್ಯಜೀವಿ ಸಾಗಾಣಿಕೆಯಲ್ಲಿ ತೊಡಗಿದ್ದ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.

ಬೆಂಗಳೂರು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮಹಿಳೆ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಕಂದಾಯ ಗುಪ್ತಚರ ನಿರ್ದೇಶನಾಲಯದ ಪ್ರಕಾರ, ಜನವರಿ 22 ರಂದು, ಥಾಯ್ಲೆಂಡ್‌ನ ಬ್ಯಾಂಕಾಕ್‌ನಿಂದ ಬಂದ ಮೂವರನ್ನು ಪ್ರಾಣಿಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಸುಳಿವು ಆಧರಿಸಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಈ ಬಂಧಿತರ ವಿಚಾರಣೆಯಲ್ಲಿ ಸಿಕ್ಕ ಮಾಹಿತಿ ಆಧರಿಸಿ ಇನ್ನೂ ನಾಲ್ವರನ್ನು ಬಂಧಿಸಲಾಗಿದೆ.

Wildlife Tafficking: Seven Persons Arrested At Bengaluru Airport

ಈವರೆಗೆ ಏಳು ಮಂದಿಯನ್ನು ಬಂಧಿಸಲಾಗಿದ್ದು, ಬಂಧಿತರಿಂದ ಒಟ್ಟು 18 ಪ್ರಾಣಿಗಳನ್ನು ವಸಪಡಿಸಿಕೊಳ್ಳಲಾಗಿದೆ. ಇದರಲ್ಲಿ ನಾಲ್ಕು ಪ್ರಾಣಿಗಳು ಮತ್ತು 14 ಸರೀಸೃಪಗಳಿದ್ದು, ಇವುಗಳನ್ನು ಪ್ರಯಾಣಿಕರಾಗಿ ಬಂದಿದ್ದ ಆರೋಪಿಗಳು ತಮ್ಮ ಸಾಮಾನು ಸರಂಜಾಮುಗಳಲ್ಲಿ ಪೆಟ್ಟಿಗೆಗಳಲ್ಲಿ ಮರೆಮಾಡಿದ್ದರು ಎಂದು ಡಿಆರ್‌ಐ ತಿಳಿಸಿದೆ.

"ನಿರ್ದಿಷ್ಟ ಗುಪ್ತಚರ ಮಾಹಿತಿಮೇಲೆ ಕಾರ್ಯನಿರ್ವಹಿಸಿದ ಡಿಆರ್‌ಐ ಅಧಿಕಾರಿಗಳು ಜನವರಿ 22 ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಆಗಮಿಸಿದ ಮಹಿಳಾ ಪ್ರಯಾಣಿಕರು ಸೇರಿದಂತೆ ಮೂವರು ಪ್ರಯಾಣಿಕರನ್ನು ಬಂಧಿಸಿದ್ದರು. ಕರ್ನಾಟಕ ಅರಣ್ಯ ಇಲಾಖೆ (ಕೆಎಫ್‌ಡಿ) ಅಧಿಕಾರಿಗಳ ನೆರವಿನೊಂದಿಗೆ ಸ್ಥಳೀಯವಲ್ಲದ 18 ಪ್ರಾಣಿಗಳನ್ನು (ನಾಲ್ಕು ಸಸ್ತನಿಗಳು ಮತ್ತು 14 ಸರೀಸೃಪಗಳು) ವಶಪಡಿಸಿಕೊಳ್ಳಲಾಗಿದೆ. 1962 ರ ಕಸ್ಟಮ್ಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಡಿಆರ್‌ಐ ಹೇಳಿಕೆ ನೀಡಿದೆ.

Wildlife Tafficking: Seven Persons Arrested At Bengaluru Airport

ಅಧಿಕಾರಿಗಳು ವಶಪಡಿಸಿಕೊಂಡಿರುವ ಪ್ರಾಣಿಗಳಲ್ಲಿ ಹಳದಿ ಮತ್ತು ಹಸಿರು ಅನಕೊಂಡ, ಹಳದಿ ತಲೆಯ ಅಮೆಜಾನ್ ಗಿಳಿ, ನೈಲ್ ಮಾನಿಟರ್, ರೆಡ್ ಫೂಟ್ ಆಮೆ,, ಹೆಬ್ಬಾವುಗಳು, ಅಲಿಗೇಟರ್ ಗಾರ್, ಯಾಕಿ ಮಂಕಿ, ವೇಲ್ಡ್ ಗೋಸುಂಬೆ, ರಕೂನ್ ಡಾಗ್, ಬಿಳಿ ತಲೆಯ ಪೈನ್‌ಗಳು ಸೇರಿದಂತೆ ಅಪರೂಪದ ಪ್ರಾಣಿಗಳು ಸೇರಿವೆ. ಈ ಪ್ರಾಣಿಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹಸ್ತಾಂತರಿಸಲಾಗಿದೆ.

ವನ್ಯಜೀವಿ (ಸಂರಕ್ಷಣೆ) ಕಾಯಿದೆ, 1972 ರಂತೆ ಕಾಡು ಪ್ರಾಣಿಗಳ ಆಮದು ನಿಷೇಧಿಸಲಾಗಿದೆ. ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯವರ್ಗದ ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶ (ಸಿಐಟಿಇಎಸ್) ಪ್ರಕಾರ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳು ಮತ್ತು ಸಸ್ಯಗಳನ್ನು ಆಮದು ನಿಷೇಧಿಸಲಾಗಿದೆ.

ಪ್ರಾಣಿಗಳನ್ನು ಕರ್ನಾಟಕ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಸುರಕ್ಷಿತವಾಗಿವೆ ಎಂದು ತಿಳಿದುಬಂದಿದೆ. ಶಂಕಿತರ ವಿಚಾರಣೆಯ ನಂತರ, ಡಿಆರ್‌ಐ ತಂಡವು ಬೆಂಗಳೂರು ವ್ಯಾಪ್ತಿಯಲ್ಲಿರುವ ಫಾರ್ಮ್‌ಹೌಸ್‌ನ ಮೇಲೆ ದಾಳಿ ನಡೆಸಿತು. ದಾಳಿಯಲ್ಲಿ 48 ವಿವಿಧ ಜಾತಿಗಳಿಗೆ ಸೇರಿದ 139 ಪ್ರಾಣಿಗಳನ್ನು ಪತ್ತೆಹಚ್ಚಿದೆ, ಇದರಲ್ಲಿ 34 ಸಿಐಟಿಇಎಸ್ ಪಟ್ಟಿ ಮಾಡಿದ ಪ್ರಾಣಿಗಳನ್ನು ವಿದೇಶದಿಂದ ಕಳ್ಳಸಾಗಣೆ ಮಾಡಲಾಗಿದೆ.

English summary
Bengaluru Directorate of Revenue Intelligence arrested seven persons for illegal wildlife trafficking at the Kempegowda International Airport. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X